• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಆರೋಗ್ಯ ಸೇತು: ಭಾರತದ 9 ಕೋಟಿ ಜನರ ಗೌಪ್ಯ ಮಾಹಿತಿ ಅಪಾಯದಲ್ಲಿ

by
May 6, 2020
in ದೇಶ
0
ಆರೋಗ್ಯ ಸೇತು: ಭಾರತದ 9 ಕೋಟಿ ಜನರ ಗೌಪ್ಯ ಮಾಹಿತಿ ಅಪಾಯದಲ್ಲಿ
Share on WhatsAppShare on FacebookShare on Telegram

2018 ರಲ್ಲಿ ಆಧಾರ್ ಕಾರ್ಡ್‌ ಮಾಹಿತಿ ಸೋರಿಕೆಯನ್ನು ಬಯಲಿಗೆಳೆದಿದ್ದ ಎಥಿಕಲ್ ಹ್ಯಾಕರ್ ಎಲಿಯಟ್ ಅಲ್ಡರ್‌ಸನ್‌ ಮೇ 5 ರಂದು ಟ್ವೀಟ್ ಮಾಡಿ ಭಾರತ ಸರ್ಕಾರದ ಅಪ್ಲಿಕೇಷನ್ ಆರೋಗ್ಯ ಸೇತುವಿನಲ್ಲಿ ಭದ್ರತಾ ಲೋಪವಿರುವುದರಿಂದ ಅದನ್ನು ಬಳಸುವ 9 ಕೋಟಿ ಭಾರತೀಯರ ಗೌಪ್ಯತೆ ಅಪಾಯದಲ್ಲಿದೆ ಎಂದು ಹೇಳಿದ್ದಾರೆ.

ಆರೋಗ್ಯ ಸೇತು ಟ್ವಿಟರ್ ಹ್ಯಾಂಡಲನ್ನು ಉಲ್ಲೇಖಿಸಿ ಮಾಡಿರುವ ಟ್ವೀಟಿನಲ್ಲಿ ಖಾಸಗಿಯಾಗಿ ನನ್ನನ್ನು ಸಂಪರ್ಕಿಸಬಹುದೇ ಎಂದು ಕೇಳಿದ್ದಾರೆ. ಇದಾದ 50 ನಿಮಿಷಗಳ ಬಳಿಕ ಮತ್ತೆ ಟ್ವೀಟ್ ಮಾಡಿರುವ ಎಲಿಯಟ್ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (@IndianCERT) ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರ (@NICMeity) ನನ್ನನ್ನು ಸಂಪರ್ಕಿಸಿದೆ, ಸಮಸ್ಯೆಯನ್ನು ಅವರ ಬಳಿ ಹೇಳಿಕೊಂಡಿರುವುದಾಗಿ ಬರೆದಿದ್ದಾರೆ.

Hi @SetuAarogya,

A security issue has been found in your app. The privacy of 90 million Indians is at stake. Can you contact me in private?

Regards,

PS: @RahulGandhi was right

— Elliot Alderson (@fs0c131y) May 5, 2020


ADVERTISEMENT

ಎಲಿಯಟ್‌ನ ಆರೋಪವನ್ನು ತಳ್ಳಿ ಹಾಕಿದ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಆರೋಗ್ಯ ಸೇತುವಿನಲ್ಲಿ ಯಾವುದೇ ತರಹದ ಭದ್ರತಾ ಲೋಪವಿಲ್ಲ ಎಂದಿದ್ದಾರೆ. ಇನ್ನೊಬ್ಬ ಅಧಿಕಾರಿ ಆರೋಗ್ಯ ಸೇತು ಬಳಕೆದಾರರ ಮೇಲೆ ಕಣ್ಗಾವಲು ಇಡುವ ಸಾಧನವಲ್ಲ, ಬದಲಾಗಿ ಜೀವ ರಕ್ಷಿಸುವ ಸಾಧನವಾಗಿದೆ. ನೀವು ಬೆಂಬಿಡದ ವೈರಸ್ ವಿರುದ್ದ ಹೋರಾಡುತ್ತಿದ್ದೀರಿ ಆದ್ದರಿಂದ ಗೊಂದಲಕ್ಕೆ ಅಥವಾ ಆತಂಕಕ್ಕೆ ಒಳಗಾಗಬೇಡಿಯೆಂದು ಹೇಳಿದ್ದಾಗಿ ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ.

ಯಾವುದೇ ಭಧ್ರತಾ ಲೋಪವಿಲ್ಲವೆಂದು ನಮಗೆ ಭರವಸೆಯಿದೆ. ಅಪ್ಲಿಕೇಶನ್ ಅತ್ಯಂತ ಕಠಿಣ ಪರಿಶೀಲನೆಗಳಿಗೆ ಒಳಪಟ್ಟಿದೆ. ಅದನ್ನು ಇನ್ನಷ್ಟು ಬಲಪಡಿಸಲು ಬರುವ ಸಲಹೆಗಳನ್ನು ಗಮನಿಸುತ್ತಿದ್ದೇವೆ. ಶೀಘ್ರದಲ್ಲೇ ಅಪ್ಲಿಕೇಶನ್ ನಿರ್ಮಿಸಿದ ತಂಡ ಯಾವುದೇ ದತ್ತಾಂಶ ಸೋರಿಕೆಯಾಗುವುದಿಲ್ಲವೆಂದು ಸ್ಪಷ್ಟೀಕರಣ ನೀಡಲಿದೆ ಎಂದು ಮತ್ತೋರ್ವ ಅಧಿಕಾರಿ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.

ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಗ್ಯ ಸೇತು ಅಪ್ಲಿಕೇಶನ್ ಸರ್ಕಾರದ ಸ್ವಾಮ್ಯದಲ್ಲಿಲ್ಲ ಬದಲಾಗಿ ಖಾಸಗಿ ಅಧೀನದಲ್ಲಿದೆ, ಹಾಗಾಗಿ ಮಾಹಿತಿ ಸೋರಿಕೆಯಾಗುವ ಆತಂಕ ಇದೆಯೆಂದು ಟ್ವೀಟ್ ಮಾಡಿದ್ದರು. ಎಲಿಯಟ್ ಆರೋಗ್ಯ ಸೇತುವಿನ ಕುರಿತಾದ ತನ್ನ ಮೊದಲ ಟ್ವೀಟಿನಲ್ಲಿ ರಾಹುಲ್ ಗಾಂಧಿ ಹೇಳಿರುವುದು ಸರಿಯಿದೆಯೆಂದು ಉಲ್ಲೇಖಿಸಿದ್ದಾರೆ.

ಆರೋಗ್ಯ ಸೇತುವಿನ ಭದ್ರತಾ ಲೋಪದ ಕುರಿತು ತನ್ನ ಆರೋಪವನ್ನು ಬಲವಾಗಿ ಸಮರ್ಥಿಸಿಕೊಂಡ ಎಲಿಯಟ್ ಸರಣಿ ಟ್ವೀಟ್ಗಳನ್ನು ಹಾಕಿ ನೀವು ದೇಶವನ್ನು ಪ್ರೀತಿಸುವುದೇ ಆದರೆ ಅಪ್ಲಿಕೇಶನ್ನ ಸರ‍್ಸ್ ಕೋಡನ್ನು ಬಹಿರಂಗಗೊಳಿಸಿ, ಸರ್ಕಾರ ಅಪ್ಲಿಕೇಶನನ್ನು ಇನ್ಸ್ಟಾಲ್ ಮಾಡಲು ಹೇಳುವಾಗ ಜನರಿಗೆ ಅದರ ಸಾಧಕ, ಬಾಧಕಗಳ ಬಗ್ಗೆಯು ಅರಿಯುವ ಹಕ್ಕಿರುತ್ತದೆ. ಈಗಾಗಲೇ ಸಿಂಗಾಪುರ್, ಇಸ್ರೇಲ್, ಈಸ್ಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಸೋರ್ಸ್‌ ಕೋಡನ್ನು (source code) ಬಹಿರಂಗಗೊಳಿಸಿದೆ ಎಂದಿದ್ದಾರೆ. ಹಾಗಾಗಿ ಭಾರತ ಸರ್ಕಾರವೂ ಸೋರ್ಸ್‌ ಕೋಡನ್ನು ಬಹಿರಂಗಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

Tags: Arogya SetuEthical HackingRahul Gandhiಆರೋಗ್ಯ ಸೇತುಮಾಹಿತಿ ಸೋರಿಕೆರಾಹುಲ್ ಗಾಂಧಿ
Previous Post

ರೈತರಿಗೆ, ದುಡಿಯುವ ವರ್ಗಕ್ಕೆ ಲಾಕ್‌ಡೌನ್ ವಿಶೇಷ ಅನುದಾನ ಘೋಷಿಸಿದ ಬಿಎಸ್‌ವೈ

Next Post

ಕರಾವಳಿಯಲ್ಲಿ ಮೂಕ ಕಾಡುಕೋಣದ ಸಾವಿಗೆ ಯಾರು ಹೊಣೆ?

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
Next Post
ಕರಾವಳಿಯಲ್ಲಿ ಮೂಕ ಕಾಡುಕೋಣದ ಸಾವಿಗೆ ಯಾರು ಹೊಣೆ?

ಕರಾವಳಿಯಲ್ಲಿ ಮೂಕ ಕಾಡುಕೋಣದ ಸಾವಿಗೆ ಯಾರು ಹೊಣೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada