ಹೈದ್ರಾಬಾದ್:ಯುವತಿಯೋರ್ವಳು (young woman)ರಾಮನಗರದ ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ (5th floor)ಜಿಗಿದು( jump )ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಯುವತಿ ಕಟ್ಟದಿಂದ ಜಿಗಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಆಕೆಯ ಭೀಕರ ಅಂತ್ಯವನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.
ರಾಮನಗರದ ಗಿರಿಶಿಖರ ಅಪಾರ್ಟ್ಮೆಂಟ್ನಲ್ಲಿ ಈ ಒಂದು ಘಟನೆ ನಡೆದಿದೆ. ಯುವತಿ ಅಪಾರ್ಟ್ಮೆಂಟ್ನ ಐದನೇ ಮಹಡಿಯಿಂದ ಕೆಳಗೆ ನೆಗೆಯುವ ವಿಡಿಯೋವನ್ನು ಸ್ಥಳೀಯರೆ ಮಾಡಿಕೊಂಡಿದ್ದಾರೆ. ಆಕೆ ಮಹಡಿ ಏರಿ ಕುಳಿತಿದ್ದನ್ನು ಕಂಡ ಜನರು ನೆಗೆಯಬೇಡ, ಆಚೆ ಬಾ ಎಂದು ಕೂಗಿ ಹೇಳಿದ್ದಾರೆ. ಆದ್ರೆ ಕೊಂಚ ಹೊತ್ತು ಸುಮ್ಮನೆ ಕುಳಿತಿದ್ದ ಯುವತಿ ಬಳಿಕ ತಾನು ಕುಳಿತಿದ್ದ ಐದನೇ ಮಹಡಿಯಿಂದ ನೆಗೆದಿದ್ದಾಳೆ.
⚠️ Trigger Warning
— Telugu Scribe (@TeluguScribe) September 14, 2024
ఐదో అంతస్తు నుంచి దూకి మహిళ ఆత్మహత్య
హైదరాబాద్ – రాంనగర్లోని గిరి శిఖర అపార్ట్మెంట్స్ బిల్డింగ్ పైనుంచి దూకి ఆత్మహత్య చేసుకున్న సనా బేగం(23) అనే మహిళ.. అక్కడికక్కడే మృతి
ఆత్మహత్యకు గల కారణాలు తెలియాల్సి ఉంది.. సంఘటన స్థలానికి చేరుకొని వివరాలు… pic.twitter.com/77wofXKIL0
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಸಾನಿಯಾ ಬೇಗಂ ಅಪಾರ್ಟ್ಮೆಂಟ್ನೊಳಕ್ಕೆ ನುಗ್ಗಿ ಕಟ್ಟಡದ ಟೆರಸ್ಗೆ ಬಂದು ಮೊಬೈಲ್ನಲ್ಲಿ ಯಾರದೋ ಜೊತೆ ಮಾತನಾಡುತ್ತಿದ್ದಳಂತೆ. ಇದಾದ ಬಳಿಕ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟಿದ್ದಾಳೆ. ಈ ಘಟನೆಗೆ ಸಾಕ್ಷಿಯಾಗಿದ್ದ ಸ್ಥಳೀಯರು ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆದ್ರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಯುವತಿ ಕಟ್ಟದಿಂದ ಜಿಗಿದ ಸಾವಿಗೆ ಶರಣಾಗಿದ್ದಳು.ಸದ್ಯ ಆತ್ಮಹತ್ಯೆಗೆ ಕಾರಣವೇನು ಅನ್ನೋದನ್ನ ಕಂಡುಹಿಡಿಯುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.