• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಏಕಸ್ವಾಮ್ಯ ಮಾರುಕಟ್ಟೆಯತ್ತ ಜಿಯೋ: ಮುಂದಿನ ಅಪಾಯಕ್ಕೆ ಮುನ್ನುಡಿ ಬರೆಯಿತಾ ಸುಪ್ರೀಂ?

by
February 15, 2020
in ದೇಶ
0
ಏಕಸ್ವಾಮ್ಯ ಮಾರುಕಟ್ಟೆಯತ್ತ ಜಿಯೋ: ಮುಂದಿನ ಅಪಾಯಕ್ಕೆ ಮುನ್ನುಡಿ ಬರೆಯಿತಾ ಸುಪ್ರೀಂ?
Share on WhatsAppShare on FacebookShare on Telegram

ಭಾರತದ ಟೆಲಿಕಾಂ ಕಾರ್ಪೊರೇಟ್ ವಿಭಾಗ ಕಳೆದ ಒಂದು ದಶಕದ ಅವಧಿಯಲ್ಲಿ ಯಶಸ್ಸಿನ ಉಚ್ಛ್ರಾಯಕ್ಕೆ ಏರಿದಂತೆ, ಅಕ್ಷರಶಃ ಪಾತಾಳವನ್ನೂ ಮುಟ್ಟಿದೆ. ಯಾವ ಮಟ್ಟಿನ ಪಾತಾಳ ಎಂದರೆ ಕೆಲವು ಕಂಪೆನಿಗಳು ಮತ್ತೆ ಮೈಕೊಡವಿ ನಷ್ಟದಿಂದ ಮೇಲೇಳುವುದು ದುಸ್ಸಾಧ್ಯ ಎಂದೇ ಹೇಳಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ರಿಲಾಯನ್ಸ್ ಜಿಯೋ ಮತ್ತು ಭಾರತದ ಟೆಲಿಕಾಂ ಮಾರುಕಟ್ಟೆ ಏಕಸ್ವಾಮ್ಯದತ್ತ ಹೆಚ್ಚೆ ಹಾಕುತ್ತಿರುವ ಅಪಾಯಕಾರಿ ಬೆಳವಣಿಗೆ ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ.

ADVERTISEMENT

ಒಂದು ಕಾಲದಲ್ಲಿ ಟೆಲಿಕಾಂ ಕ್ಷೇತ್ರದ ದಿಗ್ಗಜರೆನಿಸಿಕೊಂಡಿದ್ದ ಭಾರ್ತಿ ಏರ್ಟೆಲ್, ವೋಡಾಫೋನ್ ಮತ್ತು ಐಡಿಯಾ ದಂತಹ ಕಂಪೆನಿಗಳು ಇಂದು ತಮ್ಮ ನಷ್ಟವನ್ನು ಭರಿಸಲಾಗದೆ ಮತ್ತೊಂದೆಡೆ ಸರ್ಕಾರಕ್ಕೆ ವಾರ್ಷಿಕ ಪರವಾನಗಿಗೆ ನೀಡಬೇಕಾದ ಹಣವನ್ನೂ ಪಾವತಿಸಲಾಗದೆ ಪರಿತಪಿಸುತ್ತಿವೆ. ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಐಡಿಯಾ ಮತ್ತು ವೊಡಾಪೋನ್ ಒಂದಾಗಿ ಕಾರ್ಯನಿರ್ವಹಿಸಲು ಮುಂದಾದರೂ ಪರಿಸ್ಥಿತಿ ಸುಧಾರಿಸಿಲ್ಲ.

