ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಟಾಕ್ಸಿಕ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್ ಚಿತ್ರಕ್ಕಾಗಿ ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಟಾಕ್ಸಿಕ್ ಚಿತ್ರಕ್ಕಾಗಿ ಯಶ್ ಡೆಡಿಕೇಷನ್‌ನಿಂದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಶೂಟಿಂಗ್ ಸೆಟ್‌ನಲ್ಲೇ ಬಿಡಾರ ಹೂಡಿರೋ ರಾಕಿಭಾಯ್, ಬೆಂಗಳೂರಿನ HMT ಆವರಣದಲ್ಲಿ ಉಳಿದುಕೊಂಡಿದ್ದಾರೆ. ಕಳೆದ ಒಂದುವಾರದಿಂದ ಟಾಕ್ಸಿಕ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಒಂದು ವಾರದಿಂದ 12 ಗಂಟೆಗಳ ಕಾಲ ಶೂಟಿಂಗ್ ಮಾಡಲಾಗ್ತಿದೆ. ಟಾಕ್ಸಿಕ್ ಚಿತ್ರತಂಡ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆ ವರೆಗೂ ಶೂಟಿಂಗ್ ಮಾಡಲಾಗ್ತಿದೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಬೇಡಿಕೆಗೆ ತಕ್ಕಂತೆ ರಾತ್ರಿ 9 ಗಂಟೆ ತನಕ ಶೂಟಿಂಗ್ ಮುಗಿಸಿ ಮೂರು ದಿನ ಶೂಟಿಂಗ್ ಸೆಟ್‌ನಲ್ಲೇ ನಿದ್ದೆ ಮಾಡಿದ್ದಾರೆ ನಟ ಯಶ್. ರಾತ್ರಿ ಶೂಟಿಂಗ್ ಸೆಟ್‌ನಲ್ಲೇ ನಿದ್ದೆ ಮಾಡಿ ಬೆಳಗ್ಗೆ ಮತ್ತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಮೂರು ದಿನ ಕ್ಯಾರವಾನ್‌ನಲ್ಲೇ ನಿದ್ದೆ ಮಾಡಿರುವ ಪ್ಯಾನ್ ಇಂಡಿಯಾ ಸ್ಟಾರ್ ಯಶ್, ಟಾಕ್ಸಿಕ್ ಸಿನಿಮಾಗಾಗಿ ಸಂಪೂರ್ಣ ಶರಣಾಗಿದ್ದಾರೆ ಯಶ್. ಕೆಜಿಎಫ್ ನಂತರ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದು, ಟಾಕ್ಸಿಕ್ ಸಿನಿಮಾ ಮೇಲೆ ಪ್ಯಾನ್ ಇಂಡಿಯಾ ಪ್ರೇಕ್ಷಕರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರೇಕ್ಷಕರ ನಿರೀಕ್ಷೆಗೆ ಮೋಸ ಮಾಡಬಾರದು ಎಂದು ತುಂಬಾ ಕಠಿಣ ಪರಿಶ್ರಮದಿಂದ ಕೆಲಸ ಮಾಡ್ತಿದ್ದಾರೆ.