ಹುಬ್ಬಳ್ಳಿ : ಸಚಿವ ಜಮೀರ್ ಅಹ್ಮದ್ ಖಾನ್ ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿದ್ದಾರೆ. ವಕ್ಪ್ ಬೋರ್ಡ್ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದೇವೆ ಎಂದಿದ್ದಾರೆ ಸಚಿವ ಜಮೀರ್.
ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದೆ ತಿಂಗಳ 19 ರಂದು ನಡೆಯಲಿರುವ ವಕ್ಫ್ ಬೋರ್ಡ್ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ವಕ್ಪ್ ಬೋರ್ಡ್ ಚುನಾವಣೆ ಇದೆ, ಹೀಗಾಗಿ ಸಭೆ ಕರೆದಿದ್ದೇವೆ ಎಂದಿದ್ದಾರೆ.
ವಕ್ಪ್ ಆಸ್ತಿ ಸಮಸ್ಯೆಗೂ ಈ ಸಭೆಗೂ ಸಂಬಂಧ ಇಲ್ಲ ಎಂದಿರುವ ಸಚಿವ ಜಮೀರ್, ಯಾವ ಮುಸ್ಲಿಂ ರೈತರು ಸಭೆಗೆ ಬಂದಿಲ್ಲ. ರೈತರು ಯಾರಾದರೇನು, ನೋಟಿಸ್ ಕೊಟ್ಟಿದ್ರೆ ನಾನು ಮತ್ತೆ ಸಿಎಂ ಹಿಂಪಡೆಯಲು ಸೂಚನೆ ನೀಡಿದ್ದೇವೆ ಎಂದಿದ್ದಾರೆ.
ಯಾವ ಕಾರಣಕ್ಕೂ ರೈತರಿಗೆ ತೊಂದರೆ ಕೊಡಲು ನಾನು ಸಿದ್ದವಿಲ್ಲ. ರೈತರು ನಮ್ಮ ಅನ್ನದಾತರು, ತೊಂದರೆ ಕೊಡೋದಿಲ್ಲ. ಧಾರವಾಡ ಜಿಲ್ಲೆಯ ಮುಖಂಡರ ಸಭೆ ಅಷ್ಟೇ ಮಾಡಿದ್ದೀನಿ. ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡ್ತಿಲ್ಲ, ರಾಜಕೀಯ ಮಾಡ್ತಿದ್ದಾರೆ. ನಾವು ಒಳ್ಳೆ ಕೆಲಸ ಮಾಡ್ತಿದ್ದೇವೆ ಅವರಿಗೆ ಸಹಿಸೋಕೆ ಆಗ್ತಿಲ್ಲ ಎಂದಿದ್ದಾರೆ.