• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಳ್ಳತನ ಮಾಡಿ ಬಾಲಿವುಡ್‌ ನಟಿಗೆ 3 ಕೋಟಿ ಮನೆ ಗಿಫ್ಟ್‌.. ಯಾರು ಆ ನಟಿ..?

ಕೃಷ್ಣ ಮಣಿ by ಕೃಷ್ಣ ಮಣಿ
February 4, 2025
in Top Story, ಕರ್ನಾಟಕ, ಶೋಧ
0
ಕಳ್ಳತನ ಮಾಡಿ ಬಾಲಿವುಡ್‌ ನಟಿಗೆ 3 ಕೋಟಿ ಮನೆ ಗಿಫ್ಟ್‌.. ಯಾರು ಆ ನಟಿ..?
Share on WhatsAppShare on FacebookShare on Telegram

ADVERTISEMENT

ಬೆಂಗಳೂರಿನ ಪೊಲೀಸರ ಬಲೆಗೆ ಬಿದ್ದಿದ್ದಾನೆ ಖತರ್ನಾಕ್ ಅಂತರಾಜ್ಯ ಮನೆ ಕಳ್ಳ. ಮನೆ ಕಳ್ಳತನ ಮಾಡಿ ಮೂರು ಕೋಟಿ ಮನೆ ಖರೀದಿ ಮಾಡಿ, ಬಾಲಿವುಡ್‌ ಸಿನಿಮಾ ನಟಿಗೆ ಗಿಫ್ಟ್‌ ಮಾಡಿದ್ದಾನೆ ಅನ್ನೋ ವಿಚಾರ ಹೊರಬಿದ್ದಿದೆ. ಬಾಲಿವುಡ್ ಸಿನಿಮಾ ನಟಿಯರ ಜೊತೆ ಸಲುಗೆ ಬೆಳೆಸಲು ಐಷಾರಾಮಿ ಮನೆಗಳ ಕಳ್ಳತನ ಮಾಡ್ತಿದ್ದ ಆರೋಪಿ, ಗರ್ಲ್ ಫ್ರೆಂಡ್‌ಗೆ 3 ಕೋಟಿ ಮೌಲ್ಯದ ಮನೆ ಕಟ್ಟಿಸಿಕೊಟ್ಟಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಡಿವಾಳ ಪೊಲೀಸರು ಕುಖ್ಯಾತ ಮನೆಗಳ್ಳನ ಬಂಧನ ಮಾಡಿದ್ದು, ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಬಂಧಿತ ಆರೋಪಿ ಆಗಿದ್ದಾರೆರ. 2003 ರಲ್ಲಿ ಅಪ್ರಾಪ್ತನಾಗಿದ್ದಾಗಲೇ ಕಳ್ಳತನ ಶುರು ಮಾಡಿದ್ದ ಆರೋಪಿ, 2009 ರಿಂದ ಪ್ರೊಫೆಷನಲ್ ಕಳ್ಳನಾಗಿ ಕಾಯಕ ಶುರು ಮಾಡಿದ್ದ. ಪಂಚಾಕ್ಷರಿ ಸ್ವಾಮಿ ಬಂಧನದ ಬಳಿಕ ವಿಚಾರಣೆ ವೇಳೆ 180 ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ.

Akhilesh Yadav: ಮೊದಲು ಮಹಾಕುಂಭದಲ್ಲಿ ಮಡಿದವರ ಅಂಕಿ ಅಂಶ ಕೊಡಿ..! #mahakumbh2025 #yogiadityanath

ಜನವರಿ‌ 9 ರಂದು ಮಡಿವಾಳದಲ್ಲಿ ಮನೆಕಳ್ಳತನ ಮಾಡಿದ್ದ ಆರೋಪಿ ಪಂಚಾಕ್ಷರಿ ಸ್ವಾಮಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಬಂಧಿತನಿಂದ ಚಿನ್ನಾಭರಣ, ಚಿನ್ನ ಕರಗಿಸಲು ಬಳಸುವ ಫೈರ್ ಗನ್, ಚಿನ್ನದ ಒಡವೆ ಇಟ್ಟು ಕರಗಿಸುವ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.

ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೇ ಕೆಲಸದಲ್ಲಿದ್ದು, ತಂದೆ ಸಾವಿನ ಬಳಿಕ ತಾಯಿಗೆ ಕೆಲಸ ಸಿಕ್ಕಿತ್ತು. 2014-15 ರಲ್ಲಿ ಖ್ಯಾತ ನಟಿಯ ಜೊತೆಗೆ ಸಂಪರ್ಕದಲ್ಲಿರೋದಾಗಿ ಆರೋಪಿ ಹೇಳಿಕೊಂಡಿದ್ದಾನೆ. 2016 ರಲ್ಲಿ ಕೊಲ್ಕತ್ತದಲ್ಲಿ ಗರ್ಲ್ ಫ್ರೆಂಡ್ ಗೆ 3 ಕೋಟಿ ಮನೆ ಕಟ್ಟಿಸಿಕೊಟ್ಟಿದ್ದ. ಅಲ್ಲದೇ ಬರ್ತ್ ಡೇ ದಿನ 22 ಲಕ್ಷ ಮೌಲ್ಯದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದನಂತೆ.

2016 ರಲ್ಲಿ ಗುಜರಾತ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ರು. 6 ವರ್ಷ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದ ಆರೋಪಿ, ಹೊರಬಂದ ಬಳಿಕ ಮತ್ತೆ ಕಳ್ಳತನ ಮುಂದುವರೆಸಿ ಮತ್ತೆ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಜೈಲಿನಿಂದ ಬಿಡುಗಡೆಯಾಗಿ 2024 ರಲ್ಲಿ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ಶುರು ಮಾಡಿದ್ದ.

ಆರೋಪಿ ಪಂಚಾಕ್ಷರಿ ಸ್ವಾಮಿ ಸಣ್ಣದೊಂದು ಫೈರ್ ಗನ್ ಇಟ್ಟುಕೊಂಡಿದ್ದು, ಅದನ್ನ ಬಳಸಿ ಕಳವು ಮಾಡಿದ ಚಿನ್ನ ಕರಗಿಸುತ್ತಿದ್ದ. ತಾನು ಮಾತ್ರ ಚಿಕ್ಕ ಮನೆಯಲ್ಲಿ ವಾಸವಾಗಿದ್ದು, ಅದಕ್ಕೆ ಬ್ಯಾಂಕ್ ಲೋನ್ ಕಟ್ಟದೆ ನೋಟಿಸ್ ಕೂಡ ಬಂದಿದೆ.. ಸದ್ಯ ಹರಾಜಿಗೆ ಬಂದಿದೆ ವಾಸದ ಮನೆ.. ಮದುವೆಯಾಗಿ ಮಗು ಇದ್ದರು ಪ್ರಿಯತಮೆಗಾಗಿ ಮನೆ ಕಟ್ಟಿಸಿ ಕೊಟ್ಟಿದ್ದನು..

ಬೀಗ ಹಾಕಿದ ಮನೆಗಳನ್ನ ರೆಕ್ಕಿ ಮಾಡಿ, ಕಳ್ಳತನ ಮಾಡಿದ ಬಳಿಕ ರಸ್ತೆಯಲ್ಲಿ ಬಟ್ಟೆ ಬದಲಿಸುತ್ತಿದ್ದ.. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಪಂಚಾಕ್ಷರಿ ಸ್ವಾಮಿಯನ್ನು ಸದ್ಯ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಮಡಿವಾಳ ಪೊಲೀಸರು. ಆದರೆ ಈತ ಹುಡುಗೀರ ಶೋಕಿಗೆ ಕಳ್ಳತನ ಮಾಡ್ತಿದ್ದ ಅನ್ನೋ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

Previous Post

ದೆಹಲಿಯಲ್ಲಿ ಬಂಡಾಯ ಟೀಂ ಘರ್ಜನೆ.. ವಿಜಯೇಂದ್ರ ವಿರುದ್ಧ ದೂರು

Next Post

ಟಾಕ್ಸಿಕ್‌ ಚಿತ್ರದ ಶೂಟಿಂಗ್‌ ಸೆಟ್‌ನಲ್ಲೇ ನಿದ್ರೆ ಮಾಡುತ್ತಿರುವ ಯಶ್..

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಟಾಕ್ಸಿಕ್‌ ಚಿತ್ರದ ಶೂಟಿಂಗ್‌ ಸೆಟ್‌ನಲ್ಲೇ ನಿದ್ರೆ ಮಾಡುತ್ತಿರುವ ಯಶ್..

ಟಾಕ್ಸಿಕ್‌ ಚಿತ್ರದ ಶೂಟಿಂಗ್‌ ಸೆಟ್‌ನಲ್ಲೇ ನಿದ್ರೆ ಮಾಡುತ್ತಿರುವ ಯಶ್..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada