ಬಾಗಲಕೋಟೆಯ ತೇರದಾಳದಲ್ಲಿ ವಕ್ಫ್ ವಿರುದ್ಧ ಜನ ವಿರೋಧಿ ಆಂದೋಲನ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನಡೆಸಿದ್ರು. ಗಾಂಧಿ ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಎನ್. ಆರ್ ಸಂತೋಷ ಭಾಗಿ ಆಗಿದ್ದರು. ವಕ್ಫ್ ವಿರುದ್ಧ ಹೋರಾಟಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಬೆಂಬಲ ವ್ಯಕ್ತಪಡಿಸಿದರು.
ಬಾಗಲಕೋಟೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಬನಹಟ್ಟಿಯಲ್ಲಿ ಮಾತನಾಡಿ, ತೇರದಾಳದಲ್ಲಿ ವಕ್ಪ್ ವಿರೋಧಿ ಆಂದೋಲನ ಸಭೆಯಲ್ಲಿ ಭಾಗಿಯಾಗಿದ್ದೇನೆ. ತೇರದಾಳದಲ್ಲೂ ನೂರಾರು ಎಕರೆ ವಕ್ಫ್ ಆಸ್ತಿ ಅಂತ ಆಗಿದೆ. ಯತ್ನಾಳ್ ನೇತೃತ್ವದ ಹೋರಾಟಕ್ಕೆ ಅಸಮಾಧಾನ ಅನ್ನೋ ವಿಚಾರಕ್ಕೆ ಕೌಂಟರ್ ಕೊಟ್ಟಿದ್ದು, ನಾನು 22ರಂದು ವಿಜಯೇಂದ್ರ ಅವರು ಕರೆ ಕೊಟ್ಟಾಗಲೂ ಪ್ರತಿಭಟನೆಗೆ ಹೋಗಿ ಬಂದಿದ್ದೇನೆ. ಪಕ್ಷದ ಕಾರ್ಯಕ್ಕೆ ಯಾರೇ ಕರೆದರೂ ನಾನು ಹೋಗ್ತಿನಿ. ಯತ್ನಾಳ್ ವಕ್ಫ್ ಬಗ್ಗೆ ದೊಡ್ಡ ಹೋರಾಟ ಮಾಡಿದ್ದಾರೆ. ಆ ಹೋರಾಟದಲ್ಲಿ ಶೋಭಾ ಕರಂದ್ಲಾಜೆ ಕೂಡ ಭಾಗಿಯಾಗಿದ್ದರು. ಇದರಲ್ಲಿ ಬಣ ಅಂತ ಏನಿದೆ..? ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಹಾಗೂ ಟೀಮ್ ವಿರುದ್ಧ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪನೆ ಬಗ್ಗೆ ಮಾತಾಡೋದಿಲ್ಲ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗ ಹೂಗುಚ್ಚ ಹಿಡಿದು ಸಿದ್ದರಾಮಯ್ಯ ಮನೆಗೆ ಹೋದಂತವರು, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮನೆಗೆ ಹೋಗಿ ಕಾಲು ಹಿಡಿದವರ ಬಗ್ಗೆ ತಿಪ್ಪೆಗೆ ಸೇರಿದವರ ಬಗ್ಗೆ ಮಾತಾಡೋದಿಲ್ಲ ಎನ್ನುವ ಮೂಲಕ ಪ್ರತಾಪ್ ಸಿಂಹ ಕೌಂಟರ್ ಕೊಟ್ಟಿದ್ದಾರೆ.
ದೆಹಲಿಯಿಂದ ವಾಪಸ್ ಆದ ಬಳಿಕ ವಿಜಯೇಂದ್ರ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಒಂದು ದಿನ ಸರಿ 2 ದಿನ ಸರಿ ಎಷ್ಟು ದಿನ ಸುಮ್ಮನಿರೋದು..? ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ. ದಿನ ಬೆಳಗಾದ್ರೆ ಯಡಿಯೂರಪ್ಪ, ನನ್ನನ್ನ ಟೀಕಿಸೋದೇ ಕೆಲಸ. ಯತ್ನಾಳ್ ವಿರುದ್ಧ ನೇರಾನೇರ ವಾಗ್ದಾಳಿ ಮಾಡಿದ್ದಾರೆ ವಿಜಯೇಂದ್ರ. ವಿಜಯೇಂದ್ರ ಸುಮ್ಮನಿದ್ದಾನೆ ಅಂದ್ರೆ ಅದು ಅಸಮರ್ಥತೆ ಅಲ್ಲ. ನನ್ನನ್ನ ಬದಲಿಸ್ತೀನಿ ಅನ್ನೋ ಭ್ರಮೆಯಲ್ಲಿದ್ರೆ ಅದು ಸಾಧ್ಯವಿಲ್ಲ ಎಂದಿರುವ ವಿಜಯೇಂದ್ರ ಇತಿಶ್ರೀ ಹಾಡ್ತೀನಿ ಅಂತ ಹೇಳಿದ್ದಾರೆ.
ಯಡಿಯೂರಪ್ಪ ಅವರನ್ನ ಟೀಕಿಸಿದ್ರೆ ಪ್ರಚಾರ ಸಿಗುತ್ತೆ ಅನ್ನೋ ಹುಚ್ಚು ಕೆಲವರಿಗೆ ಇದೆ. ನಾನು ತಾಳ್ಮೆ ಇಟ್ಕೊಂಡಿದ್ದೀನಿ, ಕೊಟ್ಟ ಕೆಲಸ ನಿಭಾಯಿಸ್ತಿದ್ದೀನಿ. ಯತ್ನಾಳ್ ವಿರುದ್ಧ ನೇರಾನೇರ ವಾಗ್ದಾಳಿ ಮಾಡಿದ್ದಾರೆ ವಿಜಯೇಂದ್ರ. ಉಚ್ಛಾಟನೆ ಮಾಡಿ ಅಂತ ನಾನು ಹೈಕಮಾಂಡ್ಗೆ ಕೇಳಿಲ್ಲ. ಹಾಗಂತ ವರಿಷ್ಠರು ಕ್ರಮ ತೆಗೆದುಕೊಳ್ಳದೆ ಸುಮ್ಮನಿರಲ್ಲ ಎನ್ನುವ ಮೂಲಕ ಯತ್ನಾಳ್ ವಿರುದ್ಧ ಕ್ರಮದ ಮುನ್ಸೂಚನೆ ಕೊಟ್ಟಿದ್ದಾರೆ. ಮಾತಾಡೋರ ಬಾಯಿ ಮುಚ್ಚಿಸೋಕೆ ಕಾರ್ಯಕರ್ತರಿದ್ದಾರೆ ಎನ್ನುವ ಮೂಲಕ ಕಾರ್ಯಕರ್ತರ ಪಡೆಯನ್ನು ಮುಂದೆ ಬಿಟ್ಟಿದ್ದಾರೆ.