ಅನ್ನಪೂರ್ಣೆಶ್ವರಿ ಪೊಲೀಸ್ ಠಾಣೆ (Police station)ಬಳಿಯಿದ್ದ ಮಾಧ್ಯಮದವರ ಮೇಲೆ ಎಸಿಪಿ ಭರತ್ ರೆಡ್ಡಿ (ACP Bharath reddy) ದರ್ಪ ತೋರಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಠಾಣೆ ಹತ್ತಿರ ಬಂದ್ರೆ ಮಾಧ್ಯಮದವರ ಮೇಲೆ ಲಾರಿ ಚಾರ್ಜ್ ಮಾಡಲು ಸೂಚನೆ ನೀಡಿದ್ದಲ್ಲದೇ, ಸ್ಟೇಷನ್ ಗೇಟ್ ಬಳಿ ಇದ್ದ ರಿಪೋರ್ಟ್‌್ರಗಳನ್ನ ತಳ್ಳಿದ್ದಾರೆ.

ಆರೋಪಿಗಳ ಕಾರು ಸೀಜ್ ಮಾಡಿದ ಕಾರುಗಳ ವಿಶೂಯಲ್ಸ್ ತೆಗೆಯಲು ಹೋದಾಗ ಠಾಣೆ ಮುಂದೆಯಿದ್ದ ಪತ್ರಕರ್ತರನ್ನ ತಳ್ಳಿ ದರ್ಪ ತೋರಿದ್ದಾರೆ. ಅತ್ತ, ಎಸಿಪಿ ಭರತ್ ರೆಡ್ಡಿ ಆರೋಪಿಗಳನ್ನ ತಪ್ಪಿಸಲು ಈ ರೀತಿ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಶುರುವಾಗಿದೆ.
ಇಷ್ಟೆಲ್ಲದರ ಮಧ್ಯೆ ಇಂದು ಬೆಳಿಗ್ಗೆ ಅನ್ನಪೂರ್ಣೇಶ್ವರಿ ನಗರ ಪೋಲಿಸ್ ಠಾಣೆಗೆ ಸುತ್ತಲೂ ಪೆಂಡಾಲ್ ಹಾಕಿಸಲಾಗಿದೆ. 12 ಅಡಿಗಳ ಕಾಂಪೌಂಡ್ ಇದ್ದರೂ ಅದನ್ನೂ ಮೀರಿ ಮಾಧ್ಯಮದವರಿಗೆ ಯಾವುದೇ ವಿಶ್ಯುವಲ್ಸ್ ಸಿಗಬಾರದ್ದು ಎಂಬ ಕಾರಣಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೇ ಪೋಲಿಸ್ ಠಾಣೆಗೆ ಪೆಂಡಾಲ್ ಹಾಕಿಸಿದ್ದು ಚರ್ಚೆಗೆ ಕಾರಣವಾಗಿದೆ.

ಈ ಮಧ್ಯೆ ಮೊನ್ನೆಯಷ್ಟೇ ಪೋಲಿಸ್ ಸ್ಟೇಷನ್‌ಗೆ ಬಿರಿಯಾನಿ (Biryani) ತರಿಸಿದ್ದ ಪೋಲಿಸರು, ಇದೀಗ ಪೆಂಡಾಲ್ ಹಾಕಿಸಿದ್ದು, ಪ್ರಕರಣದ ದಿಕ್ಕಿ ತಪ್ಪುತ್ತಿದೆಯಾ ಎಂಬ ಚರ್ಚೆ ಸಾರ್ವಜನಿಕವಲಯದಲ್ಲಿ ಜೋರಾಗಿದೆ.