ಸೆಲೆಬ್ರಿಟಿಗಳನ್ನು, ರಾಜಕಾರಣಿಗಳನ್ನು ಹಾಗೂ ಅಭಿಮಾನಿಗಳನ್ನು ಸುಲಭವಾಗಿ ಒಂದು ಸೇರಿಸುವ ಸಾಮಾಜಿಕ ಜಾಲತಾಣ ಟ್ವಿಟರ್. ಟ್ವಿಟರ್ನಲ್ಲಿ ದಿನಕ್ಕೊಂದು ಹ್ಯಾಷ್ಟ್ಯಾಗ್ ಟ್ರೆಂಡ್ ನಡೆಯುತ್ತಿರುತ್ತದೆ. ನಟರ ಹುಟ್ಟಿದ ದಿನಗಳು, ರಾಜಕೀಯ ವ್ಯಕ್ತಿಗಳು ಸಾಮಾಜಿಕ ಸಮಸ್ಯೆಗಳು ಹ್ಯಾಷ್ಟ್ಯಾಗ್ ಮೂಲಕ ಟಭಿಮಾನಿಗಳು, ನೆಟ್ಟಿಗರು ಟ್ರೆಂಡ್ ಮಾಡುತ್ತಿರುತ್ತಾರೆ.
ಟ್ವಿಟರ್ನಲ್ಲಿ ಇಂದು ಟ್ರೆಂಡ್ ಆಗಿರುವುದು ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳ ಹೊರಟಿರುವ ತಮಿಳು ನಟ ಸೂರ್ಯರ ಹುಟ್ಟಿದಹಬ್ಬ. ಕಳೆದ ಕೆಲವು ದಿನಗಳಿಂದ ಸೂರ್ಯ ಅಭಿಮಾನಿಗಳು ಈ ದಿನಕ್ಕಾಗಿ ಕಾಯುತ್ತಿದ್ದರು. #HappyBirthdaySuriya ಎಂಬ ಹ್ಯಾಷ್ಟ್ಯಾಗ್, ಸಂಜೆ ಎಂಟು ಗಂಟೆ ವೇಳೆಗೆ ಸುಮಾರು 14 ಲಕ್ಷ ಬಾರಿ ಟ್ವೀಟ್ ಆಗಿದೆ. ಅದರೊಂದಿಗೆ ಇನ್ನೇನು ಬಿಡುಗಡೆಯಾಗಲಿರುವ ಮಾಜಿ ವಾಯುಸೇನೆ ಅಧಿಕಾರಿ, ಕನ್ನಡಿಗ ಜಿ ಆರ್ ಗೋಪಿನಾಥ್ ರ ಸುತ್ತ ಹೆಣೆದಿರುವ ಸೂರ್ಯರ ಹೊಸ ಸಿನೆಮಾ, ಸೂರರೈ ಪೋಟ್ರು #SooraraiPottru ಕೂಡಾ ಟ್ರೆಂಡ್ ಆಗುತ್ತಿದೆ. ಈ ಹ್ಯಾಷ್ಟ್ಯಾಗನ್ನು ಸುಮಾರು 12.5 ಲಕ್ಷ ಮಂದಿ ಬಳಸಿಕೊಂಡಿದ್ದಾರೆ. ಕನ್ನಡಿಗನ ನೈಜ ಜೀವನ ಕಥೆಯಾಧಾರಿತ ಈ ಸಿನೆಮಾದ ಬಿಡುಗಡೆಗಾಗಿ ಗಾಗಿ ತಮಿಳುನಾಡು, ಕರ್ನಾಟಕ ಸೇರಿದಂತೆ ಸೂರ್ಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Most Loved Actor Allover the South India #HappyBirthdaySuriya@Suriya_offl #SooraraiPottru pic.twitter.com/8LG4DCDIfM
— Suriya Fans Trends ™ (@Suriya_Trends) July 22, 2020
ಇನ್ನು ಹಲವು ದಿನಗಲಿಂದ ನಿರಂತರವಾಗಿ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದ್ದ ಹಿಂದಿ ಚಿತ್ರರಂಗದ ದಿವಂಗತ ನಟ ಸುಶಾಂತ್ ಸಿಂಗ್ ಕೂಡಾ ಇಂದು ಟ್ರೆಂಡ್ನಲ್ಲಿದ್ದಾರೆ. ಪ್ರತಿಭಾನ್ವಿತ ನಟನ ಅಸಹಜ ಸಾವು ಅವರ ಅಭಿಮಾನಿ ಬಳಗವನ್ನು ಸೇರಿದಂತೆ, ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿತ್ತು. ಈ ಅಸಹಜ ಸಾವಿನ ಹಿಂದೆ ಬಾಲಿವುಡ್ ಪಟ್ಟಭದ್ರಾ ಹಿತಾಸಕ್ತಿ ಇದೆ ಎಂದು ಅನುಮಾನಗಳು ಎದ್ದಿದ್ದು. ಅವರ ಅಭಿಮಾನಿಗಳು ಸುಶಾಂತ್ ಸಾವಿನ ಕುರಿತು ಸಿಬಿಐ ತನಿಖೆಯಾಗಬೇಕೆಂದು ಟ್ವೀಟ್ ಮೂಲಕ ಆಗ್ರಹಿಸಿದ್ದರು. ಇಂದು #Candle4SSR ಎಂಬ ಹ್ಯಾಷ್ಟ್ಯಾಗ್ ಮೂಲಕ ದಿವಂಗತ ಸುಶಾಂತ್ ರಿಗೆ ದಿಜಿಟಲ್ ಆಶ್ರುತರ್ಪಣ ಸಲ್ಲಿಸಿದ್ದಾರೆ.
My Daughter Also wants Justice For SSR@republic#Candle4SSR pic.twitter.com/R4LfQe02Jy
— Ravi Tiwari Bihari (@iRaviTiwari) July 22, 2020
ಇದರೊಂದಿಗೆ ಐಎಎಸ್ ಅಧಿಕಾರಿಯೊಬ್ಬರೂ ಟ್ವಿಟರ್ ಟ್ರೆಂಡಿಂಗ್ನಲ್ಲಿದ್ದಾರೆ. IAS Turned Actor ಎಂಬ ಟ್ವೀಟ್ ಮೂಲಕ ಅಭಿಷೇಕ್ ಸಿಂಗ್ ಎಂಬ ಅಧಿಕಾರಿ ಟ್ರೆಂಡ್ ಆಗುತ್ತಿದ್ದಾರೆ. ದಿಲ್ ತೋಡ್ ಕೆ ಎಂಬ ಸಿನೆಮಾ ಮೂಲಕ ಸಿನಿ ಜೀವನದಲ್ಲಿ ಪಾದವೂರಲು ಹೊರಟಿರುವ ಈ ಅಧಿಕಾರಿಗೆ ನೆಟ್ಟಿಗರು ಬೆಂಬಲ ಸೂಚಿಸುತ್ತಿದ್ದಾರೆ.
.@Abhishek_asitis is killing it on screen even though being a fresh face .. his music video “Dil Tod Le” was loved by all !! Hoping to see him in his acting debut really soon !! IAS Turned Actor https://t.co/XkG3gf0DsK
— Pooja (@RazziliciousR_1) July 22, 2020