ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದು ಈಗ ಸ್ಥಳೀಯ ಪೊಲೀಸರು ಅವರ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಇದೀಗ ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದೀಗ ಸಾಕೇತ್ ಅವರ ರೂಮ್‌ಮೇಟ್ ಬನೀಟ್ ಸಿಂಗ್ ಅವರು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಸಾಕೇತ್ ನನ್ನ ಜೊತೆ ಬದುಕುತ್ತಿದ್ದ, ಊಟ ಮಾಡುತ್ತಿದ್ದ, ಪ್ರಯಾಣಿಸುತ್ತಿದ್ದ, ನಗುತ್ತಿದ್ದ ಮತ್ತು ತಮಾಷೆ ಮಾಡುತ್ತಿದ್ದ. ಇಂತಹ ನನ್ನ ಸ್ನೇಹಿತನಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಬರೆದಿದ್ದಾರೆ. ಜನವರಿ 21ರಂದು ಸಾಕೇತ್ ಅನ್ಝಾ ಕೆರೆಯತ್ತ ಹೋಗೋಣ ಎಂದಿದ್ದರು. ಆದರೆ ಅಂದು ಹೋಗಿರಲಿಲ್ಲ. ಕೆಲವು ದಿನಗಳಲ್ಲಿ ಅದೇ ಕೆರೆಯ ಬಳಿ ಅವರ ಜೀವನ ಮುಗಿಯುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಬನೀಟ್ ಸಿಂಗ್ ಭಾವುಕರಾಗಿ ಬರೆದಿದ್ದಾರೆ.

ಸಾಕೇತ್ ಬಗ್ಗೆ ಮಾತನಾಡಿದ ರೂಮ್‌ಮೇಟ್ ಬನೀಟ್ ಸಿಂಗ್, ಕಳೆದ ಕೆಲವು ದಿನಗಳಿಂದ ದುಃಖದಲ್ಲಿ ಇದ್ದ. ಕಳೆದ 2 ವಾರದಿಂದ ಸಾಕೇತ್ ಏನೂ ತಿನ್ನುತ್ತಿರಲಿಲ್ಲ, ಚಿಪ್ಸ್ ಮಾತ್ರ ತಿನ್ನುತ್ತಿದ್ದರು. ಜನರ ಜೊತೆಗಿನ ಮಾತುಕತೆ ಕಡಿಮೆಯಾಗಿತ್ತು. ನನ್ನ ಬಗ್ಗೆ ಯಾರು ಯೋಚಿಸುತ್ತಾರೆ ಎಂದು ನನಗೆ ಅನಿಸಿಲ್ಲ. ಹಾಗಾಗಿ ನಾನು ಕಾಳಜಿ ವಹಿಸುವುದು ಬಿಟ್ಟಿದ್ದೇನೆ. ಯಾವುದರ ಬಗ್ಗೆ ಕೂಡ ಯೋಚನೆ ಮಾಡಲ್ಲ ಎಂದು ಆತ ಹೇಳುತ್ತಿದ್ದ ಎಂದು ರೂಮೇಟ್ ತಿಳಿಸಿದ್ದಾನೆ.






