• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನೀನೊಬ್ಬ ಹುಚ್ಚ ರಾಜ, ನಾನಿಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ : ನೆತನ್ಯಾಹು ವಿರುದ್ಧ ಟ್ರಂಪ್‌ ವಾಗ್ದಾಳಿ..

ಹಿಜ್ಬುಲ್ಲಾ ಮಧ್ಯವರ್ತಿಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ : ಡೊನಾಲ್ಡ್‌ ಟ್ರಂಪ್‌..

ಪ್ರತಿಧ್ವನಿ by ಪ್ರತಿಧ್ವನಿ
June 2, 2026
in Top Story, ಇದೀಗ, ರಾಜಕೀಯ, ವಿದೇಶ
0
ನೀನೊಬ್ಬ ಹುಚ್ಚ ರಾಜ, ನಾನಿಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ : ನೆತನ್ಯಾಹು ವಿರುದ್ಧ ಟ್ರಂಪ್‌ ವಾಗ್ದಾಳಿ..
Share on WhatsAppShare on FacebookShare on Telegram
ADVERTISEMENT

ನವದೆಹಲಿ : ಮಧ್ಯಪ್ರಾಚ್ಯದ ಲೆಬನಾನ್‌ನಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಆತಂಕದ ನಡುವೆಯೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮಧ್ಯಸ್ಥಿಕೆಯ ನಂತರ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿದೆ.

Laxman Hoogar : ನೀರಿಗಾಗಿ ಸರ್ಕಾರದ ವಿರುದ್ದ ಅನ್ನದಾತರ ಹೋರಾಟ..! #protest #water

ಲೆಬನಾನ್ ಮೇಲೆ ಮತ್ತೆ ದಾಳಿಗೆ ಸಜ್ಜಾಗಿದ್ದ ಇಸ್ರೇಲ್ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಉಭಯ ರಾಷ್ಟ್ರಗಳು ದಾಳಿಗಳನ್ನು ನಿಲ್ಲಿಸಲು ಒಪ್ಪಿವೆ ಎಂದು ಟ್ರಂಪ್ ಹೇಳಿದ್ದಾರೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಯುದ್ಧದ ಭೀತಿಯನ್ನು ಸದ್ಯಕ್ಕೆ ದೂರ ಮಾಡಿದಂತಾಗಿದೆ.

ಇದು ಸಾವಿರಾರು ಜನರನ್ನು ಬಲಿತೆಗೆದುಕೊಂಡ ಮತ್ತು ಇರಾನ್‌ನೊಂದಿಗಿನ ಸಂಘರ್ಷವನ್ನು ತಗ್ಗಿಸಿದಂತಾಗಿದೆ.  ಅಮೆರಿಕದ ಲೆಬನಾನ್‌ನ ರಾಯಭಾರ ಕಚೇರಿಯ ಪ್ರಕಾರ, ಈ ಒಪ್ಪಂದವು ದೇಶದಲ್ಲಿ ಸಂಘರ್ಷವನ್ನು ಕೊನೆಗೊಳಿಸುವುದಿಲ್ಲ, ಆದರೆ ಬೈರುತ್ ಮತ್ತು ಹಿಜ್ಬುಲ್ಲಾ ನಿಯಂತ್ರಿಸುವ ಅದರ ಉಪನಗರಗಳ ಮೇಲಿನ ದಾಳಿಗಳಿಂದ ಇಸ್ರೇಲ್ ದೂರವಿರಬೇಕೆಂದು  ಸೂಚಿಸುತ್ತದೆ, ಆದರೆ ಇರಾನ್-ಸಮನ್ವಯ ಗುಂಪು ಇಸ್ರೇಲ್ ಮೇಲಿನ ದಾಳಿಯನ್ನು ತಡೆಯಲಿದೆ.

ಲೆಬನಾನ್‌ನಲ್ಲಿ ಇಸ್ರೇಲ್‌ನ ನಡೆಸಲು ಉದ್ದೇಶಿಸಿದ ದಾಳಿಯ ವಿಚಾರದಲ್ಲಿ ಯಾವುದೇ ರೀತಿಯ ಮಧ್ಯಸ್ಥಿಕೆಯ ಅವಶ್ಯಕತೆಯಿಲ್ಲ ಎಂದು ಇರಾನ್‌ ಹೇಳಿದೆ. ಅಲ್ಲದೆ ಅಲ್ಲಿ ಅಮೆರಿಕದ ಮಿತ್ರ ರಾಷ್ಟ್ರ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಮತ್ತೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.

