
ಕಲ್ಪೆಟ್ಟಾ (ವಯನಾಡು): ವಯನಾಡು ಭೂ ಕುಸಿತ ಸಂತ್ರಸ್ಥೆ ಶ್ರುತಿ ಅವರ ಬದುಕಿನಲ್ಲಿ ಮತ್ತೊಮ್ಮೆ ದುರಂತ ಸಂಭವಿಸಿದೆ.ಭೀಕರ ವಯನಾಡ್ ಭೂಕುಸಿತ ದುರಂತದಲ್ಲಿ ತನ್ನ ಒಂಬತ್ತು ಸಂಬಂಧಿಕರ ಮರಣದ ನಂತರ, ನಿನ್ನೆ ರಸ್ತೆ ಅಪಘಾತದಲ್ಲಿ ಆಕೆ ತನ್ನ ಪತಿಯನ್ನು ಕಳೆದುಕೊಂಡಳು ಈ ದುರ್ಘಟನೆಯಲ್ಲಿ ಶೃತಿಯ ಕಾಲಿಗೆ ಪೆಟ್ಟು ಬಿದ್ದಿದ್ದು, ತಂಗಿಗೂ ಗಾಯಗಳಾಗಿದ್ದು, ಶೃತಿಯ ಸಂಕಷ್ಟ ಇನ್ನೂ ಮುಂದುವರೆದಿದೆ.
ವಯನಾಡಿನ ವೆಲ್ಲರಂಕುನ್ನು ಎಂಬಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಅಂಬಲವಾಯಲ್‌ನ ಅಂದೂರ್ ಮೂಲದ ಜೆನ್ಸನ್ ಸಾವನ್ನಪ್ಪಿದ್ದಾರೆ ಎಂದು ಕೇರಳ ಪೊಲೀಸರು ಬುಧವಾರ ತಿಳಿಸಿದ್ದಾರೆ. ಮುಂಡಕೈ-ಚುರಲ್ಮಲಾ ಭೂಕುಸಿತದಲ್ಲಿ ಆಕೆಯ ಪೋಷಕರು ಮತ್ತು ಒಬ್ಬ ಸಹೋದರಿ ಸೇರಿದಂತೆ ಒಂಬತ್ತು ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು.ಜೆನ್ಸನ್ ಅವರು ಚಿಕಿತ್ಸೆ ಪಡೆಯುತ್ತಿದ್ದ ಮೆಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರ ಸಂಜೆ ಕೋಝಿಕ್ಕೋಡ್-ಕೊಳ್ಳಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವೆಲ್ಲರಂಕುನ್ನು ಬಳಿ ಈ ದುರ್ಘಟನೆ ಸಂಭವಿಸಿದೆ.
“ಜೆನ್ಸನ್ ಮತ್ತು ಅವರ ಸಹಚರರು ಲಕಿಟಿ ಕಡೆಗೆ ಪ್ರಯಾಣಿಸುತ್ತಿದ್ದ ವ್ಯಾನ್ ಕೋಝಿಕ್ಕೋಡ್‌ನಿಂದ ಸುಲ್ತಾನ್‌ಬತ್ತೇರಿಗೆ ಬರುತ್ತಿದ್ದ ‘ಬಟರ್‌ಫ್ಲೈ’ ಬಸ್‌ಗೆ ಡಿಕ್ಕಿ ಹೊಡೆದಿದೆ. ವ್ಯಾನ್‌ನಲ್ಲಿ ಸಿಲುಕಿದ್ದ ಜನರನ್ನು ಕಲ್ಪಟ್ಟಾದಿಂದ ಬಂದ ಅಗ್ನಿಶಾಮಕ ರಕ್ಷಣಾ ತಂಡ ಮತ್ತು ಸ್ಥಳೀಯರು ಹೊರತೆಗೆದಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ. ಜೆನ್ಸನ್ ಮತ್ತು ಶ್ರುತಿ ಸೇರಿದಂತೆ ವ್ಯಾನ್‌ನಲ್ಲಿದ್ದ ಕನಿಷ್ಠ ಒಂಬತ್ತು ಜನರಿಗೆ ಗಾಯಗಳಾಗಿವೆ. ಜೆನ್ಸನ್ ವ್ಯಾನ್ ಓಡಿಸುತ್ತಿದ್ದ. ಶೃತಿ ಅವರ ಕಾಲಿಗೆ ಸಣ್ಣ ಗಾಯವಾಗಿದೆ ಎಂದು ಅವರು ಹೇಳಿದರು, ಅಪಘಾತದ ಸಿಸಿಟಿವಿ ದೃಶ್ಯಗಳನ್ನು ನಂತರ ಬಿಡುಗಡೆ ಮಾಡಲಾಗಿದೆ. ಈ ದುರ್ಘಟನೆಯಲ್ಲಿ ಶ್ರುತಿ ಅವರ ಸೋದರ ಸಂಬಂಧಿ ಲಾವಣ್ಯ ಕೂಡ ಗಾಯಗೊಂಡಿದ್ದಾರೆ. ವಯಾನಂದ ಭೂಕುಸಿತದಲ್ಲಿ ಲಾವಣ್ಯ ತನ್ನ ಹೆತ್ತವರು ಮತ್ತು ಸಹೋದರನನ್ನು ಕಳೆದುಕೊಂಡರು. ಲಾವಣ್ಯ ಶೃತಿ ಅವರ ತಂದೆ ಶಿವಣ್ಣ ಅವರ ಸಹೋದರ ಸಿದ್ದರಾಜು ಅವರ ಮಗಳು.