ಇಡೀ ದೇಶದಲ್ಲೇ ಕಾಫಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಪುಟ್ಟ ಜಿಲ್ಲೆ ಕೊಡಗು ಕರೋನ ಭೀತಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯ ಮುಖ್ಯ ಬೆಳೆ ಕಾಫಿ, ಅಂದ ಹಾಗೆ ದೇಶದ ಒಟ್ಟು ಕಾಫಿ ಉತ್ಪಾದನೆಯ ಶೇಕಡಾ 30 ರಷ್ಟು ಕೊಡುಗೆ ಈ ಪುಟ್ಟ ಜಿಲ್ಲೆಯದ್ದು ಎನ್ನುವುದು ಜಿಲ್ಲೆಯ ಹೆಗ್ಗಳಿಕೆ. ಕಳೆದ ಎರಡು ವರ್ಷಗಳಿಂದ ಭೂ ಕುಸಿತ ಮತ್ತು ತೀವ್ರ ಮಳೆಗೆ ಸಿಲುಕಿ ಕೊಡಗಿನ ಕಾಫಿ ಬೆಳೆಗಾರ ಹೈರಾಣಾಗಿದ್ದಾನೆ.
ಕಾಫಿ ಕೃಷಿ ಅಪಾರ ಮಾನವ ಸಂಪನ್ಮೂಲ ಬೇಡುವ ಬೆಳೆ ಅಗಿದ್ದು ತೋಟಗಳಲ್ಲಿ ವರ್ಷವಿಡೀ ಕೆಲಸವಿದ್ದೇ ಇರುತ್ತದೆ. ಕಾಫಿಯ ಬೆಲೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯನ್ನೇ ಸಂಪೂರ್ಣ ಅವಲಂಬಿಸಿರುವುದರಿಂದ ಬೆಲೆಗಳಲ್ಲಿ ಏರು ಪೇರು ಇದ್ದಿದ್ದೇ. ಅದರೆ ಇಂದು ತೋಟವೊಂದರ ನಿರ್ವಹಣಾ ವೆಚ್ಚವು ಮಿತಿ ಮೀರಿ ಏರಿಕೆ ದಾಖಲಿಸಿದ್ದು ಕಾಫಿಯ ಬೆಲೆ ಮಾತ್ರ ಅಷ್ಟೇ ಇದೆ. ಇದು ತೋಟಗಳನ್ನೇ ಮಾರಾಟ ಮಾಡಬೇಕಾದ ಪರಿಸ್ಥಿತಿಗೆ ತಂದಿಟ್ಟಿದೆ.ಬೆಳೆಗಾರರು ಕಾಫಿಯ ಜತೆಗೇ ಕಾಳು ಮೆಣಸು, ಕಿತ್ತಲೆ, ಬೆಳೆದುಕೊಳ್ಳುವುದರಿಂದ ಹೇಗೋ ಕಷ್ಟದಲ್ಲಿ ತೋಟಗಳ ನಿರ್ವಹಣೆ ಅಗುತ್ತಿದೆ. ಅದರೆ ಕರೋನ ಮಹಾ ಮಾರಿಯ ಕಾರಣದಿಂದ ಜಿಲ್ಲೆಯಲ್ಲಿ ತೋಟ ಕಾರ್ಮಿಕರು ಸಿಗುವುದು ಕಷ್ಟವಾಗಿದೆ.
ತೋಟಗಳಲ್ಲಿ ಕೆಲಸ ನಿವ೯ಹಿಸುತ್ತಿದ್ದ ಸಾವಿರಾರು ಕಾಮಿ೯ಕರಿಗೂ ಲಾಕ್ ಡೌನ್ ಬಿಸಿ ತೀವ್ರವಾಗಿಯೇ ತಟ್ಟಿದೆ. ಕಾಫಿ ತೋಟಗಳಿಗೆ ಸರಾಸರಿ ಶೇ. 60 ರಷ್ಟು ವಲಸೆ ಕಾಮಿ೯ಕರ ಅಗತ್ಯ ಇದ್ದೇ ಇದೆ. ಅಕ್ಟೋಬರ್ ಮಧ್ಯಭಾಗದಲ್ಲಿ ಕೊಡಗಿಗೆ ಬರುವ ಹೊರರಾಜ್ಯದ ಕಾಮಿ೯ಕರು ಕಾಫಿ, ಕರಿಮೆಣಸು ಕೆಲಸ ಮುಗಿಸಿ ಏಪ್ರಿಲ್ ಮೊದಲ ವಾರದಲ್ಲಿ ತಮ್ಮೂರಿಗೆ ತೆರಳುತ್ತಿದ್ದರು. ಆದರೆ ಈ ವಷ೯ ಲಾಕ್ ಡೌನ್ ನಿಂದಾಗಿ ತಮ್ಮೂರಿಗೆ ಹೋಗಲಾಗದೇ ಕೊಡಗಿನಲ್ಲಿಯೇ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾಮಿ೯ಕರು ನೆಲೆಸುವಂತಾಗಿದೆ. ಎಷ್ಟೇ ಕಷ್ಟವಾಗಿದ್ದರೂ ಬೆಳೆಗಾರರು ತಮ್ಮ ತೋಟದಲ್ಲಿ ಕೆಲಸ ನಿವ೯ಹಿಸಿದ ಕಾಮಿ೯ಕರ ಹಿತಕಾಯುತ್ತಿದ್ದಾರೆ ಎಂದು ಕಾಫಿ ಉದ್ಯಮ ವಿಶ್ಲೇಷಕ ಕೆ.ಕೆ.ವಿಶ್ವನಾಥ್ ಹೇಳುತ್ತಾರೆ.
ಕೊಡಗಿನ ಶೇ. 60 ರಷ್ಟು ತೋಟಗಳಲ್ಲಿ ವಲಸೆ ಕಾಮಿ೯ಕರಿದ್ದಾರೆ. ದೂರದ ತಮ್ಮೂರಿಗೆ ಹೋಗಲೂ ಆಗದೆ ಕಳೆದ ಕೆಲವು ತಿಂಗಳಿನಲ್ಲಿ ದುಡಿದ ಲಕ್ಷಗಟ್ಟಲೆ ಹಣವನ್ನು ತಮ್ಮ ಬಳಿಯೇ ಜೋಪಾನವಾಗಿರಿಸಿಕೊಂಡು ಈ ಕಾಮಿ೯ಕ ಕುಟುಂಬಗಳು ಮಾನಸಿಕವಾಗಿ ತಳಮಳದಲ್ಲಿವೆ. ಕೊಡಗಿನಎಲ್ಲಾ ಗಡಿಗಳೂ ಬಂದ್ ಆಗಿದ್ದು ಮಾತ್ರವಲ್ಲದೇ ಕನಾ೯ಟಕದಿಂದ ಹೊರರಾಜ್ಯಗಳಿಗೆ ತೆರಳಬೇಕಾದ ಗಡಿಗಳೂ ಮುಚ್ಚಲ್ಪಟ್ಟಿರುವುದರಿಂದಾಗಿ ಸದ್ಯಕ್ಕೆ ಊರಿಗೆ ಹೋಗಲು ಸಾಧ್ಯವಿಲ್ಲ ಎಂಬುದು ಈ ಕಾಮಿ೯ಕ ವಗ೯ಕ್ಕೆ ಮನದಟ್ಟಾಗಿದೆ. ತಮಿಳುನಾಡಿನಿಂದ ಕರಿಮೆಣಸು ಕೊಯ್ಲಿಗೆ ಬಂದಿದ್ದ ಕಾಮಿ೯ಕರು ಹಲವು ತೋಟಗಳಲ್ಲಿ ಮರ ಕಪಾತು ಕೂಡ ಮಾಡುತ್ತಾ ಕೆಲಸ ಕಂಡುಕೊಂಡಿದ್ದಾರೆ.