ಇದನ್ನೂ ಓದಿ : ತಮಿಳುನಾಡು ಸಿಎಂ ವಿಜಯ್ ಹೇಳಿಕೆ ಭಾರಿ ಚರ್ಚೆ!

ಕಳೆದ ಮಾರ್ಚ್‌ನಲ್ಲಿ ಇಸ್ರೇಲ್ ಆಕ್ರಮಿಸಿದ್ದ ದಕ್ಷಿಣ ಲೆಬನಾನ್‌ನಲ್ಲಿ ಸೋಮವಾರ ಸಂಜೆಯೂ ಯುದ್ಧ ಮುಂದುವರೆಯಿತು. ಇಂದು ಮುಂಜಾನೆ, ಇಸ್ರೇಲಿ ಸೇನೆಯು ಲೆಬನಾನ್‌ನಿಂದ ಉತ್ತರ ಇಸ್ರೇಲ್‌ಗೆ ಸಾಗಿಸುತ್ತಿದ್ದ ಎರಡು ಸ್ಪೋಟಕಗಳನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ಕದನ ವಿರಾಮ ಒಪ್ಪಂದವನ್ನು ಮೊದಲು ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಿಜ್ಬುಲ್ಲಾ ಮಧ್ಯವರ್ತಿಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಯಾವುದೇ ಅಮೆರಿಕದ ಅಧ್ಯಕ್ಷರು ಮಧ್ಯವರ್ತಿಗಳೊಂದಿಗೆ ಅಥವಾ ಇಲ್ಲದೆ ಹಿಜ್ಬೊಲ್ಲಾ ಜೊತೆ ಮಾತನಾಡಿಲ್ಲ. ಅಮೆರಿಕವು ಈ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದೆ ಎಂಧು ಹೇಳಿದ್ದಾರೆ.

ಮುಖ್ಯವಾಗಿ ಯುದ್ಧವನ್ನು ಕೊನೆಗೊಳಿಸಲು, ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಮತ್ತು ಇರಾನ್‌ನ ಪರಮಾಣು ತಯಾರಿಕೆಯ ಮೇಲೆ ನಿಯಂತ್ರಣಗಳನ್ನು ಹೇರುವುದರ ಜೊತೆಗೆ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್‌ ದಾಳಿಯನ್ನು ಅಮೆರಿಕ ಬೆಂಬಲಿಸಿದೆ.

ಆದರೆ ಇರಾನ್ ಸೋಮವಾರ ಮತ್ತೆ ಪರಮಾಣು ಮಾತುಕತೆಗೆ ನಡೆಸಿಲ್ಲ ಎಂದು ಹೇಳಿದ್ದು, ನಾವು ಯಾವುದೇ ದೊಡ್ಡ ಒಪ್ಪಂದಕ್ಕೆ ಮುಂದಾಗುವ ಮುನ್ನ ಇಸ್ರೇಲ್‌ ಲೆಬನಾನ್ ಮೇಲಿನ ಆಕ್ರಮಣವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ಈ ನಡುವೆ ಬೈರುತ್ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸುತ್ತಿರುವ ಯಾವುದೇ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

Samarth Shamanur : ಮಂತ್ರಿ ಸ್ಥಾನದ ಬಗ್ಗೆ ಸಮರ್ಥ್ ಶಾಮನೂರು ಹೇಳಿದ್ದೇನು..? #dkshivakumar #siddaramaiah

ಟ್ರಂಪ್ ಕದನ ವಿರಾಮ ಘೋಷಣೆಯ ನಂತರ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿ ಮಿಲಿಟರಿ ದಾಳಿಗಳನ್ನು ಮುಂದುವರಿಸುತ್ತೇನೆ ಎಂದಿದ್ದಾರೆ. ಆ ಪ್ರದೇಶದಲ್ಲಿ ಭೂ ಸೇನೆ ಜಹರಾನಿ ನದಿಯ ಕಡೆಗೆ ನುಗ್ಗುತ್ತಿದೆ, ಇದು 25 ವರ್ಷಗಳಲ್ಲಿ ಲೆಬನಾನ್‌ನಲ್ಲಿ ಇಸ್ರೇಲ್‌ ನಡೆಸುತ್ತಿರುವ ಅತ್ಯಂತ ದೊಡ್ಡ ಆಕ್ರಮಣವಾಗಿದೆ.

