ಜನಪ್ರಿಯ ಜೂಮ್ (zoom) ಮೊಬೈಲ್ ಅಪ್ಲಿಕೇಷನ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಗಂಭೀರ ಲೋಪ ಕಂಡು ಬಂದಿದ್ದು, ಗ್ರಾಹಕರು ಕೂಡಲೇ ಈ ಆಪ್ ಅನ್ನು ಅಪ್ ಡೇಟ್ ಮಾಡಿಕೊಳ್ಳುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ.
ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾಸ್ ತಂಡ ಜೂಮ್ ಮೊಬೈಲ್ ಆಪ್ ನಲ್ಲಿ ನ್ಯೂನತೆಗಳನ್ನು ಪತ್ತೆ ಹಚ್ಚಿದ್ದು, ಹಲವಾರು ಲೋಪಗಳು ಇರುವುದರಿಂದ ಗುಂಪು ಚರ್ಚೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು ಎಂದು ಎಚ್ಚರಿಸಿದೆ.

ಸೈಬರ್ ಸೆಕ್ಯೂರೆಟಿ ಆತಂಕ ಇದ್ದು, ಗುಂಪು ಚರ್ಚೆ ವೇಳೆ ಯಾರ ಗಮನಕ್ಕೂ ಬಾರದೇ ರಿಮೋಟ್ ಮೂಲಕ ಅನಾಮಧೇಯ ವ್ಯಕ್ತಿಗಳು ಚರ್ಚೆಯಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಿದೆ.
ಅನುಮತಿ ಇಲ್ಲದೇ ಅನಾಮಧೇಯ ವ್ಯಕ್ತಿಗಳು ನಿಮ್ಮ ಜೂಮ್ ಕಾಲ್ ನಲ್ಲಿ ಇದ್ದರೂ ಅವರು ಕಾಣಿಸಿಕೊಳ್ಳುವುದಿಲ್ಲ. ಅಲ್ಲದೇ ಹ್ಯಾಕರ್ಸ್ ನಿಮ್ಮ ಸಭೆಯ ಆಡಿಯೋ-ವೀಡಿಯೊ ಅಲ್ಲದೇ ಮೊಬೈಲ್ ಡಾಟಾಗಳನ್ನು ಕದಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.