ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡಿತ್ತು. 136 ಶಾಸಕರ ಮೂಲಕ ಅಧಿಕಾರಕ್ಕೆ ಬಂದು ಕೊಟ್ಟ ಮಾತಿನಂತೆ ಮಹಿಳೆಯರಿಗೆ ಶಕ್ತಿ ಯೋಜನೆಯನ್ನು ಜಾರಿಗೊಳಿಸಿತು.
ದೇಶದಲ್ಲೇ ವಿಶೇಷ ಹಾಗೂ ಮಹಿಳಾ ಪ್ರಾತಿನಿಧ್ಯದ ಹೊಸ ಹೆಜ್ಜೆ ಇಟ್ಟಿದ್ದ ಸರ್ಕಾರಕ್ಕೆ ಮಹಿಳೆಯರು ಬಹುಪರಾಕ್ ಎಂದಿದ್ದಾರೆ.
ಜೂನ್ 11, 2023 ರಂದು ಆರಂಭವಾದ ಶಕ್ತಿ ಯೋಜನೆಯಲ್ಲಿ ಈವರೆಗೂ 160 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ರಾಜ್ಯದುದ್ದಗಲ ಸಂಚರಿಸಿರುವ ಮಹಿಳೆಯರ ಅಂಕಿ ಅಂಶವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಮಂಡಿಸಿದರು.
#Shakthi #Women #Bus #FreeTravel #Assembly #CM #Siddaramaiah #KSRTC #