ನಾವು ನಕ್ಕಾಗ ಜನ ನೋಡುವುದು ನಮ್ಮ ಹಲ್ಲುಗಳನ್ನು.ನಮ್ಮ ಹಲ್ಲುಗಳು ಸ್ವಚವಾಗಿ ಇರಬೇಕು ಎಂದು ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ವಿವಿಧ ಬಗೆಯ ಪೇಸ್ಟ್ ಗಳನ್ನ ಬಳಸಿ ಹಲ್ಲುಜ್ಜುತ್ತಾರೆ..
ಹಲ್ಲುಗಳು ಹಳದಿ ಇದ್ದರೆ ನಗಲು ಮುಜುಗರ ಅಥವ ಹಿಂಜರಿಯುತ್ತಾರೆ..ಹಾಗು ಮುಖದ ಅಂದವನ್ನ ಕೆಡಿಸುತ್ತದೆ ಈ ಹಳದಿ ಹಲ್ಲುಗಳು.. ಹಲ್ಲುಗಳು ಮುತ್ತಿನಂತೆ ಕಾಣ್ಬೇಕು ಬಿಳಿ ಆಗ್ಬೇಕು ಅಂದ್ರೆ ಕೆಲವು ಟಿಪ್ಸ್ ನ ಟ್ರೈ ಮಾಡ್ತಾರೆ..ಆದ್ರೆ ಇದೆಲ್ಲದರ ಜೊತೆಗೆ ನಾವು ಸೇವಿಸುವ ಕೆಲವು ಪದಾರ್ಥಗಳಿಂದ ಕೂಡ ಹಲ್ಲುಗಳು ಹಳದಿಯಾಗುತ್ತದೆ..ಯಾವ ಪದಾರ್ಥಗಳಿಂದ ಹಲ್ಲುಗಳು ಅರಿಶಿನ ಬಣ್ಣ ಆಗುತ್ತದೆ ಅನ್ನುವ ಮಾಹಿತಿ ಹೀಗಿದೆ..
- ಕಾಫಿ ಅಥವಾ ಟೀಯನ್ನ ಅದರಲ್ಲೂ ಕೂಡ ಬ್ಲಾಕ್ ಟೀಯನ್ನು ಹೆಚ್ಚಾಗಿ ಕುಡಿಯುವುದರಿಂದ ಹಲ್ಲುಗಳು ಹಳದಿಯಾಗುತ್ತವೆ ಹಾಗೂ ಹಲ್ಲುಗಳ ಹಿಂದೆ ಕಪ್ಪಾಗುವ ಚಾನ್ಸಸ್ ಕೂಡ ಜಾಸ್ತಿ ಇರುತ್ತದೆ ಕಾರಣ ಇದರಲ್ಲಿ ಕೆಫೀನ್ ಅಂಶ ಹೆಚ್ಚಿರುತ್ತದೆ.ಮುಖ್ಯವಾಗಿ ಕ್ರೋಮೊಜೆನ್ಗಳು ಇರುತ್ತದೆ ಇವು ಹಲ್ಲುಗಳನ್ನು ಹಳದಿ ಕಲೆ ಮಾಡುತ್ತದೆ.
- ರೆಡ್ ವೈನ್ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅದರಲ್ಲೂ ತ್ವಚೆಯ ಹೊಳಪು ಹೆಚ್ಚಾಗುತ್ತದೆ ಕಲೆಯಿಂದ ಮುಕ್ತಿ ಸಿಗುತ್ತದೆ. ಆದರೆ ರೆಡ್ ವೈನ್ ನಮ್ಮ ಹಲ್ಲುಗಳನ್ನ ಹಳದಿ ಕಟ್ಟುಸುತ್ತದೆ.
- ಎನರ್ಜಿ ಡ್ರಿಂಕ್ ಸಾಕಷ್ಟು ಬಾರಿ ನಾವು ದಣಿದಾಗ ಅಥವಾ ಶೆಕೆ ಸುಸ್ತು ಹೆಚ್ಚಾದಾಗ ಎನರ್ಜಿ ಡ್ರಿಂಕ್ ನ ಕುಡಿಯುತ್ತಿವಿ. ಇದು ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಜೊತೆಗೆ ಹಲ್ಲುಗಳನ್ನ ಹಳದಿ ಮಾಡುತ್ತದೆ.
- ನಾವು ಸೇವಿಸುವ ಫ್ರೂಟ್ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಹಣ್ಣುಗಳು ಅಂದ್ರೆ ಬೆರ್ರೀಸ್, ದಾಳಿಂಬೆ ಹಾಗೂ ದ್ರಾಕ್ಷಿ ಹಣ್ಣಿನ ಜ್ಯೂಸ್ ನ ಕುಡಿಯುವುದರಿಂದ ಹಲ್ಲುಗಳು ಹಳದಿಯಾಗುತ್ತವೆ.
- ಟೊಮ್ಯಾಟೋ ಹಣ್ಣು ಅಥವಾ ಟೊಮೊಟೊ ಸಾಸ್ ಬಳಸುವುದರಿಂದ ಹಾಗೂ ಅರಿಶಿಣವನ್ನ ಸೇವಿಸುವುದರಿಂದ ಹಲ್ಲುಗಳು ಹಳದಿ ಕಟ್ಟುತ್ತವೆ ಕಾರಣ ಇದರಲ್ಲಿ ಪಿಗ್ಮೆಂಟ್ಸ್ ಹೆಚ್ಚಿರುತ್ತದೆ ಹಾಗಾಗಿ ಎಲ್ಲೋ ಟೀತ್ ನಿಮ್ಮದಾಗುತ್ತಾದೇ.
- ಕಾಫಿ ಟೀ ಜೊತೆಗೆ ಡಾರ್ಕ್ ಚಾಕಲೇಟ್ ಸೇವಿಸುವುದರಿಂದ ಕೂಡ ಹಲ್ಲಿನ ಅಥವಾ ದಂತಕವಚದಲ್ಲಿ ಕಲೆಗಳು ಹೆಚ್ಚಾಗುತ್ತದೆ. ಕಾರಣ ಇವುಗಳಲ್ಲಿ ಹೆಚ್ಚಿರುತ್ತದೆ.
- ಹಾಗೂ ಬೀಟ್ರೂಟ್ಸ್ ಕ್ಯಾರೆಟ್ ಹಾಗೂ ಸ್ಪಿನಾಚ್ ಅನ್ನ ಸೇವಿಸುವುದರಿಂದ ಕೂಡ ಹಲ್ಲುಗಳು ಹಳದಿಯಾಗುತ್ತದೆ.