ವಿಶ್ವವಿಖ್ಯಾತ (world famous) ಬೆಂಗಳೂರು ಕರಗಕ್ಕೆ (karaga) ಕ್ಷಣಗಣನೆ ಶುರುವಾಗಿದೆ. ಬಿಸಿಲ ನಡುವೆ ಮಲ್ಲಿಗೆ ಘಮದ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸಕ್ಕೆ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ. ನಗರದ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯ ಹೆಗ್ಗುರುತಾಗಿರುವ, ಹೂವಿನ ದಂಡೆಯನ್ನ ಹೊತ್ತು ಸಾಗುವ ಕರಗ ಕಣ್ಣುಂಬಿಕೊಳ್ಳಲು ಬೆಂಗಳೂರಿಗರು (bangalore) ಕಾತರರಾಗಿದ್ದಾರೆ.
ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ಜರುಗಲಿದ್ದು, ನಿನ್ನೆಯಿಂದಲೇ ಹಸಿಕರಗದ ಶಾಸ್ತ್ರಗಳು ಆರಂಭಗೊಂಡಿದ್ದು, ಅದ್ದೂರಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ತಾಯಿಗೆ ವಿಶೇಷವಾಗಿ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರಗಳು ನೆರವೇರಲಿದ್ದು, ಮಧ್ಯ ರಾತ್ರಿ 2 ಗಂಟೆ ಕರಗ ಮೆರವಣಿಗೆ ಆರಂಭವಾಗಲಿದೆ.
ರಾತ್ರಿ 2 ಗಂಟೆಗೆ ಧರ್ಮರಾಯ ದೇವಸ್ಥಾನದಿಂದ ಕರಗ ಮೆರಣಿಗೆ ಆರಂಭವಾಗಿ ರಾಜ ಮಾರ್ಕೆಟ್ ಸರ್ಕಲ್‌ನಿಂದ ಕೆ ಆರ್ ಮಾರ್ಕೆಟ್ ಮಾರ್ಗವಾಗಿ, ಆಂಜನೇಯ ದೇವಸ್ಥಾನ ಮೂಲಕ ಗಣೇಶ ದೇವಸ್ಥಾನ ತಲುಪಲಿದೆ. ನಂತರ ನಸುಕಿನ 4 ಗಂಟೆಗೆ ಪೋಲೀಸ್ ರೋಡ್ ಮುಖಾಂತರ, ಮಸ್ತಾನ್ ಸಾಬ್ ದರ್ಗಾ ತಲುಪಲಿದೆ. ಬಳಿಕ ಮೆಜೆಸ್ಟಿಕ್ ನಾ ಅಣ್ಣಮ್ಮ ದೇವಸ್ಥಾನ ರೂಟ್ ನಲ್ಲಿ ಸಾಗಲಿದೆ. ಅಲ್ಲಿಂದ ಮೈಸೂರ್ ಬ್ಯಾಂಕ್ ಸರ್ಕಲ್ ಮುಖಾಂತರ ಕುಂಬಾರ ಪೇಟೆ, ತಿಗಳರ ಪೇಟೆ, ಎಸ್ ಪಿ ರೋಡ್ ದೇವಸ್ಥಾನ ಮುಖಾಂತರ ಮೇಲೇಟೆಗೆ ಬಂದು ಬೆಳಗ್ಗೆ 7ರಿಂದ 8 ಸುಮಾರಿಗೆ ಧರ್ಮರಾಯ ದೇವಸ್ಥಾನ ತಲುಪಲಿದೆ.