ಗುಂಪೊಂದು ಮಹಿಳೆಯನ್ನು ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆಯೊಂದು ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಪಾಪಿಗಳು ಮಹಿಳೆ ಜೊತೆ ವಿಕೃತ ವರ್ತನೆ ನಡೆಸಿದ್ದಾರೆ. ಈ ಘಟನೆ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ಮಧ್ಯೆ ನಡೆದಿದೆ ಎನ್ನಲಾಗುತ್ತಿದೆ.
‘ಯಾದಗಿರಿ ಜಿಲ್ಲೆಯ ಶಹಾಪುರ ನಗರಹೊರವಲಯದಲ್ಲಿ ನಡೆದಿದೆ ಎನ್ನ ಲಾದ ವಿಡಿಯೊದಲ್ಲಿ ಮಹಿಳೆಯನ್ನು ನಗ್ನ ಗೊಳಿಸಿ ಹಲ್ಲೆ ನಡೆಸಿರುವ ಕುರಿತು ನಾಲ್ವ ರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ.ವೇದಮೂರ್ತಿ ತಿಳಿಸಿದ್ದಾರೆ.
‘ಕೃತ್ಯ ಕ್ಕೆ ಸಂಬಂಧಿಸಿದಂತೆ ಶಹಾಪುರ ನಗರ ಠಾಣೆಯಲ್ಲಿ ಪ್ರ ಕರಣ ದಾಖಲಿಸಿಕೊಳ್ಳಲಾಗುವುದು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮಹಿಳೆಯಾರೂ ಎಂದು ಪತ್ತೆಯಾಗಿಲ್ಲ . ಪತ್ತೆಯಾದರೆ ಇವರ ಕಡೆಯಿಂದದೂರು ಪಡೆಯಲಾಗುವುದು. ಇಲ್ಲದಿದ್ದ ರೆ ಸ್ವಯಂಪ್ರೇ ರಿತ ದೂರು ದಾಖಲಿಸಿಕೊಳ್ಳಲಾಗುವುದು’ ಎಂದಿದ್ದರು.
ಅಧಿಕಾರಿಗಳಮೂರು ತಂಡ ರಚನೆ
‘ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಮೂರು ತಂಡಗಳನ್ನು ರಚಿಸಲಾಗಿದೆ. ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಶೀಘ್ರವೇ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ವೀಡಿಯೋದಲ್ಲಿ ಏನಿದೆ?
ಯಾದಗಿರಿ-ಶಹಾಪುರ ಮಾರ್ಗ ಮಧ್ಯೆ ಜಮೀನೊಂದರಲ್ಲಿ ಕಗ್ಗತ್ತಲಲ್ಲಿ ನಡೆದಿದೆ ಎನ್ನಲಾಗಿರುವ ಈ ಘಟನೆಯನ್ನು ಹಲ್ಲೆಕೋರರ ಗುಂಪೇ ಮೊಬೈಲ್ನಲ್ಲಿ ಚಿತ್ರೀಕರಿಸಿದಂತಿದೆ. ತೀವ್ರ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಆಕೆಗೆ ಥಳಿಸಲು ಶುರು ಮಾಡುವ ನಾಲ್ಕೈದು ಜನರ ಗುಂಪು, ಆ ಮಹಿಳೆಯ ಮೈಮೇಲೆ ತುಂಡು ಬಟ್ಟೆಯನ್ನೂ ಬಿಡದೆ ಬೆತ್ತಲಾಗಿಸಿ ಥಳಿಸಿದ, ಲೈಂಗಿಕ ಹಿಂಸೆ ನೀಡಿದ ದೃಶ್ಯಗಳು ವಿಡಿಯೋದಲ್ಲಿವೆ. ಹಲ್ಲೆಕೋರರಲ್ಲೊಬ್ಬ ಮೊಬೈಲ್ನಲ್ಲಿ ಫೋಟೋ ತೋರಿಸಿ, ‘ಈಕೆ ನೀನೇ ಅಲ್ಲವೇ?’ ಎಂದು ಅವಾಚ್ಯವಾಗಿ ನಿಂದಿಸುತ್ತ ಥಳಿಸುತ್ತಾನೆ. ಆಗ ಆಕೆ ‘ನಾನಲ್ಲ, ನಂಗೇನೂ ಗೊತ್ತಿಲ್ಲ’ ಎಂದು ಪರಿಪರಿಯಾಗಿ ಹೇಳುತ್ತಾರೆ. ಆದರೂ ಬಿಡದ ಉಳಿದವರು ಮನಸೋ ಇಚ್ಛೆ ಥಳಿಸುತ್ತಾರೆ. ತನ್ನನ್ನು ಸಂಪೂರ್ಣ ಬೆತ್ತಲಾಗಿಸಿ, ಸುತ್ತುವರಿದು ಕೇಕೆ ಹಾಕುತ್ತಿದ್ದ ಗುಂಪಿಗೆ ಕೈಮುಗಿದು ಕಣ್ಣೀರು ಹಾಕಿದ ಆ ಮಹಿಳೆ, ತನ್ನನ್ನು ಬಿಡಿ ಎಂದು ಗೋಗರೆಯುತ್ತಾಳೆ.
