• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕಡೆಯ ಅವಕಾಶವನ್ನೂ ಕಳೆದುಕೊಂಡ ರಜನಿಕಾಂತ್

by
December 30, 2020
in ದೇಶ
0
ಕಡೆಯ ಅವಕಾಶವನ್ನೂ ಕಳೆದುಕೊಂಡ ರಜನಿಕಾಂತ್
Share on WhatsAppShare on FacebookShare on Telegram

ಚಿತ್ರನಟರಾಗಿ ರಜನಿಕಾಂತ್ ಮೊದಲು ನಟನೆಗೆ ಒತ್ತು ನೀಡಿದ್ದರು. ಆದರೆ ಕ್ರಮೇಣ ಅವರು ನಟನೆಗಿಂತ ‘ಸ್ಟೈಲ್’ಗೆ ಹೆಚ್ಚು ಆದ್ಯತೆ ನೀಡಿದರು. ಅವರ ಈ ‘ಬದಲಾವಣೆ’ಗೆ ಮೊದಲು ಮಾನ್ಯತೆ ಸಿಕ್ಕಿತಾದರೂ ನಂತರದಲ್ಲಿ ಜನಮನ್ನಣೆ ಗಳಿಸಲಿಲ್ಲ. ಇದು ರಜನಿಕಾಂತ್ ಸಿನಿಜಗತ್ತಿನ ಸ್ಥಿತ್ಯಂತರದ ಸಂಕ್ಷಿಪ್ತ ವಿವರ. ಕ್ರಮೇಣ ಅವರು ರಾಜಕಾರಣ ಪ್ರವೇಶ ಮಾಡುತ್ತಾರೆ ಎಂಬ ವದಂತಿ ಆಗಾಗ ಹಬ್ಬುತ್ತಿತ್ತು. ರಜನಿಕಾಂತ್ ಕೆಲವೊಮ್ಮೆ ಮೌನವಾಗಿ, ಕೆಲವೊಮ್ಮೆ ರಾಜಕೀಯ ಪ್ರವೇಶ ನಿರಾಕರಿಸುವ ಮೂಲಕ ಚರ್ಚೆಯನ್ನು ಜೀವಂತವಾಗಿ ಉಳಿಸಿದ್ದರು. ಇತ್ತೀಚೆಗೆ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಇದೇ ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷದ ರೂಪುರೇಷೆಯನ್ನು ಪ್ರಕಟಿಸುವುದಾಗಿ ತಿಳಿಸಿದ್ದರು. ಈಗ ‘ಪ್ರವೇಶಕ್ಕೂ ಮುನ್ನವೇ ರಾಜಕೀಯಕ್ಕೆ ವಿದಾಯ’ ಘೋಷಿಸಿದ್ದಾರೆ.

ADVERTISEMENT

ಅಳೆದು ತೂಗಿ ರಾಜಕೀಯ ಅಖಾಡಕ್ಕಿಳಿದಿದ್ದ ರಜನಿಕಾಂತ್ ಆರಂಭದಲ್ಲೇ ಸೋತಿದ್ದರು. ಅವರ ಸೋಲು ಇರುವುದು ಹಿಂಜರಿಕೆಯ ಗುಣದಿಂದ. ರಾಜಕಾರಣಿಗೆ ಇರಬೇಕಾದ ಮುನ್ನುಗ್ಗುವ ಗುಣ ಅವರಲ್ಲಿ ಎಂದೂ ಕಂಡುಬರಲಿಲ್ಲ. ಸಿನಿಮಾ ನಟರಾಗಿಯೂ ಅವರು ಇದೇ ರೀತಿ ಸದಾ ‘ಸೇಫ್ ಝೋನ್’ನಲ್ಲಿ ಇದ್ದವರು. ತಮ್ಮ ಸಮಕಾಲೀನ ನಟ ಕಮಲ್ ಹಸನ್ ಅವರಂತೆ ರಜನಿಕಾಂತ್ ಎಂದೂ ತಮ್ಮ ಸಿನಿಮಾಗಳಲ್ಲಿ, ನಟನೆಯಲ್ಲಿ ಪ್ರಯೋಗ ಮಾಡಿದವರಲ್ಲ. ಮೂಲ ವೃತ್ತಿಯಲ್ಲೇ ಪ್ರಯೋಗ ಮಾಡದ ರಜನಿಕಾಂತ್ ರಾಜಕಾರಣದಲ್ಲಿ ಪ್ರಯೋಗ ಮಾಡುತ್ತೇನೆ ಎಂದಿದ್ದರು. ‘ಆದ್ಮತ್ಮದ ರಾಜಕಾರಣ’ ಮಾಡುತ್ತೇನೆ ಎಂದಿದ್ದರು. ಆದರೆ ಮಾಡಿದ್ದು ಮಾತ್ರ ಪಲಾಯನವಾದ.