ಈ ವಷ೯ ಕೊಡಗಿನಲ್ಲಿ ಕಾಫಿ, ಕರಿಮೆಣಸು ಕೆಲಸಗಳು ಸುಮಾರು 15 ದಿನಗಳಷ್ಟು ವಿಳಂಭವಾಗಿದೆ. ಹೀಗಾಗಿಯೇ ಈ ಕಾಮಿ೯ಕರು ಇಲ್ಲಿ ಸಿಲುಕುವುಂತಾಗಿದೆ ಎಂದು ಹೇಳಿದ ಕೆ.ಕೆ.ವಿಶ್ವನಾಥ್, ಭಾರತದಲ್ಲಿ ದಿನವೊಂದಕ್ಕೆ 3.25 ಲಕ್ಷ ಕಾಮಿ೯ಕರು ಕಾಫಿ ವಲಯದಲ್ಲಿ ಕಾಯ೯ನಿವ೯ಹಿಸುತ್ತಾರೆ. ಈ ಎಲ್ಲಾ ಕಾಮಿ೯ಕರೂ ಲಾಕ್ ಡೌನ್ ನಿಂದಾಗಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ವಿಶ್ಲೇಷಿಸಿದರು.ತಾವು ಕೆಲಸಕ್ಕಾಗಿ ಬಂದಿದ್ದ ತೋಟದಲ್ಲಿ ಕೆಲಸ ಮುಗಿದರೂ ಬೇರೊಂದು ತೋಟದಲ್ಲಿ ಕೆಲಸ ಸಿಕ್ಕಿದರೂ ಅಲ್ಲಿಗೆ ಹೋಗಲು ಸೂಕ್ತ ವಾಹನಗಳಿಲ್ಲದೇ ನಿಭ೯ಂಧ ಇರುವುದರಿಂದಾಗಿ ಅಲ್ಲಲ್ಲಿಯೇ ಕಾಮಿ೯ಕ ವಗ೯ ಇರುವಂತಾಗಿದೆ. ಇಂಥ ವಿಚಿತ್ರ ಸ್ಥಿತಿಯನ್ನು ಕಾಫಿ ಉದ್ಯಮ ಇದೇ ಮೊದಲ ಬಾರಿಗೆಎದುರಿಸುತ್ತಿದೆ. ಫಸಲೂ ಇಲ್ಲ ಬೆಲೆಯೂ ಇಲ್ಲದ ಸ್ಥಿತಿಯಲ್ಲಿ ತೋಟಕಾಮಿ೯ಕರಿಗೆ ತಮ್ಮ ನೆಲದಲ್ಲಿ ದುಡಿಯುವ ಕಾಮಿ೯ಕ ವಗ೯ದ ಹಿತಕಾಯುವ ಹೊಣೆಗಾರಿಕೆ ಇದ್ದೇ ಇದೆ ಎಂದೂ ವಿಶ್ವನಾಥ್ ಅಭಿಪ್ರಾಯಪಟ್ಟರು.
ತೋಟಕಾಮಿ೯ಕರ ಸಮಸ್ಯೆ ಒಂದೆಡೆಯಾದರೆ ಲೋಡಿಂಗ್ ಕಾಮಿ೯ಕರು, ಆಸ್ಪತ್ರೆಗಳಲ್ಲಿ ದಿನಗೂಲಿನಿವ೯ಹಿಸುವ ಅಸಂಘಟಿತ ವಲಯಕ್ಕೆ ಸೇರಿದ ಕಾಮಿ೯ಕರ ಸಮಸ್ಯೆ ಹಲವಾರಿದೆ. ಗ್ರಾಮೀಣ ಪ್ರದೇಶಗಳಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಿನಗೂಲಿ ಆಧಾರದ ಮೇಲೆ ಕೆಲಸ ನಿವ೯ಹಿಸುವ ಕಾಮಿ೯ಕರು ಬಸ್ ಸಂಚಾರವಿಲ್ದೇ ದುಬಾರಿ ದರ ನೀಡಿ ಆಟೋಗಳಲ್ಲಿ ಕೆಲಸದ ಸ್ಥಳ ತಲುಪುತ್ತಿದ್ದಾರೆ. ದಿನಕ್ಕೆ 200 ರು. ಸಿಕ್ಕಿದರೆ ಅದು ವಾಹನ ಬಾಡಿಗೆಗೇ ಸಾಕು ಎಂಬಂತಾಗಿದೆ.ಕೆಲಸಕ್ಕೆ ಹೋಗದಿದ್ದರೆ ಕೆಲಸದಿಂದ ತೆಗೆದುಹಾಕುತ್ತಾರೆ ಎಂಬ ಭಯದಿಂದ ಆಥಿ೯ಕ ಸಂಕಷ್ಟದಲ್ಲಿಯೂ ಕೆಲಸಕ್ಕೆ ತೆರಳುತ್ತಿರುವ ಪ್ರಕರಣ ಹಲವಾರು ಇದೆ ಎಂದು ಕೊಡಗು ಕಾಮಿ೯ಕ ಸಂಘಟನೆಯ ಅಧ್ಯಕ್ಷ ಪಿ.ಆರ್.ಭರತ್ ಕಾಮಿ೯ಕರ ಸಮಸ್ಯೆ ಹೇಳಿಕೊಂಡರು.
ಕಟ್ಟಡ ಕಾಮಿ೯ಕರಿಗೇನೋ ಸಕಾ೯ರ ಮಾಸಿಕ 2 ಸಾವಿರ ರು. ಸಹಾಯಧನ ನೀಡುತ್ತೇವೆ ಎಂದಿದೆ. ಕಂಪನಿಗಳ ಕಾಫಿ ತೋಟಗಳ ಕಾಮಿ೯ಕರಿಗೂ ಸಮಸ್ಯೆಯಿಲ್ಲ. ಆದರೆ, ಸಣ್ಣ ಮತ್ತು ಮಧ್ಯಮ ಹಿಡುವಳಿಯಲ್ಲಿ ಕಾಮಿ೯ಕರಾಗಿರುವವರಿಗೆ ಸಮಸ್ಯೆ ಮುಗಿಯುತ್ತಿಲ್ಲ. ಸಣ್ಣ ಬೆಳೆಗಾರರೇ ಕಷ್ಟದಲ್ಲಿರುವಾಗ ಕಾಮಿ೯ಕರನ್ನೂ ಲಾಕ್ ಡೌನ್ ಸಂದಭ೯ ನೋಡಿಕೊಳ್ಳಬೇಕಾದ ಸ್ಥಿತಿಯಿದೆ. ಸುಮಾರು 50 ಸಾವಿರ ತೋಟಕಾಮಿ೯ಕರು ಲಾಕ್ ಡೌನ್ ನಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದೂ ಭರತ್ ಮಾಹಿತಿ ನೀಡಿದರು.ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಹಾಗೂ ಹೋಂಸ್ಟೇಗಳಲ್ಲಿ ನೂರಾರು ಕಾಮಿ೯ಕರು ಮನೆಕೆಲಸ ಮಾಡಿಕೊಂಡಿದ್ದರು, ಸೋಂಕು ಹರಡುತ್ತೆ ಎಂದು ಬಹುತೇಕ ಮಂದಿ ಮನೆಕೆಲಸದವರಿಗೆ ಕೆಲಸ ನೀಡಿಲ್ಲ.
ಇಂಥ ಕಾಮಿ೯ಕರ ಸಂಕಷ್ಟ ಯಾರ ಬಳಿ ಹೇಳೋದು ಎಂದು ಪ್ರಶ್ನಿಸಿದ ಭರತ್, ಸಕಾ೯ರ ಅಕ್ಕಿ, ಗೋಧಿ ನೀಡಿದರೆ ಅದು ಎಲ್ಲಿಗೆ ಸಾಕು? ಅಡುಗೆ ತಯಾರಿಕೆಗೆ ಬೇಕಾದ ಮಸಾಲೆ ಪದಾಥ೯ಗಳಿಗೆ ದುಬಾರಿ ಬೆಲೆ ತೆರಬೇಕಾಗಿದೆ. ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಸಕಾ೯ರ ಉಚಿತವಾಗಿ ನೀಡುವ ಹಾಲು ವಿತರಣೆಯಾಗುತ್ತಿಲ್ಲ. ಕಾಮಿ೯ಕರು ಹೇಗೆ ಸಂಕಷ್ಟ ಪರಿಸ್ಥಿತಿ ನಿಭಾಯಿಸಬೇಕೆಂದು ಭರತ್ ಪ್ರಶ್ನಿಸಿದರು.ಕಾಮಿ೯ಕರನ್ನು ತೋಟಗಳಿಗೆ ಕೊಂಡೊಯ್ಯುತ್ತಿದ್ದ ಬಾಡಿಗೆ ಜೀಪ್ , ವ್ಯಾನ್, ಆಟೋಗಳೂ ರಸ್ತೆಗಿಳಿಯುತ್ತಿಲ್ಲ. ಮಳೆಗಾಲ ಎದುರಿಸಲು ಸಜ್ಜಾಗುತ್ತಿರುವ ತೋಟ ಮಾಲೀಕರು ಯಾವ ಕೆಲಸ ನೀಡುವುದು ಎಂಬ ಚಿಂತೆಯಲ್ಲಿದ್ದಾರೆ. ತೋಟ ಕಾಮಿ೯ಕರನ್ನು ಕೆಲಸ ಮುಗಿಯಿತು ನೀವು ಹೋಗಿ ಎಂದರೆ ಎಲ್ಲಿಗೆ ಮತ್ತು ಹೇಗೆ ಹೋಗೋಣ. ನೀವೇ ಆಶ್ರಯದಾತರು ಎಂಬ ಉತ್ತರ ಬರುತ್ತಿದೆ. ಕರೋನದಿಂದಾಗಿ ಬೆಳೆಗಾರರು ಮತ್ತು ಕಾರ್ಮಿಕರು ಎರಡೂ ವರ್ಗದವರು ಇಲ್ಲಿ ಬಿಸಿ ಬಾಣಲೆಯಲ್ಲಿ ಬಿದ್ದಂತಾಗಿದೆ. ಈ ಕೆಟ್ಟ ದಿನಗಳು ಹೋಗಿ ಒಳ್ಳೆ ದಿನಗಳು ಬೇಗನೆ ಬರಲಿ ಎಂದು ಆಶಿಸೋಣ.