ಮೊವ್ (ಮಧ್ಯಪ್ರದೇಶ):ಬುಧವಾರ ನಸುಕಿನ ವೇಳೆ ಮಧ್ಯಪ್ರದೇಶದ Madhya Pradesh ಇಂದೋರ್ ಜಿಲ್ಲೆಯಲ್ಲಿ ಪಿಕ್ನಿಕ್‌ಗೆ ತೆರಳಿದ್ದ ಇಬ್ಬರು ಯುವ ಸೇನಾ ಅಧಿಕಾರಿಗಳು (army officers)ಮತ್ತು ಅವರ ಇಬ್ಬರು ಮಹಿಳಾ ಸ್ನೇಹಿತರ ಮೇಲೆ ದುಷ್ಕರ್ಮಿಗಳು criminals ದಾಳಿ ಮಾಡಿದ್ದಾರೆ Attacked ಮತ್ತು ಅವರಲ್ಲಿ ಒಬ್ಬರ ಮೇಲೆ ಅತ್ಯಾಚಾರ Rape )ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋವ್ ಕಂಟೋನ್ಮೆಂಟ್ ಪಟ್ಟಣದ ಇನ್‌ಫೆಂಟ್ರಿ ಶಾಲೆಯಲ್ಲಿ ಯುವ ಅಧಿಕಾರಿಗಳ (YO) ಕೋರ್ಸ್ ನಲ್ಲಿ ತರಬೇತಿ ಪಡೆಯುತ್ತಿರುವ 23 ಮತ್ತು 24 ವರ್ಷ ವಯಸ್ಸಿನ ಅಧಿಕಾರಿಗಳು ಮಂಗಳವಾರ ಇಬ್ಬರು ಮಹಿಳಾ ಸ್ನೇಹಿತರ ಜೊತೆಗೆ ಪಿಕ್ನಿಕ್‌ಗೆ ತೆರಳಿದ್ದರು ಎಂದು ಬಡಗೊಂಡ ಪೊಲೀಸ್ ಠಾಣೆಯ ಉಸ್ತುವಾರಿ ಲೋಕೇಂದ್ರ ಸಿಂಗ್ ಹಿರೋರ್ ಹೇಳಿದ್ದಾರೆ.ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮ್ಹೋವ್-ಮಂಡ್ಲೇಶ್ವರ ರಸ್ತೆಯಲ್ಲಿರುವ ಪಿಕ್ನಿಕ್ ಸ್ಪಾಟ್ ಬಳಿಗೆ ಆಗಮಿಸಿದ ಏಳು ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಕುಳಿತಿದ್ದ ಅಧಿಕಾರಿಯೊಬ್ಬರಿಗೆ ಹಾಗೂ ಮಹಿಳೆಯರನ್ನು ಥಳಿಸಲು ಆರಂಭಿಸಿದರು. ಕಾರಿನಿಂದ ದೂರವಿದ್ದ ಎರಡನೇ ಅಧಿಕಾರಿ, ಘಟನೆಯ ಬಗ್ಗೆ ತಮ್ಮ ಹಿರಿಯರಿಗೆ ತಿಳಿಸುವಲ್ಲಿ ಯಶಸ್ವಿಯಾದರು, ನಂತರ ಪೊಲೀಸರು ಸ್ಥಳಕ್ಕೆ ತಲುಪಿದರು ಎಂದು ಹಿರೋರ್ ಹೇಳಿದರು.
ಪೊಲೀಸರನ್ನು ನೋಡಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಎಲ್ಲಾ ನಾಲ್ವರು ಸಂತ್ರಸ್ಥರನ್ನು ಬೆಳಿಗ್ಗೆ 6.30 ರ ಸುಮಾರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮೊವ್ ಸಿವಿಲ್ ಆಸ್ಪತ್ರೆಗೆ ಕರೆತರಲಾಯಿತು ಮತ್ತು ವೈದ್ಯರ ಪ್ರಕಾರ, ಅಧಿಕಾರಿಗಳ ದೇಹದ ಮೇಲೆ ಗಾಯಗಳ ಚಿಹ್ನೆಗಳು ಇವೆ ಎಂದು ಅವರು ಮಾಹಿತಿ ನೀಡಿದರು. ವೈದ್ಯಕೀಯ ಪರೀಕ್ಷೆಯಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿರುವುದು ಪತ್ತೆಯಾಗಿದೆ ಎಂದು ಹಿರೋರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಂದೋರ್ ಗ್ರಾಮಾಂತರ ಎಸ್‌ಪಿ ಹಿತಿಕಾ ವಾಸಲ್, ಲೂಟಿ, ಡಕಾಯಿತಿ, ಅತ್ಯಾಚಾರ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿ ಬೀಡುಬಿಟ್ಟಿದ್ದಾರೆ ಮತ್ತು ದುಷ್ಕರ್ಮಿಗಳ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.