ಎರಡನೇ ಸೋಲು ಕಾಣುತ್ತಿರುವುದು ಅವರು ಮಾಡಲೊರಟ ಪ್ರಯೋಗದ ವಿಷಯದಲ್ಲಿ. ಇಡೀ ದೇಶದಲ್ಲಿ ಅತಿಹೆಚ್ಚು ಚುನಾವಣಾ ಭ್ರಷ್ಟಾಚಾರ ನಡೆಯುವ ರಾಜ್ಯಗಳ ಪೈಕಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಜೊತೆಗೆ ದೇವರ ಅಸ್ತಿತ್ವವನ್ನೇ ನಿರಾಕರಿಸುವ ಪೆರಿಯಾರ್ ಹುಟ್ಟುಹಾಕಿದ ದ್ರಾವಿಡ ಸಂಸ್ಕೃತಿ ಇನ್ನೂ ಢಾಳವಾಗಿದೆ. ಇನ್ನೊಂದೆಡೆ ಅತಿಹೆಚ್ಚು ದೇವಸ್ಥಾನಗಳನ್ನು ಹೊಂದಿರುವ ತಮಿಳುನಾಡು ಅದರದೇಯಾದ ಭಕ್ತಿ ಪರಂಪರೆಯನ್ನೂ ಹೊಂದಿದೆ. ಇಂಥ ವಿಶಿಷ್ಟ ನೆಲದಲ್ಲಿ ರಜನಿಕಾಂತ್ ‘ಆದ್ಯಾತ್ಮದ ರಾಜಕಾರಣ’ ಮಾಡುತ್ತೇನೆ ಎಂದಿದ್ದರು. ಇದು ಯಾವ ರೀತಿಯಿಂದಲೂ ಪ್ರಯೋಗ ಮಾಡಲು ಸೂಕ್ತ ವಿಷಯವಾಗಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಜನಿ ಎಂಬ ಗೊಂದಲದ ಗೂಡು

ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದರಿಂದ ವಿದಾಯ ಹೇಳುವವರಗೆ ರಜನಿಕಾಂತ್ ಹಲವು ವಿರೋಧಾಭಾಸಗಳನ್ನು ಸೃಷ್ಟಿಸಿದ್ದಾರೆ. ರಾಜಕಾರಣಿಗಳು ರಾಜಕೀಯ ಮಾಡಲೆಂದು ಕೆಲವೊಮ್ಮೆ ಗೊಂದಲ ಸೃಷ್ಟಿಸುವುದುಂಟು. ಹಾಗೆ ಮಾಡಿದಾಗ ಇಂತಹ ‘ಉದ್ದೇಶಪೂರಿತ ಗೊಂದಲಗಳಿಂದ’ ಹೊರಬರುವುದು ಹೇಗೆಂದು ಅವರಿಗೆ ಗೊತ್ತಿರುತ್ತದೆ. ಆದರೆ ಈ ‘ಕಲೆ’ ಕಲಾವಿದರಾದ ರಜನಿಕಾಂತ್ ಅವರಿಗೆ ಸಿದ್ಧಿಸಿಲ್ಲ ಎಂಬುದು ಅವರ ನಡೆಗಳಿಂದ ವೇದ್ಯವಾಗುತ್ತದೆ. ‘ಮಕ್ಕಳ ಮಂದ್ರಮ್’ ಪಕ್ಷ ಕಟ್ಟಿದ ಅವರು ಅದರ ಮೂಲಕ ಭಿನ್ನ ರಾಜಕಾರಣ ಮಾಡುತ್ತೇನೆ ಎಂದರು. ತಾನು ಚುನಾವಣೆಗೆ ನಿಲ್ಲದೆ, ಗದ್ದುಗೆ ಹಿಡಿಯದೆ ಬದಲಾವಣೆ ತರುತ್ತೇನೆ ಎಂದರು. ವಾಸ್ತವವಾಗಿ ಚುನಾವಣೆಗೆ ಸ್ಪರ್ಧೆಯನ್ನೇ ಮಾಡದೆ ಪಕ್ಷವನ್ನು ಅಧಿಕಾರಕ್ಕೆ ತರುವ ವಿಷಯದಲ್ಲೇ ಅವರಿಗೆ ಹಲವು ಗೊಂದಲಗಳಿದ್ದವು. ‘ತಾನು ಸೋತರೇ?’ ಎಂಬ ಭಯ ಇತ್ತು. ಅದು ಏಕಕಾಲಕ್ಕೆ ಗೆಲುವಿನ ಬಗ್ಗೆ ಇದ್ದ ಗೊಂದಲವೂ ಆಗಿತ್ತು. ಅದನ್ನು ಸಂಶಯ ಎಂತಲೂ ವ್ಯಾಖ್ಯಾನಿಸಬಹುದು.

ಇದಲ್ಲದೆ ತಾವು ರಾಜಕೀಯ ಪ್ರವೇಶ ಮಾಡುವ ಬಗ್ಗೆ, ತಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ, ಬದಲಾವಣೆ ತರುವ ಬಗ್ಗೆ ಹಲವು ಬಾರಿ ಮಾತನಾಡಿರುವ ರಜನಿಕಾಂತ್ ‘Now or Never’ (ಈಗಲ್ಲದಿದ್ದರೆ ಎಂದಿಗೂ ಸಾಧ್ಯವಿಲ್ಲ) ಎಂದು ಹೇಳುತ್ತಿದ್ದರು. ಅದನ್ನವರು ಹೇಳುತ್ತಿದ್ದುದು ‘ಈಗ ಸಾಧಿಸಿಯೇ ತೀರುತ್ತೇನೆ’ ಎಂಬ ಅರ್ಥದಲ್ಲಿ. ಆದರೀಗ ಅದಕ್ಕೆ ವ್ಯತಿರಿಕ್ತವಾಗಿ ‘ಈಗಲೂ ಇಲ್ಲ, ಮುಂದೆಯೂ ಮಾಡುವುದಿಲ್ಲ’ ಎಂದು ವಿಮುಖರಾಗಿದ್ದಾರೆ.

ರಾಜಕಾರಣ ಎಂಬುದು ಸಿನಿಮಾದಂಥಲ್ಲ. ಚಿತ್ರರಂಗದ ಒಂದೇ ಒಂದು ಸಿನಿಮಾ ಮತ್ತು ಡೈಲಾಗ್ ದಿನ ಬೆಳಗಾಗುವುದರಲ್ಲಿ ‘ಹೀರೋ’ ಅನ್ನು ಸೃಷ್ಟಿಮಾಡಿಬಿಡುತ್ತದೆ. ರಾಜಕಾರಣದಲ್ಲಿ ಗೆಲುವಿನ ಬೆಳೆ ಬೆಳೆಯಲು ಬೆವರು ಹರಿಸಲೇಬೇಕು. ರಜನಿಕಾಂತ್ ಈಗ ರಾಜಕೀಯದಿಂದ ದೂರ ಸರಿಯಲು ಆರೋಗ್ಯದ ನೆಪ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ವಯಸ್ಸಾಗಿಲ್ಲವಾ? ಅಥವಾ ಅವರ ಆರೋಗ್ಯ ಬಹಳ ಚೆನ್ನಾಗಿದೆಯಾ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಿವಿ ಕೇಳಿಸುವುದಿಲ್ಲ, ಆರೋಗ್ಯ ಸರಿ ಇಲ್ಲ ಎನ್ನಲಾಗುತ್ತದೆ. ಆದರೂ ಅವರು ಛಲಬಿಡದ ವಿಕ್ರಮನಂತೆ ಆಪರೇಷನ್ ಕಮಲ ಮಾಡಿಯಾದರೂ ಗದ್ದುಗೆ ಏರಲಿಲ್ಲವೇ? (ನೈತಿಕವಾಗಿ ಅದು ಸರಿಯಾದ ಕ್ರಮವೇ ಎಂಬುದು ಪ್ರತ್ಯೇಕ ಚರ್ಚಾರ್ಹ ವಿಷಯ) ಒರಿಯಾ ಭಾಷೆಯೇ ಗೊತ್ತಿಲ್ಲದೆ (ಈಗ ಸ್ವಲ್ಪ ಕಲಿತಿದ್ದಾರೆ) ನವೀನ್ ಪಾಟ್ನಾಯಕ್ ಒರಿಸ್ಸಾದ ಮುಖ್ಯಮಂತ್ರಿ ಆಗಿಲ್ಲವೇ? ರಾಜಕೀಯ ಮಾಡಲು ಬೇಕಿರುವುದು ಇಚ್ಛಾಶಕ್ತಿ. ಅದು ರಜನಿಕಾಂತ್ ಅವರಲ್ಲಿ ಹಿಂದೆಯೂ ಕಂಡಿರಲಿಲ್ಲ. ಈಗಲೂ ಕಾಣಸಿಗಲಿಲ್ಲ. ಹಾಗಾಗಿಯೇ ಅವರು ರಾಜಕೀಯ ಮಾಡಲು ಇದ್ದ ಕಡೆಯ ಅವಕಾಶವನ್ನೂ ಕೈಚೆಲ್ಲಿದ್ದಾರೆ.

Tags: rajinikanth to not join politics
Previous Post

ಗ್ರಾಮ ಪಂಚಾಯಿತಿ ಚುನಾವಣೆ: 3,440 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ

Next Post

ಭಾರತ-ಯುಕೆ ವಿಮಾನಯಾನ ರದ್ದು; ಜ.7 ರವರೆಗೆ ವಿಸ್ತರಣೆ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಭಾರತ-ಯುಕೆ ವಿಮಾನಯಾನ ರದ್ದು; ಜ.7 ರವರೆಗೆ ವಿಸ್ತರಣೆ

ಭಾರತ-ಯುಕೆ ವಿಮಾನಯಾನ ರದ್ದು; ಜ.7 ರವರೆಗೆ ವಿಸ್ತರಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada