• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬಡ್ಡಿದರ ಏರಿಕೆ, ಸುಂಕ ಕಡಿತದ ನಡುವೆಯೂ ಜಿಗಿಯುತ್ತಿರುವ ಸಗಟುದರ ಹಣದುಬ್ಬರ

Any Mind by Any Mind
June 14, 2022
in ದೇಶ
0
ಬಡ್ಡಿದರ ಏರಿಕೆ, ಸುಂಕ ಕಡಿತದ ನಡುವೆಯೂ ಜಿಗಿಯುತ್ತಿರುವ ಸಗಟುದರ ಹಣದುಬ್ಬರ
Share on WhatsAppShare on FacebookShare on Telegram

ಚಿಲ್ಲರೆ ದರ (ಗ್ರಾಹಕ) ಹಣದುಬ್ಬರ ಇಳಿಯುತ್ತಿರುವ ಹೊತ್ತಿಗೇ, ಸಗಟು ದರ ಹಣದುಬ್ಬರ (ಡಬ್ಲ್ಯೂಪಿಐ) ಮತ್ತಷ್ಟು ಜಿಗಿದಿದೆ. ಮೇ ತಿಂಗಳ ಸಗಟು ದರ ಹಣದುಬ್ಬರ ಶೇ.15.88ಕ್ಕೆ ಜಿಗಿದಿದ್ದು ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೇರಿದೆ. ಏಪ್ರಿಲ್ ತಿಂಗಳಲ್ಲಿ ಶೇ.15.08ರಷ್ಟಿತ್ತು. 2021 ಮೇ ತಿಂಗಳಲ್ಲಿ ಶೇ.13.11ರಷ್ಟಿತ್ತು. 2021 ಮಾರ್ಚ್ ತಿಂಗಳಿಂದಲೂ ಸಗಟು ದರ ಹಣದುಬ್ಬರ ಎರಡಂಕಿ ದಾಟುತ್ತಲ್ಲೇ ಇದೆ. 14 ತಿಂಗಳ ಹಿಂದೆ ಹತ್ತರ ಗಡಿದಾಟಿದ್ದು, ತಿಂಗಳಿಂದ ತಿಂಗಳಿಗೆ ಏರುತ್ತಲೇ ಸಾಗಿ ಈಗ ಶೇ.16ರ ಗಡಿ ಸಮೀಪಿಸುತ್ತಿದೆ.

ADVERTISEMENT

ಏಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 95 ತಿಂಗಳ ಗರಿಷ್ಠಮಟ್ಟವಾದ ಶೇ. 7.79ಕ್ಕೆ ಜಿಗಿದು ಆತಂಕ ಮೂಡಿಸಿತ್ತು. ಅದೀಗ ಮೇ ತಿಂಗಳಲ್ಲಿ ಶೇ.7.04ಕ್ಕೆ ಇಳಿದಿದೆ. ಆರ್ಬಿಐ ಬಡ್ಡಿದರ ಏರಿಕೆ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಖಾದ್ಯ ತೈಲಗಳ ಮೇಲಿನ ಸುಂಕ ಕಡಿತ ಮತ್ತಿತರ ಕ್ರಮಗಳಿಂದಾಗಿ ಗ್ರಾಹಕ ದರ ಹಣದುಬ್ಬರ ಮೇ ತಿಂಗಳಲ್ಲಿ ಕೊಂಚ ತಗ್ಗಿದೆ. ಆದರೆ, ಸಗಟುದರ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.

ಸಗಟುದರ ಹಣದುಬ್ಬರ ಲೆಕ್ಕಚಾರವನ್ನು ಹೊಸ ಸರಣಿಯಡಿ 2013ರಿಂದ ಹಾಕಲಾಗುತ್ತಿದೆ. ಮೇ ತಿಂಗಳಲ್ಲಿ ದಾಖಲಾಗಿರುವ ಸಗಟುದರ ಹಣದುಬ್ಬರ ಈ ಒಂಭತ್ತು ವರ್ಷಗಳಲ್ಲೇ ಅತ್ಯಧಿಕವಾಗಿದೆ ಎನ್ನುತ್ತವೆ ಅಂಕಿ ಅಂಶಗಳು. ಅರ್ಥಶಾಸ್ತ್ರಜ್ಞರ ಪ್ರಕಾರ, ಹಳೆಯ ಸರಣಿಯಂತೆ ಲೆಕ್ಕಾಚಾರ ಹಾಕಿದರೂ ಕೂಡಾ ಮೇ ತಿಂಗಳ ಸಗಟುದರ ಹಣದುಬ್ಬರ 30 ವರ್ಷಗಳಲ್ಲೇ ಅತ್ಯಧಿಕವಾಗಿದೆ.

ಬಹುತೇಕ ಎಲ್ಲಾ ಸರಕು ಮತ್ತು ಸೇವೆಗಳು ಮೇನಲ್ಲಿ ತಿಂಗಳಿಂದ ತಿಂಗಳ ಲೆಕ್ಕದಲ್ಲಿ ಶೇ.1.4ರಷ್ಟು ಏರಿಕೆಯಾಗಿವೆ. ಆದರೆ, ಪ್ರಾಥಮಿಕ ಸರಕುಗಳ ಸೂಚ್ಯಂಕವು 2.8 ಶೇಕಡಾ ಏರಿಕೆಯಾಗಿದೆ. ಪ್ರಾಥಮಿಕ ಸರಕುಗಳ ಪೈಕಿ ಆಹಾರ ಪದಾರ್ಥಗಳ ಸೂಚ್ಯಂಕವು ಏಪ್ರಿಲ್‌ನಿಂದ 2.4 ಪ್ರತಿಶತದಷ್ಟು ಏರಿತ್ತು. ವಿಶೇಷವಾಗಿ ತರಕಾರಿಗಳ ಬೆಲೆ ತೀವ್ರವಾಗಿ ಏರಿದ್ದು, ತಿಂಗಳಿಂದ-ತಿಂಗಳಿಗೆ ಶೇ.18.5 ಹೆಚ್ಚಳವಾಗಿದೆ.

ಇಂಧನ ಮತ್ತು ವಿದ್ಯುತ್ ಸೂಚ್ಯಂಕವು ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಶೇ.2.3 ರಷ್ಟು ಹೆಚ್ಚಾಗಿದೆ. ಸಗಟುದರ ಹಣದುಬ್ಬರದಲ್ಲಿ ಶೇ. 64.23 ವೇಟೇಜ್ ಇರುವ ಸಿದ್ದ ಉತ್ಪನ್ನಗಳು ಶೇ. 0.6ರಷ್ಟು ಮಾತ್ರ ಏರಿಕೆಯಾಗಿವೆ.

ಭಾರತೀಯ ರಿಸರ್ವ ಬ್ಯಾಂಕ್ ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯಲ್ಲೂ ಹಣದುಬ್ಬರ ಏರಿಕೆಯಾಗುವ ಮುನ್ನಂದಾಜು ಮಾಡಿತ್ತು. ಹಣದುಬ್ಬರ ನಿಯಂತ್ರಣದಲ್ಲಿಡುವ ಹೊಣೆ ಆರ್ಬಿಐಗೆ ಸೇರಿದೆ. ಶೇ.4ರಷ್ಟು ಹಣದುಬ್ಬರ ಕಾಯ್ದುಕೊಳ್ಳಬೇಕು. ಆದರೆ, ಶೇ.2ರಷ್ಟು ಇಳಿಕೆ ಅಥವಾ ಏರಿಕೆಯ ಮಿತಿಯನ್ನು ಹಾಕಿಕೊಂಡಿದೆ. ಅಂದರೆ ಶೇ.2-6ರ ನಡುವೆಯೇ ಹಣದುಬ್ಬರ ಕಾಯ್ದುಕೊಳ್ಳಬೇಕು. ಶೇ. 6ರ ಗಡಿದಾಟಿದರೂ, ಶೇ.2ರ ಗಡಿಯಿಂದ ಕೆಳಕ್ಕಿಳಿದರೂ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಯಾರ್‌ ಯಾರ್ದೊ ಆಸ್ತಿ ಅಲ್ಲ ಕಣ್ರಿ.. ಅವರದ್ದೇ ಆಸ್ತಿಗೆ ಇವರು ಕೇಸ್‌ ಹಾಕಿದಾರೆ : ಡಿಕೆಶಿ ಕಿಡಿ

Next Post

ಪಿಎಂ ಕೇರ್ಸ್ ಹಗರಣದ ಬಗ್ಗೆ ಬಿಜೆಪಿ ನಾಯಕರು ಯಾಕೆ ಮೌನ ವಹಿಸಿದ್ದಾರೆ : ಕೆಪಿಸಿಸಿ

Related Posts

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..
Top Story

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

by ಪ್ರತಿಧ್ವನಿ
May 23, 2026
0

ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ...

Read moreDetails
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

May 23, 2026
“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

May 23, 2026
ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

May 23, 2026
Next Post
ಪಿಎಂ ಕೇರ್ಸ್ ಹಗರಣದ ಬಗ್ಗೆ ಬಿಜೆಪಿ ನಾಯಕರು ಯಾಕೆ ಮೌನ ವಹಿಸಿದ್ದಾರೆ : ಕೆಪಿಸಿಸಿ

ಪಿಎಂ ಕೇರ್ಸ್ ಹಗರಣದ ಬಗ್ಗೆ ಬಿಜೆಪಿ ನಾಯಕರು ಯಾಕೆ ಮೌನ ವಹಿಸಿದ್ದಾರೆ : ಕೆಪಿಸಿಸಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada