
ಇಂದು ಪ್ರಧಾನಿ ನರೇಂದ್ರ ಮೋದಿ (Pm modi) ಜಮ್ಮು ಕಾಶ್ಮೀರಕ್ಕೆ (Jammu kashmir) ಭೇಟಿ ನೀಡಲಿದ್ದಾರೆ. ಪೆಹಲ್ಗಾಮ್ (Pahalgam) ಉಗ್ರರ ದಾಳಿಯ ನಂತರ ಪ್ರಧಾನಿ ಮೋದಿಯ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ. ಆ ಮೂಲಕ ಇಂದು ಚೆನಾಬ್ ರೈಲ್ವೆ ಸೇತುವೆಯನ್ನು (Chenab railway bridge) ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಇದರ ಜೊತೆಗೆ ಕಾಟ್ರಾದಿಂದ ಶ್ರೀನಗರಕ್ಕೆ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.ಈ ಚೆನಾಬ್ ಸೇತುವೆ ವಿಶ್ವದ ಅತಿ ಎತ್ತರದ ಸೇತುವೆಯಾಗಿದೆ. ಬರೋಬ್ಬರಿ 14,000 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಚೆನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ.
ಈ ಸೇತುವೆಯನ್ನು ಎಂಜಿನಿಯರಿಂಗ್ ಅದ್ಭುತ ಎಂದು ಬಣ್ಣಿಸಲಾಗಿದೆ. 14 ಸಾವಿರ ಕೋಟಿ ರೂ. ವೆಚ್ಚದಲ್ಲಿಸಿದ್ಧಗೊಂಡಿರುವ ಈ ಬ್ರಿಡ್ಜ್ ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ 35 ಮೀಟರ್ ಎತ್ತರವಿದೆ.1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯನ್ನು ಭೂಕಂಪ ಹಾಗೂ ಬಿರುಗಾಳಿಗೂ ಜಗ್ಗದಂತೆ ನಿರ್ಮಿಸಲಾಗಿದೆ.

ವಿಶ್ವದ ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್‌ಗಿಂತ ಎತ್ತರದ ರೈಲ್ವೆ ಸೇತುವೆ ಇದು ಎಂಬ ಕೀರ್ತಿ ಚೆನಾಬ್ ಸೇತುವೆಗಿದೆ. ಜಗತ್ತಿನ ಅತ್ಯಂತ ಎತ್ತರದ ರೇಲ್ವೆ ಸೇತುವೆ ಎಂಬ ಗರಿಮೆಗೆ ಚೆನಾಬ್ ನದಿ ರೈಲು ಸೇತುವೆ ಪಾತ್ರವಾಗಿದೆ. ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಹರಿದು ಹೋಗುವ ಚಿನಾಬ್ ನದಿಗೆ ಅಡ್ಡಲಾಗಿ ಈ ಸೇತುವೆ ಕಟ್ಟಲಾಗಿದೆ.ಈ ನದಿಯ ಮೇಲ್ಮೈಯಿಂದ 359 ಮೀ. ಎತ್ತರವಿರುವ ಈ ಸೇತುವೆಗೆ 24,000 ಟನ್ ಉಕ್ಕು ಬಳಸಲಾಗಿದೆ.