
WWE ವ್ರೆಸ್ಲರ್ ಚಾಂಪಿಯನ್ ಜಾನ್ ಸೀನಾ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಅವರು ತಮ್ಮ 20 ವರ್ಷಗಳ ಸುದೀರ್ಘ ವೃತ್ತಿಜೀವನದ ಅಂತ್ಯವನ್ನು ಘೋಷಿಸಿದ್ದಾರೆ. 2002ರಲ್ಲಿ WWE ಪ್ರವೇಶಿಸಿದ ಜಾನ್ ಸೀನಾ, 22 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಫೈಟ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು.ಜಾನ್ ಸೀನಾ WWE ರಿಂಗ್‌ನಲ್ಲಿ ಚಾಂಪಿಯನ್ ಗಳಾದ ದಿ ರಾಕ್, ಟ್ರಿಪಲ್ ಎಚ್, ರಾಂಡಿ ಆರ್ಟನ್ ನಂತಹ ಖ್ಯಾತ ವ್ರೆಸ್ಲರ್ ಗಳ ವಿರುದ್ ಫೈಟ್ ಮಾಡಿ 13 ಬಾರಿ WWE ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಜಾನ್ ಸೀನಾ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ವಿಶ್ವ ಹೆವಿವೇಟ್ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದು ಬೀಗಿದ್ದರು. ಇದೀಗ ಫೈಟಿಂಗ್ ಅಂಗಳಕ್ಕೆ ಜಾನ್ ಸೀನಾ ಗುಡ್ ಬೈ ಹೇಳಲು ತೀರ್ಮಾನ ಮಾಡಿದ್ದಾರೆ.

WWE ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವ ವಿಷಯದಲ್ಲಿ ಜಾನ್ ಸೀನಾ ಲೆಜೆಂಡರಿ ವೆಸ್ಲರ್ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಜಾನ್ ಸೀನಾ ಅವರಿಗೆ 47 ವರ್ಷ ವಯಸ್ಸಾಗಿದೆ. WWE ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಲ್ಲೂ ಜಾನ್ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಜಾನ್ ಸೀನಾ ಹೊಂದಿದ್ದಾರೆ.ಈಗ ಸಿನಿಮಾ ರಂಗದ ಕಡೆಗೆ ಸಂಪೂರ್ಣ ಗಮನ ಕೇಂದ್ರಿಕರಿಸಿರುವ ಅವರು ಸದ್ಯ WWE ರಿಂಗ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ಟೊರೊಂಟೊದಲ್ಲಿ ನಡೆದ ಮನಿ ಇನ್ ಬ್ಯಾಂಕ್ ಪ್ರೀಮಿಯಂ ಲೈವ್ ಈವೆಂಟ್‌ನಲ್ಲಿ ಜಾನ್ ಸೀನಾ ಈ ಘೋಷಣೆ ಮಾಡಿದ್ದು, ‘ದಿ ಲಾಸ್ಟ್ ಟೈಮ್ ಈಸ್ ನೌ’ ಎಂದು ಬರೆದ ಟೀ ಶರ್ಟ್ ಧರಿಸಿ ಬಂದಿದ್ದರು. ಇದರೊಂದಿಗೆ ವ್ರೆಸ್ಲ್ಲಿಂಗ್ ನಲ್ಲಿ 2025 ಅವರ ಕೊನೆಯ ವರ್ಷ ಎಂದು ಬಹಿರಂಗಪಡಿಸಿದ್ದಾರೆ