ಪರಿಣಾಮ ಫೆ.14 ರಂದು ಟೆಲಿಕಾಂ ಕಂಪೆನಿಗಳಿಗೆ ತಪರಾಕಿ ಹಾಕಿರುವ ಸುಪ್ರೀಂ ಕೋರ್ಟ್ ಏರ್ಟೆಲ್, ವೊಡಾಪೋನ್ ಮತ್ತು ಐಡಿಯಾ ಕಂಪೆನಿಗಳು ಭಾರತದ ದೂರ ಸಂಪರ್ಕ ಇಲಾಖೆಗೆ ಸಲ್ಲಿಸಬೇಕಾಗಿರುವ 1.47 ಲಕ್ಷ ಕೋಟಿ ಎಜಿಆರ್ ಹಣವನ್ನೂ ಕೂಡಲೇ ಪಾವತಿಸಬೇಕು ಎಂದು ತಾಕೀತು ಮಾಡಿದೆ. ಆದರೆ, ನಷ್ಟದ ಸುಳಿಯಲ್ಲಿರುವ ಈ ಕಂಪೆನಿಗಳು ಈ ಮೊತ್ತದ ಹಣವನ್ನು ಪಾವತಿ ಮಾಡುವುದು ಅಸಾಧ್ಯವಾದ ಮಾತು ಎನ್ನುತ್ತಿದೆ ಭಾರತದ ಟೆಲಿಕಾಂ ವಲಯ. ತನ್ನ ಆದೇಶವನ್ನು ಪಾಲಿಸದಿದ್ದಕ್ಕೆ ಅಧಿಕಾರಿಗಳಿಗೆ ಚಾಟಿ ಬೀಸಿರುವ ಸುಪ್ರಿಂ ಕೋರ್ಟ್‌ ತನ್ನ ಆದೇಶ ಪಾಲಿಸದಿದ್ದರೆ, ಸುಪ್ರಿ ಕೋರ್ಟ್‌ಗೆ ಬೆಲೆ ಇಲ್ಲವೇ? ಸುಪ್ರಿಂ ಕೋರ್ಟ್‌ನ್ನು ಮುಚ್ಚಬೇಕೇ? ಎಂದು ಜಸ್ಟೀಸ್‌ ಅರುಣ್‌ ಮಿಶ್ರಾ ಪ್ರಶ್ನಿಸಿದ್ದಾರೆ

ಆಂಗ್ಲ ಅಂತರ್ಜಾಲ ತಾಣ Live Law ನಲ್ಲಿ ಜಸ್ಟೀಸ್‌ ಅರುಣ್‌ ಕುಮಾರ್‌ ಅವರ ಪ್ರತಿಕ್ರೀಯೆಯನ್ನು ದಾಖಲಿಸಿದ್ದಾರೆ.

“What is happening in this country ? All these companies haven’t even paid a single penny and your officer has the audacity to stay the order ? Does the Supreme Court have no value ? This is the outcome of money power!”, Justice Mishra said.

ಹಾಗಾದರೆ ಏನಿದು ತಕರಾರು? ಎಜಿಎಸ್ ಹಣ ಎಂದರೇನು? ಈ ಹಣವನ್ನು ಟೆಲಿಕಾಂ ಕಂಪೆನಿಗಳು ಬಾಕಿ ಉಳಿಸಿಕೊಳ್ಳಲು ಕಾರಣವೇನು? ಭಾರತದ ಟೆಲಿಕಾಂ ಕ್ಷೇತ್ರ ನಷ್ಟದಲ್ಲಿರಲು ಕಾರಣವೇನು? ಈ ನಷ್ಟಕ್ಕೂ ರಿಲಾಯನ್ಸ್ ಜಿಯೋಗೂ ಇರುವ ಸಂಬಂಧ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ಎಜಿಎಸ್ ಹಣ ಬಾಕಿ ತಕರಾರು?:

1994 ರಾಷ್ಟ್ರೀಯ ಟೆಲಿಕಾಂ ನೀತಿಯ ಅಡಿಯಲ್ಲಿ ದೂರ ಸಂಪರ್ಕ ವಲಯವನ್ನು ಉದಾರೀಕರಣಗೊಳಿಸಲಾಯಿತು. ಈ ಬೆಳವಣಿಗೆಯ ನಂತರ ಟೆಲಿಕಾಂ ಕಂಪೆನಿಗಳಿಗೆ ತರಂಗಾಂತರಗಳನ್ನು ಸ್ಥಿರ ಪರವಾನಗಿ ವಾರ್ಷಿಕ ಶುಲ್ಕಕ್ಕೆ ಮಾರಾಟ ಮಾಡುವ ಪರಿಪಾಠ ಆರಂಭವಾಯಿತು.

ಸ್ಥಿರ ಪರವಾನಗಿ ಶುಲ್ಕದಿಂದ ಬಿಡುಗಡೆ ಹೊಂದಲು ಕೇಂದ್ರ ಸರ್ಕಾರ 1999ರಲ್ಲಿ ಆದಾಯ ಹಂಚಿಕೆ ಶುಲ್ಕ ವಿಧಾನಕ್ಕೆ ಪರವಾನಗಿಯನ್ನು ವರ್ಗಾಯಿಸಿಕೊಳ್ಳುವ ಅವಕಾಶವನ್ನು ಆಯಾ ಕಂಪೆನಿಗಳಿಗೆ ನೀಡಿತು.

