ಬೆಂಗಳೂ್ರು : ಟಿಕೆಟ್ ಆಸೆಗಾಗಿ ಜೆಡಿಎಸ್ನಿಂದ ಕಾಂಗ್ರೆಸ್ಗೆ ಹಾರಿ ಕೈ ಸುಟ್ಟುಕೊಂಡಿದ್ದ ಮಾಜಿ ಸಚಿವ ವೈಎಸ್ವಿ ದತ್ತಾ ಇದೀಗ ಮತ್ತೆ ಜೆಡಿಎಸ್ಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಇಂದು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್ಡಿಡಿ ನಿವಾಸಕ್ಕೆ ಭೇಟಿ ನೀಡಿದ ದತ್ತಾ ಕಡೂರು ಜೆಡಿಎಸ್ ಟಿಕೆಟ್ ತಮಗೆ ಕೊಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಡೂರಿನಿಂದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಬೆಂಬಲಿಗರ ಸಭೆ ಕರೆದಿದ್ದ ವೈಎಸ್ವಿ ದತ್ತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದರು. ಟವೆಲ್ ಗುರುತಿನ ಅಡಿಯಲ್ಲಿ ತಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆಂದು ಘೋಷಣೆ ಕೂಡ ಮಾಡಿದ್ದರು.
ಆದರೆ ಇದೀಗ ಮರಳಿ ದಳಪತಿಗಳ ಬಣ ಸೇರಿಕೊಳ್ಳೋಕೆ ದತ್ತಾ ಪ್ಲಾನ್ ಮಾಡಿದಂತೆ ಕಾಣುತ್ತಿದೆ. ಹೀಗಾಗಿ ಇದೀಗ ದಳಪತಿಗಳ ಮನೆ ಬಾಗಿಲು ತಟ್ಟಿರುವ ದತ್ತಾ ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ.