ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ(Grammy Winner ) ಸಂಗೀತಗಾರ ರಿಕಿ ಕೇಜ್ (Ricky Kej) ಅವರ ಬೆಂಗಳೂರು(Bengaluru) ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ನೀರಿನ ಸಂಪ್‌ಗೆ ಮುಚ್ಚಲಾದ ಕಬ್ಬಿಣ ಮುಚ್ಚಳವನ್ನು ಝೋಮೆಟೋ ಬ್ಯಾಗ್ ಧರಿಸಿ ಬೈಕ್‌ನಲ್ಲಿ ಬಂದ ಕಳ್ಳರು ಕದ್ದೊಯ್ಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ಬಗ್ಗೆ ರಿಕಿ ಕೇಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, Zomato ಹಾಗೂ Zomatocareಗೆ ಟ್ಯಾಗ್ ಮಾಡಿದ್ದಾರೆ. ನಮ್ಮ ಮನೆಯಲ್ಲಿ ದೊಡ್ಡ ಕಳ್ಳತನವಾಗಿದೆ. ನಿಮ್ಮ ಝೋಮೆಟೋ ಹುಡುಗ, ನಮ್ಮ ಸಂಪ್ ಮುಚ್ಚಳವನ್ನು ಕದ್ದಿದ್ದಾರೆ ಎಂದು ಹಂಚಿಕೊಂಡಿರುವ ರಿಕಿ ಕೇಜ್ ಘಟನೆಯ ಸಿಸಿಟಿವಿಗಳನ್ನು ಹಾಗೂ ಕಳ್ಳತನಕ್ಕೆ ಬಳಿಸಿದ ಬೈಕ್ ನಂಬರ್ ಪ್ಲೇಟ್ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ರಿಕಿ ಕೇಜ್ ಅವರ ಟ್ವೀಟ್‌ಗೆ ಝೋಮೆಟೋ ಸಂಸ್ಥೆ ಕೂಡ ಪ್ರತಿಕ್ರಿಯಿಸಿದ್ದು, ʼಇದು ನಿಜಕ್ಕೂ ಕಳವಳಕಾರಿ ಘಟನೆ. ನಮ್ಮ ಡೆಲಿವರಿ ಬಾಯ್ ಅಂತಹ ನಡವಳಿಕೆಯನ್ನು ನಾವು ಖಂಡಿತವಾಗಿಯೂ ಪ್ರೋತ್ಸಾಹಿಸುವುದಿಲ್ಲ. ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾವು ಕೂಡ ಈ ಬಗ್ಗೆ ತನಿಖೆಯನ್ನು ಮಾಡುತ್ತೇವೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿʼ ಎಂದು ತಿಳಿಸಿದೆ. ಇನ್ನು ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.