ಈ ಕಾಲಘಟ್ಟದಲ್ಲಿ ಬದಲಾದ ಟೆಲಿಕಾಂ ನೀತಿಯ ಅನ್ವಯ ದೂರ ಸಂಪರ್ಕ ಆದಾಯದ ಜೊತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ವಾರ್ಷಿಕ ಪರವಾನಗಿ ಶುಲ್ಕ (ಎಜಿಎಸ್) ಎಂದು ಕರೆಯಲಾಯಿತು. ತರಂಗಾತರ ಹಂಚಿಕೆ ಶುಲ್ಕದ ಜೊತೆಗೆ ಈ ಶುಲ್ಕವನ್ನು ವರ್ಷಕ್ಕೊಮ್ಮೆ ಕೇಂದ್ರ ದೂರ ಸಂಪರ್ಕ ಇಲಾಖೆಗೆ ಟೆಲಿಕಾಂ ಕಂಪೆನಿಗಳು ಪಾವತಿ ಮಾಡಬೇಕು ಎಂಬುದು ನಿಯಮ.

ಈ ವರೆಗೆ ರಿಲಾಯನ್ಸ್ ಜಿಯೋ ಮಾತ್ರ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಗೆ 60 ಸಾವಿರ ಕೋಟಿ ರೂಪಾಯಿ ಬಾಕಿ ಶುಲ್ಕವನ್ನು ಪಾವತಿ ಮಾಡಿದೆ. ಆದರೆ, ಭಾರತಿ ಆರ್ಟೆಲ್ 35,586 ಕೋಟಿ ಹಾಗೂ ಐಡಿಯಾ-ವೊಡಾಫೋನ್ 50,000 ಕೋಟಿ ಹಾಗೂ ಟಾಟಾ ಟೆಲಿಸರ್ವೀಸ್ 14,000 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿವೆ. ಇದು ಬಡ್ಡಿ ಮತ್ತು ದಂಡ ಸಹಿತ ಇದೀಗ 1,47 ಲಕ್ಷ ಕೋಟಿಗೂ ಮೀರಿದೆ.

ಮುಚ್ಚುವ ಹಂತದಲ್ಲಿ ಬಿಎಸ್ಎನ್ಎಲ್:

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಒಂದು ಕಾಲದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜನಂತೆ ಹೆಸರು ಮಾಡಿತ್ತು. ಹಳ್ಳಿ ಹಳ್ಳಿಗೂ ಮೊಬೈಲ್ ಜಾಲ ಸಂಪರ್ಕಿಸುವ ಗುರಿಯನ್ನು ಸೇವೆ ಎಂದೇ ಪರಿಗಣಿಸಿದ್ದ ಬಿಎಸ್ಎನ್ಎಲ್ ಅಂದಿನ ದಿನಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಸಾಧಿಸಿತ್ತು. ಅಲ್ಲದೆ, ದೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿತ್ತು.

ಆದರೆ, ಒಂದು ಕಾಲದಲ್ಲಿ ಭಾರಿ ಪ್ರಮಾಣದ ವ್ಯವಹಾರ ಹೊಂದಿದ್ದ ಭಾರತದ ಹೆಮ್ಮೆ ಬಿಎಸ್ಎನ್ಎಲ್ ಇಂದು ಸಾಲದ ಸುಳಿಯಲ್ಲಿ ಸಿಲುಕಿದ್ದು ಮುಚ್ಚವ ಹಂತಕ್ಕೆ ಬಂದು ನಿಂತಿದೆ. 2015-16ರಲ್ಲಿ ಬಿಎಸ್ಎನ್ಎಲ್ ನಿಗಮ 4,859 ಕೋಟಿ, 2016-17ರಲ್ಲಿ 4,793 ಕೋಟಿ, 2017-18ರಲ್ಲಿ 1,993 ಕೋಟಿ, 2018-19ರಲ್ಲಿ 14,202 ಕೋಟಿ ನಷ್ಟ ಹೊಂದಿದೆ ಎಂದು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯೇ ಸಂಸತ್ ಅಧಿವೇಶನದಲ್ಲಿ ಮಾಹಿತಿ ನೀಡಿದೆ.