ನೆತನ್ಯಾಹು ವಿರುದ್ಧ ಟ್ರಂಪ್ ವಾಗ್ದಾಳಿ

ಇಸ್ರೇಲ್ ಲೆಬನಾನ್ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿರುವ ಬಗ್ಗೆ ದೂರವಾಣಿ ಕರೆಯಲ್ಲಿ ಟ್ರಂಪ್ ತಮ್ಮ ಕಟ್ಟಾ ಮಿತ್ರರಲ್ಲಿ ಒಬ್ಬರಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ತರಾಟೆಗೆ ತೆಗೆದುಕೊಂಡರು. ನೀವು ಏನು ಮಾಡುತ್ತಿದ್ದೀರಿ? ಎಂದು ಟ್ರಂಪ್‌ ಮಿತ್ರನ ಮೇಲೆ ರೇಗಾಡಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿರುವ ವರದಿಗಳು ಬಂದಿವೆ.

ಫೋನ್‌ ಕರೆಯಲ್ಲಿ ಟ್ರಂಪ್ ನೆತನ್ಯಾಹು ವಿರುದ್ಧ ಆಕ್ರೋಶ ವ್ಯಕ್ತಪಡಿಸಿ “ಹುಚ್ಚ” ಎಂದು ಕಿಡಿಕಾರಿದ್ದಾರೆ.  ನೀನು ಕೃತಜ್ಞತೆಯಿಲ್ಲದವನು ಎಂದು ಟೀಕಿಸಿದ್ದಾರೆ. “ನೀನು ಹುಚ್ಚ ರಾಜ. ನಾನು ಇಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ. ನಾನು ನಿನ್ನನ್ನು ರಕ್ಷಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಾರೆ. ಇದರಿಂದಾಗಿ ಎಲ್ಲರೂ ಇಸ್ರೇಲ್ ಅನ್ನು ದ್ವೇಷಿಸುತ್ತಾರೆ ಎಂದು ಟ್ರಂಪ್‌ ನೆತನ್ಯಾಹು ವಿರುದ್ಧ ಕೆಂಡಾಮಂಡಲರಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.‌

ಇರಾನ್‌ನೊಂದಿಗೆ ಹೊಸ ಶಾಂತಿ ಒಪ್ಪಂದ ಮಾಡಿಕೊಳ್ಳಲು ನಾವು ಕತಾರ್ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸುವ ಪ್ರಯತ್ನ ನಡೆಸುತ್ತಿದ್ದೇವೆ. ಇಸ್ರೇಲ್ ಮಾಡುತ್ತಿರುವ ದಾಳಿಗಳು ಈ ಮಾತುಕತೆಯನ್ನು ಸಂಪೂರ್ಣವಾಗಿ ಹಳಿತಪ್ಪಿಸುತ್ತಿವೆ ಮತ್ತು ಇರಾನ್ ಮಾತುಕತೆಯಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೈರೂತ್ ಮೇಲೆ ನಡೆಸಲು ಯೋಜಿಸಿರುವ ಮುಂದಿನ ಮಿಲಿಟರಿ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಇರಾನ್ ಮೇಲಿನ ದಾಳಿಯ ಆಲೋಚನೆಯನ್ನು ಸದ್ಯಕ್ಕೆ ಬದಿಗಿಡಬೇಕು ಎಂದು ಖಡಕ್ ಆದೇಶ ನೀಡಿದ್ದಾರೆ.

ಇರಾನ್ ಮೇಲಿನ ಮಿಲಿಟರಿ ಒತ್ತಡವನ್ನು ಕಡಿಮೆ ಮಾಡುವುದು ದೊಡ್ಡ ತಪ್ಪು ಮತ್ತು ಇರಾನ್ ಕೇವಲ ಸಮಯ ವ್ಯರ್ಥ ಮಾಡುತ್ತಿದೆ ಎಂದು ನೆತನ್ಯಾಹು ವಾದಿಸಿದ್ದಾರೆ. ಅಮೆರಿಕದ ಈ ಶಾಂತಿ ಪ್ರಸ್ತಾಪದಿಂದ ನೆತನ್ಯಾಹು ತೀವ್ರ ಆತಂಕಕ್ಕೆ ಒಳಗಾಗಿದ್ದು, ಕರೆಯ ನಂತರ ಅವರು ತೀವ್ರ ತಲ್ಲಣಗೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನೊಂದೆಡೆ ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿ ನಡೆಸಿದರೆ ನಾವು ನಿಮ್ಮೊಂದಿಗೆ ಶಾಂತಿ ಮಾತುಕತೆಗೆ ಬರುವುದಿಲ್ಲ ಎಂದು ಕಡ್ಡಿ ಮುರಿದಂತೆ ಇರಾನ್‌ ಹೇಳಿದೆ.

Tags: American PrsidentBenjamin netanyahuByruthDonald Trumpinternational newsiran israel warisrael warLebonanMiddle east ConflictsMiddle East CrisisPhone ConversationPratidhvaniStrait Of Hormuz
Previous Post

ಶ್ರಮ ಮಾರುಕಟ್ಟೆ ಮತ್ತು ಮಹಿಳಾ ಸ್ವಾಯತ್ತತೆ

Next Post

ರಾಜೀವ್‌ ನನ್ನ ಸಾಮರ್ಥ್ಯ ಗುರುತಿಸಿದ್ರು, ಸೋನಿಯಾ ನಾಯಕತ್ವದ ಪಾಠ ಹೇಳಿದ್ರು : ಗಾಂಧಿ ಕುಟುಂಬ ಕೊಂಡಾಡಿದ ಡಿಕೆ ಶಿವಕುಮಾರ್

Related Posts

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!
Top Story

ವೈರಲ್ ಫೋಟೋ ನೋಡಿ ಕಳವಳಗೊಂಡ ಅಭಿಮಾನಿಗಳು: ದರ್ಶನ್ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

by ಪ್ರತಿಧ್ವನಿ
June 2, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರದ್ದು ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಫೋಟೋದಲ್ಲಿ ದರ್ಶನ್ ಅವರ ಆರೋಗ್ಯ...

Read moreDetails
ದುರ್ಗಾ ಸ್ಟಾಲಿನ್–ಜಿ.ಟಿ. ದೇವೇಗೌಡ ಭೇಟಿ ರಾಜಕೀಯ ಸಂಚಲನ: ಪ್ರವಾಸದ ನಡುವೆ ನಡೆದ ಮಾತುಕತೆ ?

ದುರ್ಗಾ ಸ್ಟಾಲಿನ್–ಜಿ.ಟಿ. ದೇವೇಗೌಡ ಭೇಟಿ ರಾಜಕೀಯ ಸಂಚಲನ: ಪ್ರವಾಸದ ನಡುವೆ ನಡೆದ ಮಾತುಕತೆ ?

June 2, 2026
ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

ಸಿಎಂ ಕುರ್ಚಿಗೆ ವಾಸ್ತು ಸ್ಪರ್ಶ: ಪ್ರಮಾಣವಚನಕ್ಕೂ ಮುನ್ನ ಡಿಕೆ ಶಿವಕುಮಾರ್ ಕೊಠಡಿಯಲ್ಲಿ ಅಜ್ಜಯ್ಯನ ಚಿತ್ರ ಅಳವಡಿಕೆ

June 2, 2026
ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

June 2, 2026
ಅಥಣಿ PSI ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಕೀಲರ ಸಂಘ : FIR ದಾಖಲಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ..!

ಅಥಣಿ PSI ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಕೀಲರ ಸಂಘ : FIR ದಾಖಲಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ..!

June 2, 2026
Next Post
ರಾಜೀವ್‌ ನನ್ನ ಸಾಮರ್ಥ್ಯ ಗುರುತಿಸಿದ್ರು, ಸೋನಿಯಾ ನಾಯಕತ್ವದ ಪಾಠ ಹೇಳಿದ್ರು : ಗಾಂಧಿ ಕುಟುಂಬ ಕೊಂಡಾಡಿದ ಡಿಕೆ ಶಿವಕುಮಾರ್

ರಾಜೀವ್‌ ನನ್ನ ಸಾಮರ್ಥ್ಯ ಗುರುತಿಸಿದ್ರು, ಸೋನಿಯಾ ನಾಯಕತ್ವದ ಪಾಠ ಹೇಳಿದ್ರು : ಗಾಂಧಿ ಕುಟುಂಬ ಕೊಂಡಾಡಿದ ಡಿಕೆ ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada