ಮುಂಬೈ : ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಗುರುವಾರ ಮುಂಬೈನ ಬಾಂದ್ರಾದಲ್ಲಿ ಹತ್ಯೆಗೀಡಾದ ಹಿರಿಯ ರಾಜಕೀಯ ಮುಖಂಡ ಬಾಬಾ ಸಿದ್ದಿಕ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಹಾಗೂ ಬಾಬಾ ಸಿದ್ದಿಕ್ ನಡುವಿನ ಸ್ನೇಹ -ಸಂಬಂಧ ಬಗ್ಗೆ ಮೆಲುಕು ಹಾಕಿದರು.ಇದೇ ಸಂದರ್ಭದಲ್ಲಿ ಬಾಬಾ ಸಿದ್ದಿಕ್ ಸಹೋದರರಾದ ರಿಯಾಜ್ ಸಿದ್ದಿಕ್ ಮತ್ತು ಅಬ್ದುಲ್ ಅಜೀಜ್ ಸಿದ್ದಿಕ್ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಬೈಲ್ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಬಾಬಾ ಸಿದ್ದಿಕ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಜಮೀರ್ ಅಹ್ಮದ್ ಖಾನ್ ಅವರು ಸಾಂತ್ವನ ಹೇಳಿದ್ದಾರೆ. ಜಮೀರ್ ಈ ವೇಳೆ ಕ್ಲಿಕ್ಕಿಸಿಸ ಫೋಟೋಗಳನ್ನ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
Visited the residence of the recently assassinated senior political leader Janab Baba Siddique & offered condolences to his family members in Mumbai City
— B Z Zameer Ahmed Khan (@BZZameerAhmedK) October 17, 2024
On the same occasion, CM Shri.@siddaramaiah Ji spoke to Bothers of @BabaSiddique through mobile phone and consoled them. pic.twitter.com/nz2xyeqvVk
ಕಳೆದ ವಾರ ನಡೆದ ಎನ್‌ಸಿಪಿಯ ಹಿರಿಯ ನಾಯಕ ಬಾಬಾ ಸಿದ್ದಿಕಿ(Baba Siddique) ಹತ್ಯೆಯ ನಂತರ ತನಿಖೆ ಮುಂದುವರಿದಿದೆ. ಲಾರೆನ್ಸ್ ಬಿಷ್ಣೋಯ್ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಇದುವರೆಗೆ ಮೂವರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಶೂಟರ್‌ಗಳು ವಿಚಾರಣೆಯ ಸಮಯದಲ್ಲಿ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಕೂಡ ಬಿಷ್ಣೋಯ್ ಗ್ಯಾಂಗ್‌ನ ಹಿಟ್-ಲಿಸ್ಟ್‌ನಲ್ಲಿ ಸೇರಿದ್ದಾರೆ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.