ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮ ಜನ್ಮಭೂಮಿ ಅಯೋಧ್ಯೆ ದೇಶದ ರಾಷ್ಟ್ರ ಮಂದಿರವಾಗುತ್ತದೆ ಎಂದು ಗರ್ಭಗುಡಿ ಅಡಿಗಲ್ಲು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಮುಂದಿವರೆದು, ರಾಮಮಂದಿರವು ದೇಶದ ಸನಾತನ ಧರ್ಮದ ಅನುಯಾಯಿಗಳ ನಂಬಿಕೆಯ ಪ್ರತೀಕವಾಗಿದೆ. ರಾಮಮಂದಿರ ಅಂದೋಲನವನ್ನ ಜೀವಂತವಾಗಿಟ್ಟ ಪ್ರತಿಯೊಬ್ಬರಿಗು ಇಂದು ಸಂತಸದ ದಿನ. ವಿದೇಶಿ ಅನ್ವೇಷನಕಾರರ ವಿರುದ್ದ ಜಯ ಎಂದು ಬಣ್ಣಿಸಿದ್ದಾರೆ.
ದೇಶದ ವಿವಿಧ ಭಾಗಗಳ ನೂರಾರು ಸಾಧು ಸಂತರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಟ್ರಸ್ಟ್ ಪ್ರಕಾರ ದೇವಸ್ಥಾನ ನಿರ್ಮಾಣ ಕಾರ್ಯವು 2024ಕ್ಕೆ ಪೂರ್ಣಗೊಳ್ಳಲಿದೆ.