
ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಗೆಲುವಿಗಾಗಿ ಇಂದು ನಗರದ ಚಾಮುಂಡೇಶ್ವರಿ ಮೆಟ್ಟಿಲುನಿಂದ ವಿವಿಧ ಮಹಿಳಾ ಸಂಘ ಸಂಸ್ಥೆಗಳಿಂದ ಚಾಮುಂಡಿ ತಾಯಿಯ ಪ್ರಾರ್ಥನೆ. ಮೆಟ್ಟಿಲುಗಳ ಮುಖಾಂತರ “ಮಹಿಳೆಯರ ನಡೆಗೆ ವಿಜಯದ ಕಡೆಗೆ “ಎಂಬ ಶೀರ್ಷಿಕೆ ಅಡಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಮೆಟ್ಟಿಲು ಹತ್ತುವ ಮೂಲಕ ದೇವಿ ದರ್ಶನ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀವತ್ಸ ಮಾತನಾಡಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಗೆಲುವಿಗಾಗಿ ವಿವಿಧ ಮಹಿಳಾ ಸಂಘ ಸಂಸ್ಥೆಗಳಿಂದ ಚಾಮುಂಡಿ ತಾಯಿಯ ಪ್ರಾರ್ಥನೆ ಮಾಡಿ ಮೆಟ್ಟಿಲು ಹತ್ತಲಾಗುತ್ತಿದೆ ಇದರ ಮುಖ್ಯ ಉದ್ದೇಶ ದೇಶ ಸುಭದ್ರವಾಗಿರಬೇಕು ಹಾಗೂ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಬೇಕು ಮತ್ತು ಮೈಸೂರು ಕೊಡಗು ಕ್ಷೇತ್ರದಲ್ಲಿ ಮಹಾರಾಜರು ವಿಜಯ ಸಾಧಿಸುವರು ರಾಜರ ಮೇಲೆ ಅಪಾರ ಬೆಂಬಲ ವ್ಯಕ್ತವಾಗಿದೆ ಎಂದರು.ಈ ಬಾರಿ ಮೈಸೂರು ಕೊಡಗು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡಯರ್ ಸ್ಪರ್ದಿಸಿದ್ದಾರೆ ಅದರಿಂದ ವಿವಿಧ ಮಹಿಳಾ ಸಂಘಟನೆಗಳು ಸೇರಿ ಸುಮಾರು 300 ಕ್ಕೂ ಹೆಚ್ಚು ಜನರು ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಮೂಲಕ ವಿಜಯ ಸಂಕಲ್ಪ ಮಾಡಲಾಗುತ್ತಿದೆ ಮಹಾರಾಜರು ಮಹಿಳೆಯರಿಗೆ ಶಿಕ್ಷಣ ಆರೋಗ್ಯ ಸಾಹಿತ್ಯ ಸಂಸ್ಕೃತಿ ವಿವಿಧ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ನೀಡಿದ್ದಾರೆ ಹಾಗೂ ರಾಜ್ಯದಲ್ಲಿ ಮಹಿಳೆಯರಿ 50 % ಹೆಚ್ಚು ಓಟು ಹೆಚ್ಚಿದೆ ಈ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ನಗರದ ಅಧ್ಯಕ್ಷರಾದ ಎಲ್ ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷರಾದ ಎಲ್ ಆರ್ ಮಹದೇವ ಸ್ವಾಮಿ, ಮಾಜಿ ಶಾಸಕ ರಾಮದಾಸ್, ಮುಖಂಡರುಗಳು ಉಪಸ್ಥಿತರಿದ್ದರು