ಚಿಕ್ಕಮಗಳೂರು : ಟಿಕೆಟ್ ಆಸೆಗಾಗಿ ಕಾಂಗ್ರೆಸ್ ಸೇರಿ ನಿರಾಸೆಗೊಳಗಾಗಿದ್ದ ಮಾಜಿ ಸಚಿವ ವೈಎಸ್ವಿ ದತ್ತಾ ಇಂದು ಜೆಡಿಎಸ್ಗೆ ಮರಳಿ ಬಂದಿದ್ದಾರೆ. ಇಂದು ಕಡೂರು ತಾಲೂಕಿನ ಯುಗಟಿ ಗ್ರಾಮದಲ್ಲಿರುವ ವೈಎಸ್ವಿ ದತ್ತಾ ನಿವಾಸಕ್ಕೆ ಮಾಜಿ ಸಚಿವ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದಾರೆ.

ವೈಎಸ್ವಿ ದತ್ತಾ ನಿವಾಸಕ್ಕೆ ತೆರಳಿದ ರೇವಣ್ಣ ಹಾಗೂ ಪ್ರಜ್ವಲ್ ಅವರಿಗೆ ಕಡೂರು ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಇಂದು ಮಾತನಾಡಿದ ಕಡೂರು ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಧನಂಜಯ್, ಈ ರಾಜಕೀಯ ಬೆಳವಣಿಗೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಜೆಡಿಎಸ್ ವರಿಷ್ಠರು ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ಧ ಎಂದಿದ್ದಾರೆ.