ಈ ಸಂಸ್ಥೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಎಂಟಿಎನ್ಎಲ್ ಅನ್ನು ಬಿಎಸ್ಎನ್ಎಲ್ ಜೊತೆಗೆ ವಿಲೀನ ಮಾಡಿ 69,000 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರೂ ಬಿಎಸ್ಎನ್ಎಲ್ ಮಾತ್ರ ಉಸಿರಾಡುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈಗಾಗಲೇ ಈ ಸಂಸ್ಥೆಯಲ್ಲಿ ಲಕ್ಷಾಂತರ ಉದ್ಯೋಗಗಳು ಕಡಿತವಾಗಿವೆ. ಭವಿಷ್ಯದಲ್ಲಿ ನಷ್ಟ ಬರಿಸಲಾಗದೆ ಈ ಸಂಸ್ಥೆಯನ್ನು ಮುಚ್ಚಿದರೂ ಅಚ್ಚರಿ ಇಲ್ಲ.

ಏರ್ಟೆಲ್-ವೊಡಾಪೋನ್ ಕಥೆಯೂ ಇದಕ್ಕಿಂತ ಭಿನ್ನ ಏನಲ್ಲ:

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ ಕಥೆ ಒಂದಡೆಯಾದರೆ, ಏರ್ಟೆಲ್, ವೊಡಾಪೋನ್-ಐಡಿಯಾ ನಷ್ಟದ ಕಥೆ ಇದಕ್ಕಿಂತ ಶೋಚನೀಯ. ಒಂದು ಕಾಲದಲ್ಲಿ ಭಾರತದ ಟೆಲಿಕಾಂ ಕ್ಷೇತ್ರವನ್ನು ಆಳಿದ್ದ ಈ ಕಂಪೆನಿಗಳು ಕಳೆದ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 74,000 ಕೋಟಿ ನಷ್ಟ ಅನುಭವಿಸಿವೆ.

ವೊಡಾಪೋನ್-ಐಡಿಯಾ ಸಂಸ್ಥೆಗಳಿಗೆ 50,921 ಕೋಟಿ ನಷ್ಟ ಉಂಟಾಗಿದ್ದರೆ, ಏರ್ಟೆಲ್ ಕಂಪೆನಿ ಒಟ್ಟಾರೆಯಾಗಿ 23,045 ಕೋಟಿ ನಷ್ಟ ಅನುಭವಿಸಿದೆ. ಕೇಂದ್ರ ಸರ್ಕಾರವೇ ನೀಡುವ ಅಂಕಿಅಂಶಗಳ ಪ್ರಕಾರ ಒಂದು ತ್ರೈಮಾಸಿಕ ಅವಧಿಯಲ್ಲಿ ಭಾರತದ ಕಾರ್ಪೋರೇಟ್ ಸಂಸ್ಥೆಗಳು ಅನುಭವಿಸಿದ ಅತಿದೊಡ್ಡ ನಷ್ಟ ಇದಾಗಿದೆ. 2018ರ ಡಿಸೆಂಬರ್ನಲ್ಲಿ ಟಾಟಾ ಮೋಟಾರ್ 26,961 ಕೋಟಿ ನಷ್ಟ ಅನುಭವಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಕುಮಾರಮಂಗಲಂ ಬಿರ್ಲಾ ಅವರ ಐಡಿಯಾ ಕಂಪೆನಿ ತನ್ನ ನಷ್ಟವನ್ನು ಬರಿಸಲಾಗದೆ ಕಳೆದ 2019 ಜೂನ್ನಲ್ಲಿ ವೊಡಾಪೋನ್ ಜೊತೆಗೆ ವಿಲೀನವಾಗಿತ್ತು. ಈ ವಿಲೀನದ ಬಳಿಕ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಆದಾಗ್ಯೂ ವಿಲೀನ ಮಾಡಿದ ದಿನದಿಂದಲೂ ಈ ಎರಡೂ ಕಂಪೆನಿಗಳು ನಷ್ಟದಲ್ಲೇ ಇವೆ.

ಈ ನಷ್ಟಕ್ಕೆಲ್ಲಾ ಕಾರಣ ಜಿಯೋ:

ಅಸಲಿಗೆ ಬಿಎಸ್ಎನ್ಎಲ್ ಸೇರಿದಂತೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಲು ಜಿಯೋ ಮತ್ತು ಈ ಜಿಯೋ ಕಂಪೆನಿಗೆ ಅನುಕೂಲವಾಗುವಂತೆ ಟೆಲಿಕಾಂ ಕ್ಷೇತ್ರದ ನಿಯಮಗಳನ್ನು ಬದಲಿಸುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.

ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಲಗ್ಗೆ ಇಟ್ಟು ಕೇವಲ 3 ವರ್ಷಗಳಾಗಿವೆ. ಆದರೆ, ಈ 3 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಕರೆ ಮತ್ತು ಡೇಟಾ ಸೌಲಭ್ಯಗಳನ್ನು ನೀಡುವ ಮೂಲಕ ಜಿಯೋ ಸಂಪಾದಿಸಿರುವ ಗ್ರಾಹಕರ ಸಂಖ್ಯೆ ಬರೋಬ್ಬರಿ 30 ಕೋಟಿ.

ದಶಕಗಳ ಕಾಲ ಮಾರುಕಟ್ಟೆಯಲ್ಲಿರುವ ಬೃಹತ್ ಕಂಪೆನಿಗಳನ್ನು ಬದಿಗಿಟ್ಟು ಜಿಯೋ ಕೇವಲ 3 ವರ್ಷದಲ್ಲಿ 30 ಕೋಟಿ ಗ್ರಾಹಕರನ್ನು ಸಂಪಾದಿಸುವುದು ಎಂದರೆ ಸುಮ್ಮನೆ ಮಾತಲ್ಲ. ಇದಕ್ಕೆ ಜಿಯೋ ಬಳಸಿದ ಅಸ್ತ್ರ ಉಚಿತ. ಆರಂಭದಲ್ಲಿ ಜಿಯೋ ಕರೆ ಹಾಗೂ ಡೇಟಾ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಿತ್ತು. 4ಜಿ ವೇಗದಲ್ಲಿ ಡಾಟಾ ಉಚಿತವಾಗಿ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಗ್ರಾಹಕರು ಜಿಯೋ ಕಡೆಗೆ ವಾಲಿದ್ದರು. ಪರಿಣಾಮ ಜಿಯೋ ಹೊರತಾಗಿ ಉಳಿದ ಎಲ್ಲಾ ಕಂಪೆನಿಗಳು ಅಪಾರ ನಷ್ಟಕ್ಕೆ ಒಳಗಾದವು. ಇದರ ಜೊತೆಗೆ ದೂರ ಸಂಪರ್ಕ ಇಲಾಖೆ ಬದಲಿಸಿದ ಕೆಲವು ನಿಯಮಗಳೂ ಸಹ ಜಿಯೋ ಪಾಲಿಗೆ ವರದಾನವಾಯಿತು.

ಜಿಯೋ ಗ್ರಾಹಕರು ಬೇರೆ ಯಾವುದೇ ಕಂಪೆನಿ ನಂಬರ್ಗೆ ಕರೆ ಮಾಡಿದರೆ ನಿಮಿಷಕ್ಕೆ 13 ಪೈಸೆಯನ್ನು ಜಿಯೋ ಸಂಸ್ಥೆ ಇತರೆ ಕಂಪೆನಿಯ ನೆಟ್ವರ್ಕ್ ಬಳಿಸಿದ್ದಕ್ಕಾಗಿ ನೀಡಬೇಕು. ಎಲ್ಲಾ ಕಂಪೆನಿಗಳಿಗೂ ಈ ಕಾನೂನು ಅನ್ವಯ. ಹೀಗೆ ಮೊದಲ ವರ್ಷ ಜಿಯೋ ಇತರೆ ಕಂಪೆನಿಗಳಿಗೆ ಪಾವತಿ ಮಾಡಿದ ಹಣ ಮಾತ್ರ ಬರೋಬ್ಬರಿ 53 ಸಾವಿರ ಕೋಟಿ. ಆದರೆ, ದೂರ ಸಂಪರ್ಕ ಇಲಾಖೆಯ ಟ್ರಾಯ್ ಈ ಮೊತ್ತವನ್ನು ನಿಮಿಷಕ್ಕೆ 13 ಪೈಸೆಯಿಂದ ಇದೀಗ 7 ಪೈಸೆಗೆ ಇಳಿಸಿದ್ದು ಜಿಯೋ ಬೆಳೆಯಲು ಇದು ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.

ಒಂದೆಡೆ ಜಿಯೋ ದಿಂದಾಗಿ ಭಾರತದ ಎಲ್ಲಾ ಟೆಲಿಕಾಂ ಕಂಪೆನೆಗಳು ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಎಜಿಎಸ್ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಚಾಟಿ ಬೀಸಿರುವುದು ನಷ್ಟದಲ್ಲಿರುವ ಕಂಪೆನಿಗಳನ್ನು ಮತ್ತಷ್ಟು ಉಸಿರುಗಟ್ಟಿಸುವ ಹಂತಕ್ಕೆ ತಂದು ನಿಲ್ಲಿಸಿದೆ. ಈಗಾಗಲೇ ಭಾರತದಲ್ಲಿ ಜನ ಊಟ ಇಲ್ಲದೆಯೂ ಇರುವರೇನೋ ಆದರೆ, ಡೇಟಾ ಇಲ್ಲದೆ ಬದುಕಲಾರರು ಎಂಬಂತಹ ಸ್ಥಿತಿಗೆ ಇಡೀ ದೇಶವನ್ನು ತಂದು ನಿಲ್ಲಿಸಿದ ಕೀರ್ತಿ ಜಿಯೋ ಮತ್ತು ಅದಕ್ಕೆ ಅನುಕೂಲವಾಗುವಂತೆ ಕಾನೂನು ರೂಪಿಸಿದ ಸರ್ಕಾರಕ್ಕೆ ಸಲ್ಲುತ್ತದೆ.

ಪರಿಸ್ಥಿತಿ ಹೀಗೆ ಮುಂದುವರೆದರೆ ಟೆಲಿಕಾಂ ಕ್ಷೇತ್ರದ ಎಲ್ಲಾ ಕಂಪೆನಿಗಳು ಬಾಗಿಲು ಎಳೆದುಕೊಂಡು ಜಿಯೋ ಮಾತ್ರ ಇಡೀ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿದರೂ ಅಚ್ಚರಿ ಇಲ್ಲ. ಆ ಸಂದರ್ಭದಲ್ಲಿ ಜಿಯೋ ಕಂಪೆನಿ ಒಂದು ಜಿಬಿ ಡೇಟಾಗೆ ಚಿನ್ನದ ಬೆಲೆ ನಿಗದಿ ಮಾಡಿದರೂ ಅದನ್ನು ಖರೀದಿಸದೆ ಬೇರೆ ವಿಧಿಯಿಲ್ಲ.

Tags: AmbaniJioಏಕಸ್ವಾಮ್ಯಜಿಯೋಮಾರುಕಟ್ಟೆ
Previous Post

ಗುಜರಾತ್ ಗಲಭೆಯಲ್ಲಿ ಮೋದಿ ಆರೋಪ ಮುಕ್ತಗೊಳಿಸಿದ್ದ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾಗೆ ಕ್ಲೀನ್ ಚಿಟ್!

Next Post

ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮಗ್ರಂಥ! ಬಿಡುಗಡೆಗೆ ಬರ್ತಾರೆ ಮೋದಿ!

Related Posts

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು
ಕರ್ನಾಟಕ

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

by ಪ್ರತಿಧ್ವನಿ
July 2, 2025
0

ಕೇಂದ್ರ ಸರ್ಕಾರದ ಬೆಲೆಯೇರಿಕೆಗೆ ರಾಜ್ಯದ ಬಿಜೆಪಿ ನಾಯಕರ ಮೌನ ಖಂಡನೀಯ ರೈತರಿಗೆ ನೆರವಾಗಲು ನಾವು ಹಾಲಿನ ದರ ಹೆಚ್ಚಳ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿಯವರು ಈಗ...

Read moreDetails
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025
Next Post
ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮಗ್ರಂಥ! ಬಿಡುಗಡೆಗೆ ಬರ್ತಾರೆ ಮೋದಿ!

ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮಗ್ರಂಥ! ಬಿಡುಗಡೆಗೆ ಬರ್ತಾರೆ ಮೋದಿ!

Please login to join discussion

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada