ಅಸ್ಸಾಮಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾಗಶ ರಾಜ್ಯ ತುತ್ತಾಗಿದೆ. ಬ್ರಹ್ಮಪುತ್ರ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ರಾಜ್ಯದಲ್ಲಿ ಉಂಟಾದ ಪ್ರವಾಹ ಸಂಬಂಧಿತ ಅಪಘಾತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 92 ಕ್ಕೆ ಏರಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ದೈನಂದಿನ ಬುಲೆಟಿನ್ ಪ್ರಕಾರ, 26 ಜಿಲ್ಲೆಗಳಲ್ಲಿ ಸುಮಾರು 36 ಲಕ್ಷ ಜನರು ಈವರೆಗೆ ಪ್ರವಾಹ ಹಾಗೂ ಪ್ರವಾಹದಿಂದ ಉಂಟಾದ ಭೂಕುಸಿತಕ್ಕೆ ಬಾಧಿತರಾಗಿದ್ದಾರೆ.
ಬುಧವಾರ ಏಳು ಸಾವುಗಳು ವರದಿಯಾಗಿದ್ದು, ಮೂವರು ಮೊರಿಗಾಂವ್ ಜಿಲ್ಲೆಯಲ್ಲಿ, ಇಬ್ಬರು ಬಾರ್ಪೆಟಾದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಸೋನಿತ್ಪುರ ಮತ್ತು ಗೋಲಘಾಟ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಿಳಿಸಿದೆ. ರಾಜ್ಯದಲ್ಲಿ ಪ್ರವಾಹದಿಂದ 66 ಜನರು ಮೃತಪಟ್ಟಿದ್ದರೆ, ಭೂಕುಸಿತದಿಂದಾಗಿ 26 ಮಂದಿ ಕೊನೆಯುಸಿರೆಳೆದಿದ್ದಾರೆ

ರಾಷ್ಟ್ರೀಯ ತುರ್ತು ವಿಪತ್ತು ಪ್ರತಿಕ್ರಿಯೆ ಪಡೆ, ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಜಿಲ್ಲಾಡಳಿತಗಳು ರಾಜ್ಯದಾದ್ಯಂತ 180 ದೋಣಿಗಳನ್ನು ನಿಯೋಜಿಸಿ ಬುಧವಾರ 24 ಗಂಟೆಗಳಲ್ಲಿ 3,991 ಜನರನ್ನು ರಕ್ಷಿಸಿವೆ. ಪ್ರಸ್ತುತ, ಅಸ್ಸಾಂನಾದ್ಯಂತ 3,376 ಗ್ರಾಮಗಳು ಜಲಾವೃತಗೊಂಡಿದೆ ಮತ್ತು 1,27,647.25 ಹೆಕ್ಟೇರ್ ಕೃಷಿ ಪ್ರದೇಶ ಪ್ರವಾಹಕ್ಕೆ ತುತ್ತಾಗಿದ್ದು ಬೆಳೆಗಳಿಗೆ ಹಾನಿಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಪ್ರವಾಹಕ್ಕೆ ತುತ್ತಾದ 23 ಜಿಲ್ಲೆಗಳಲ್ಲಿ ಅಧಿಕಾರಿಗಳು 629 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ನಡೆಸುತ್ತಿದ್ದಾರೆ, ಅಲ್ಲಿ ಪ್ರಸ್ತುತ 36,320 ಜನರು ಆಶ್ರಯ ಪಡೆದಿದ್ದಾರೆ.
ಸತತ ಮಳೆಯಿಂದಾಗಿ ಬ್ರಹ್ಮಪುತ್ರ ನದಿ ಅಪಾಯ ಮಟ್ಟದ ಗುರುತುಗಿಂತ ಮೇಲಕ್ಕೆ ಹರಿಯುತ್ತಿದೆ. ಈಗಾಗಲೇ ಪ್ರವಾಹಕ್ಕೆ ಸಿಲುಕಿ ರಸ್ತೆ, ಸೇತುವೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳು ಹಾನಿಗೊಂಡಿದ್ದು, ರಕ್ಷಣಾ ಕಾರ್ಯಕ್ಕೆ ಇದು ತೊಡಕಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೀವ್ರ ಪ್ರವಾಹದಿಂದ ಕಾಝಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ವನ್ಯ ಪ್ರಾಣಿಗಳು ಗಂಭೀರ ಅಪಾಯದಲ್ಲಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬುಧವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಕಾಝಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ 66 ಪ್ರಾಣಿಗಳು ಸಾವನ್ನಪ್ಪಿದೆ. 117 ಪ್ರಾಣಿಗಳನ್ನು ರಕ್ಷಿಸಲಾಗಿದೆ.
A female rhino calf was separated from her mother due to high flood in the Agartoli range yesterday. As we could not locate the mother, team CWRC along with @kaziranga_ staffs rescued it and currently under care at our rescue centre-CWRC. @ParimalSuklaba1 @wti_org_India pic.twitter.com/LLPHrDPQ8Z
— Kaziranga National Park & Tiger Reserve (@kaziranga_) July 15, 2020
ವಿಶ್ವ ವನ್ಯಜೀವಿ ನಿಧಿಯ ಪ್ರಕಾರ ಈ ಉದ್ಯಾನವನದಲ್ಲಿ ಆನೆಗಳು, ಭಾರತೀಯ ಹಾಗ್ ಜಿಂಕೆ, ಕಾಡೆಮ್ಮೆ ಮತ್ತು ಒಂದು ಕೊಂಬಿನ ಖಡ್ಗಮೃಗಗಳು ಸೇರಿದಂತೆ ಹಲವು ಅಳಿವಿನಂಚಿನಲ್ಲಿರುವ ಪ್ರಾಣಿಗಳಿತ್ತು.
ಉದ್ಯಾನವನದಲ್ಲಿ ಎರಡು ಖಡ್ಗಮೃಗಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಉದ್ಯಾನದ ಕೇಂದ್ರ ವ್ಯಾಪ್ತಿಯ ತಿನಿಮುಖುನಿ ನಲ್ಲಾ ಮತ್ತು ಮಿಕ್ರ್ಜನ್ ಟೋಂಗಿ ಪ್ರದೇಶಗಳಲ್ಲಿ ಮಂಗಳವಾರ ಗಂಡು ಮತ್ತು ಹೆಣ್ಣು ಖಡ್ಗಮೃಗದ ಶವಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ತಾಯಿಯಿಂದ ಬೇರ್ಪಟ್ಟ ಒಂದು ವರ್ಷದ ಪ್ರಾಯದ ಖಡ್ಗಮೃಗವನ್ನು ಬುಧವಾರ ಬೆಳಿಗ್ಗೆ ಸೆಂಟರ್ ಫಾರ್ ವನ್ಯಜೀವಿ ಪುನರ್ವಸತಿ ಹಾಗೂ ಕಾಝಿರಂಗಾ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಹೆಣ್ಣು ಮರಿಯನ್ನು ಈಗ CWRC ರಕ್ಷಣಾ ಕೇಂದ್ರದಲ್ಲಿ ಆರೈಕೆಯಲ್ಲಿ ಇರಿಸಲಾಗಿದೆ. ರಕ್ಷಣಾ ತಂಡಕ್ಕೆ ಇದುವರೆಗೂ ಅದರ ತಾಯಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
A female rhino calf was separated from her mother due to high flood in the Agartoli range yesterday. As we could not locate the mother, team CWRC along with @kaziranga_ staffs rescued it and currently under care at our rescue centre-CWRC. @ParimalSuklaba1 @wti_org_India pic.twitter.com/LLPHrDPQ8Z
— Kaziranga National Park & Tiger Reserve (@kaziranga_) July 15, 2020