ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಭಾರತ-ಪಾಕಿಸ್ತಾನ ನಡುವೆ ಟಿ-20 ಪಂದ್ಯ ನಡೆಯಲಿದೆ. ಭಾರತದಲ್ಲಿ ಕ್ರಿಕೆಟ್ ವೀಕ್ಷಕರ ಸಂಖ್ಯೆ ಇಡೀ ಪ್ರಪಂಚಕ್ಕಿಂತ ಹೆಚ್ಚಾಗಿದೆ.ಈ ಬಾರಿ ಟಿ20 ವಿಶ್ವಕಪ್‌ನ ಪಂದ್ಯದ ಟಿಕೆಟ್‌ಗಳನ್ನು ಬುಕ್‌ಮೈಶೋ ಮತ್ತು ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ. ಇಂದು ಭಾರತ-ಪಾಕ್ ಮ್ಯಾಚ್ ಇದ್ದುಇ ಲ್ಲಿಯವರೆಗೆ, ಈ ಎರಡೂ ತಂಡಗಳು ಟಿ 20 ಪಂದ್ಯಗಳಲ್ಲಿ 16 ಬಾರಿ ಮುಖಾಮುಖಿಯಾಗಿವೆ. ಅವುಗಳಲ್ಲಿ 13 ರಲ್ಲಿ ಭಾರತ ಗೆದ್ದಿದೆ.

ಮುಂಬೈ-ಕೊಲಂಬೋ ವಿಮಾನ ಟಿಕೆಟ್ ದರವೂ ಏಕಾಏಕಿ ಏರಿಕೆ ಕಂಡಿದೆ.ಮುಂಬೈ-ಕೊಲಂಬೊ-ಮುಂಬೈ ರೌಂಡ್ ಟ್ರಿಪ್ ಬೆಲೆಗಳು 10,000 ರೂ.ಗಳಿಂದ 60,000 ರೂ.ಗಳಿಗೆ .ಕೊನೆಯ ಕ್ಷಣದಲ್ಲಿ ರೌಂಡ್-ಟ್ರಿಪ್ ಟಿಕೆಟ್‌ಗಳು ₹1.18 ಲಕ್ಷಕ್ಕೆ ತಲುಪಿವೆ – ಇದು ಸಾಮಾನ್ಯ ದರಗಳಿಗಿಂತ ಸುಮಾರು 300% ಹೆಚ್ಚಳವಾಗಿದೆ. ಅದೇ ರೀತಿ, ಫೆಬ್ರವರಿ 15 ರ ವಾರಾಂತ್ಯದಲ್ಲಿ ಕೊಲಂಬೊದಲ್ಲಿ ಹೋಟೆಲ್ ಬುಕಿಂಗ್‌ಗಳು ಹೆಚ್ಚಾಗಿದ್ದು ಬೆಲೆ ಡಬಲ್ ಆಗಿದೆ.ಕೊಠಡಿ ದರಗಳನ್ನು 20-25% ರಷ್ಟು ಹೆಚ್ಚಿಸಿವೆ.ಇತಿಹಾಸದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಮತ್ತು ಹೆಚ್ಚು ಲಾಭದಾಯಕ ಕ್ರಿಕೆಟ್ ಪಂದ್ಯ ಇದಾಗಿದೆ.

ಭಾರತ-ಪಾಕಿಸ್ತಾನ ಪಂದ್ಯಗಳು ಐಸಿಸಿಗೆ ಬೇರೆ ಯಾವುದೇ ಪಂದ್ಯಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತವೆ. ಭಾರತ-ಪಾಕಿಸ್ತಾನ ಪಂದ್ಯವೊಂದು ಕೇವಲ ಸುಮಾರು 1,800 ಕೋಟಿಯಿಂದ 2,000 ಕೋಟಿ ರೂ.ಗಳವರೆಗೆ ಆದಾಯವನ್ನು ಗಳಿಸುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಭಾರತ vs ಪಾಕಿಸ್ತಾನ ಪಂದ್ಯ ನಡೆಯದೇ ಇದ್ದಿದ್ದರೆ, ಐಸಿಸಿಗೆ 174 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ನಷ್ಟವಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.






