ಭಾರತ ಸರ್ಕಾರ ಜೂನ್ 29 ರಂದು ಬಳಕೆದಾರರ ಭದ್ರತೆಯ ಹೆಸರಿನಲ್ಲಿ ಟಿಕ್‌ಟಾಕ್ ಸೇರಿದಂತೆ ಚೀನಾದ 59 ಮೊಬೈಲ್ ಅಪ್ಲಿಕೇಶನ್‌ನ್ನು ಭಾರತದಲ್ಲಿ ನಿರ್ಭಂಧಿಸಿದೆ. ಈ ಹಿನ್ನಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಸಣ್ಣ ವೀಡಿಯೋ ಷೇರ್ ಮಾಡುವ ಟಿಕ್‌ಟಾಕ್ ಯಾವುದೇ ಬಳಕೆದಾರರ ಮಾಹಿತಿ ಸೋರಿಕೆಯಾಗುವುದಿಲ್ಲ ಎಂದಿದೆ.
ಈ ಕುರಿತು ಸರ್ಕಾರದ ಅಧಿಕಾರಿಗಳೊಡನೆ ಮಾತನಾಡಿ ಅವರಿಗೆ ಸ್ಪಷ್ಟೀಕರಣ ನೀಡುವುದಾಗಿ ಟಿಕ್‌ಟಾಕ್ ಹೇಳಿದೆ. ನಮ್ಮ ಬಳಕೆದಾರರ ಯಾವುದೇ ಮಾಹಿತಿ ಭಾರತ ಸೇರಿದಂತೆ ಚೀನಾ ಅಥವಾ ಯಾವುದೇ ದೇಶದ ಸರ್ಕಾರಗಳೊಡನೆ ಹಂಚಿಕೊಂಡಿಲ್ಲ ಎಂದು ಟಿಕ್‌ಟಾಕ್‌ನ ಭಾರತದ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ.
ಅಪ್ಲಿಕೇಷನ್‌ಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವ ಬೆನ್ನಿಗೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ನಿಂದ ಟಿಕ್‌ಟಾಕ್ ಅಪ್ಲಿಕೇಷನ್ ಕಾಣೆಯಾಗಿದೆ. ಮೂಲಗಳ ಪ್ರಕಾರ ಟಿಕ್‌ಟಾಕ್ ಸ್ವ-ಇಚ್ಛೆಯಿಂದ ತನ್ನ ಅಪ್ಲಿಕೇಷನ್ ಡಿಲಿಟ್ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.