ಆಗ ಗುಂಪಲ್ಲಿದ್ದ ಒಬ್ಬ ಹೊಡೆಯುವ ನೆಪದಲ್ಲಿ ಆಕೆಯ ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸುತ್ತಾನೆ. ಹಲ್ಲೆಯ ನೋವು ತಾಳಲಾಗದ ಆಕೆ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳಾದರೂ, ಸುತ್ತುವರೆದ ಗುಂಪು ಆಕೆಯನ್ನು ಅಟ್ಟಾಡಿಸಿ ಹೊಡೆಯುತ್ತದೆ. ವಾಹನವೊಂದರ ಹೆಡ್ ಲೈಟ್ ಬೆಳಕು ಹಾಗೂ ಮೊಬೈಲ್ ಟಾಚ್ರ್ ಅನ್ನು ಆಕೆಯ ಮುಖಕ್ಕೆ ಹಿಡಿದು, ಹಿಂಸಿಸುವ ದೃಶ್ಯಗಳು ಕಂಡುಬರುತ್ತವೆ. ನೋವು ತಾಳಲಾಗದೆ ಆಕೆ ಚೀರಾಡುತ್ತಿರುತ್ತಾಳೆ.
Watch Live Video : 10 ದಿನಗಳ ವಿಧಾನ ಮಂಡಲ ಅಧಿವೇಶನ : ಅಧಿವೇಶನದ ಮೊದಲನೇ ದಿನದ ಕಲಾಪ ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಸಹಾಯಕ್ಕೆ ಮಹಿಳೆ ಕೂಗಿದಾಗ ‘ಇಲ್ಲಿ ಯಾರೂ ಇಲ್ಲ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತೇವೆ’ ಎಂದು ಬೆದರಿಸಿದ ಮಾತುಗಳು ವೀಡಿಯೋದಲ್ಲಿವೆ. ‘ಪೊಲೀಸ್ ಠಾಣೆಯಲ್ಲೇ ಈ ಮಹಿಳೆ ನನ್ನಿಂದ 13-14 ಸಾವಿರ ಹಣ ಪಡೆದಿದ್ದಾಳೆ’ ಎಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಥಳಿಸುತ್ತಾನೆ. ಯಾದಗಿರಿ ಸಮೀಪದ ಚಟ್ನಳ್ಳಿ ಹಾಗೂ ಶಹಾಪುರದ ಹಳಿಸಗರ ಪ್ರದೇಶದ ಹೆಸರುಗಳು ಅವರ ಬಾಯಲ್ಲಿ ಕೇಳಿಬರುತ್ತವೆ. ‘ಬೆಳಿಗ್ಗೆ ಹಣ ವಾಪಸ್ ನೀಡಬೇಕು’ ಎಂದು ತಾಕೀತು ಮಾಡುತ್ತಾರೆ.