ಒಬ್ಬರ ಅಕೌಂಟ್ (account) ಇಂದ ಇನ್ನೊಬ್ಬರ ಅಕೌಂಟ್ ಗೆ ಹಣ ವರ್ಗಾವಣೆ (Transaction) ಮಾಬೇಕು ಅಂದ್ರೆ ಮೊದಲೆಲ್ಲಾ ಬ್ಯಾಂಕ್ಗಳಿಗೆ (Bank) ಹೋಗಬೇಕಿತ್ತು. ಆದ್ರೆ ಈಗ ಎಲ್ಲವೂ ಫುಲ್ ಚೇಂಜ್ ಆಗಿದೆ. ಕೇವಲ ಸೆಕೆಂಡುಗಳಲ್ಲಿ (seconds) ಹಣ ಹಾಕಬಹುದು ಅಥವಾ ನಮ್ಮ ಅಕೌಂಟ್ ಗೆ ಹಣ ಹಾಕಿಸಿಕೊಳ್ಳಬಹುದು.

ಹೌದು, UPI (UNIFIED PAYMENT INTERFACE) ತರಕಾರಿ ಗಾಡಿಯಿಂದ – ಫೈಸ್ಟಾರ್ ಹೋಟೆಲ್ಗಳ ವರೆಗೂ ಈ ಯುಪಿಐ(UPI) ಪೇಮೆಂಟ್ ಪ್ರಖ್ಯಾತಿ ಹೊಂದಿದೆ. ಯಾರಿಗಾದರೂ ಹಣ ಕಳುಹಿಸಬೇಕು ಅಂದ್ರೆ ಅವರ ಬ್ಯಾಂಕ್ ಅಕೌಂಟ್ (Bank account) ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ (mobile number) ಇದ್ರೆ ಸಾಕು, ಹಣ ಅವರ ಅಕೌಂಟ್ ತಲುಪಿರುತ್ತೆ. ಒಂದುವೇಳೆ ಯಡವಟ್ಟಾದ್ರೆ ಯಾರ ಅಕೌಂಟ್ ಗೋ ಜಮೆಯಾಗಬೇಕಿರೋ ಹಣ ಇನ್ಯಾರ ಖಾತೆಗೋ ಜಮೆ ಆಗಿಬಿಡುತ್ತೆ. ಹೀಗಾಗಿ ಮೊಬೈಲ್ ನಂಬರ್ ಟ್ರಾನ್ಸಾಕ್ಷನ್ ಮಾಡುವಾಗ ಬಹಳ ಹುಷಾರಾಗಿರಬೇಕು.

ಬಹಳಷ್ಟು ಜನ ಸಿಮ್ (sim) ಗಳನ್ನ ಮೇಲಿಂದ ಮೇಲೆ ಚೇಂಜ್ ಮಾಡ್ತಾನೆಯಿರ್ತಾರೆ. ಹಳೆಯ ನಂಬರ್ ನ ರೀ ಸೈಕಲ್ (re-cycle) ಮಾಡಿ ಬೇರೆಯವರಿಗೆ ನೀಡಲಾಗಿರುತ್ತೆ. ಸೋ ನಿಮಗೆ ನಿಮ್ಮ ಸ್ನೇಹಿತರ ನಂಬರ್ ಬದಲಾಗಿರೋದು ಗೊತ್ತಿಲ್ಲದೇ ಹಳೆಯ ನಂಬರ್ ಗೆ ಹಣ ಕಳುಹಿಸಿದ್ರೆ ಈ ಹಣ ಇನ್ಯಾರದ್ದೋ ಅಕೌಂಟ್ ಗೆ (account) ಹೋಗಿಬಿಡುತ್ತೆ. ಹಾಗಿದ್ರೆ ಈ ರೀತಿ ಖಾತೆಗೆ ಹೋದ ಹಣವನ್ನ ಹಿಂಪಡೆಯಲು ಸಾಧ್ಯನಾ ?! ಸಾಧ್ಯವಿದೆ..ಆದ್ರೆ ಅದಕ್ಕೆ ಕೆಲವು ಕ್ರಮಗಳಿವೆ.
ಒಂದು ವೇಳಿ ತಪ್ಪು ಟ್ರಾನ್ಸಾಕ್ಷನ್ (wrong transaction) ಆದಲ್ಲಿ ನೀವು ನಿಮ್ಮ ಬ್ಯಾಂಕ್ ನ ಸಂಪರ್ಕಿಸಬೇಕು. ಏತಕ್ಕಾಗಿ ಈ ರಾಂಗ್ ಟ್ರಾನ್ಸಾಕ್ಷನ್ ಆಗಿದೆ ಎಂಬುದನ್ನ ಅವರಿಗೆ ತಿಳಿಸಬೇಕು. ಇದಕ್ಕೆ ಬೇಕಾದ ದಾಖಲೆಗಳನ್ನ (documents) ಒದಗಿಸಬೇಕು. ಆ ನಂತರ ಬ್ಯಾಂಕ್ ಆ ಅಕೌಂಟ್ ನಿಂದ ಹಣವನ್ನ ರಿವರ್ಸ್ (reverse) ಮಾಡಿ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲು ಸಾಧ್ಯವಿದೆ.

ಆದ್ರೆ ಒಂದ್ವೇಳೆ ಬ್ಯಾಂಕ್ನಿಂದ ಇದು ಸಾಧ್ಯವಾಗದಿದ್ರೆ ಆಗ NPCI ಮೂಲಕ ದೂರು ದಾಖಲಿಸಬೇಕಾಗುತ್ತದೆ. NPCI ವೆಬ್ಸೈಟ್ಗೆ (website) ಭೇಟಿ ಕೊಟ್ಟು ಯುಪಿಐ ಟ್ರಾಸ್ನಾಕ್ಷನ್ ವಿಭಾಗದಲ್ಲಿ ಕೇಳುವ ದಾಖಲೆಗಳನ್ನ (documents) ಒದಗಿಸಿ ದೂರು ದಾಖಲಿಸಿದ್ರೆ , ನಿಮ್ಮ ಹಣವನ್ನ ಹಿಂಪಡೆಯಬಹುದು. ಇದು ಸಾಧ್ಯವಿದ್ದರೂ ಕೂಡ ಸ್ವಲ್ಪ ತ್ರಾಸಬದ್ಧ ಅನ್ನಿಸಬಹುದು. ಆದ್ರೆ ಬೇರೆ ದಾರಿ ಇಲ್ಲ. ಹೀಗಾಗಿ ಫೋನ್ ನಂಬರ್ (phone number) ಬಳಸಿ ಹಣ ವರ್ಗಾಯಿಸುವಾಗ ಜಾಗರೂಕರಾಗಿರಬೇಕು. ಹಣ ವರ್ಗಾಯಿಸುವ ಮೊದಲು ನಂಬರ್ ಖಾತ್ರಿ ಪಡಿಸಿಕೊಂಡು ನಂತರ ಹಣ ಕಳುಹಿಸಿದ್ರೆ ಸೇಫ್ ನೋಡಿ.

