ಡಾ.ರಾಜ್ ಕುಮಾರ್ ದೊಡ್ಮನೆ ಕಲಾವಿದ ಯುವರಾಜಕುಮಾರ್ ಬಹುನಿರೀಕ್ಷತ ಯುವ (Yuva) ಚಿತ್ರದ ಮೊದಲ ಹಾಡು (Song) ಮಾರ್ಚ್ 2 ಕ್ಕೆ ಬಿಡುಗಡೆಯಾಗಲಿದೆ.
ಯುವ ಚಿತ್ರ ಮಾರ್ಚ್ 28 ಕ್ಕೆ ಬಿಡುಗಡೆಯಾಗಲಿದ್ದು, ರಾಜ್ ಕುಟುಂಬದಿAದ ಬರುತ್ತಿರುವ ಹೊಸ ಚಿತ್ರಕ್ಕೆ ಭಾರೀ ನಿರೀಕ್ಷೆ ಹುಟ್ಟಿಸಿದೆ. ಇನ್ನು ಚಿತ್ರದ ಮೊದಲ ಹಾಡು ಒಬ್ಬನೇ ಶಿವ ಒಬ್ಬನೇ ಯುವ ಹಾಡು ಮಾರ್ಚ್ 2 ರಂದೇ ಬಿಡುಗಡೆಯಾಗುತ್ತಿದ್ದು, ಶಿವರಾತ್ರಿಯಲ್ಲಿ ಟ್ರೆಂಡ್ ಆಗಲಿದೆ.
ಮೊದಲ ಹಾಡನ್ನು ತವರೂರು ಚಾಮರಾಜನಗರದಲ್ಲಿ (Chamarajanagar) ಬಿಡುಗಡೆ ಮಾಡುತ್ತಿದ್ದು, ಚಿತ್ರ ತಂಡ ಮಾರ್ಚ್ 2 ರಂದು ಚಾಮರಾಜೇಶ್ವರ ದೇವಸ್ಥಾನದ ಮೈದಾನದಲ್ಲಿ ಬೃಹತ್ ಕಾರ್ಯಕ್ರಮದಲ್ಲಿ ಶಿವ ಸಾಂಗ್ ರಿಲೀಸ್ ಆಗಲಿದೆ.
ಯುವ ನಟಿಸಿರುವ ಮೊದಲ ಚಿತ್ರ ‘ಯುವ’ ಆಗಿದ್ದು, ಚಿತ್ರಕ್ಕೆ ಯುವರತ್ನ ಖ್ಯಾತಿಯ ಸಂತೋಷ್ ಆನಂದ್ ರಾಮ್ (Santhosh Anandram) ಆಕ್ಷ್ಯನ್ ಹೇಳಿದ್ದಾರೆ, ವಿಜಯ್ ಕಿರಗಂದೂರು (VijayKiragandur) ನಿರ್ಮಾಣ ಮಾಡಿದ್ದು, ಮಾಂತ್ರಿಕ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ (Ajaneesh B Loknath) ಸಂಗೀತ ನೀಡಿದ್ದಾರೆ.
#Yuva #YuvaMovie #Sandalwood #DrRajkumar #rPuneethRajkumar #SanthoshAnandram #AjaneeshLoknath #VijayKiragandur #HombaleFilms #Chamarajanagar #Song #ObbaneShivaObbaneYuva #Chanadanavana