ಬೆಂಗಳೂರು ಬಹುರಾಷ್ಟ್ರೀಯ ಕಂಪನಿಗಳ ಎರಡನೇ ಮನೆ, ಜಗತ್ತಿನ ಬಹುತೇಕ ಕಂಪನಿಗಳು ಇಲ್ಲಿ ತಮ್ಮದೇ ಕಚೇರಿ ಹೊಂದಿದೆ ಆದೃ ಇಲ್ಲಿ ಕನ್ನಡಿಗರು ಎಷ್ಟು ಜನ ಇದ್ದಾರೆ..?
ಈ ಪ್ರಶ್ನೆಗಳು ಬಹುತೇಕರಿಗೆ ಕಾಡತೊಡಗಿದೆ, ಇತ್ತಿಚೆಗೆ ಕನ್ನಡಿಗರ ಪರ ದೊಡ್ಡ ಒಲವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ, ಕನ್ನಡ-ಕನ್ನಡಿಗ ಪ್ರಜ್ಞೆ ಜಾಗೃತವಾಗಿ ಕನ್ನಡೇತರರ ಬಗ್ಗೆ ವಾದ ವಿವಾದಗಳು ಸಾಮಾನ್ಯ ಅನ್ನೋ ಹಾಗೆ ಆಗಿದೆ.
ಇದಕ್ಕೆ ಹೊಸ ಸೇರ್ಪಡೆ ಅಂದ್ರೆ ಕನ್ನಡ ಮತ್ತು ಸಂಸ್ಕ್ರತಿ ಸಚಿವ ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆ. ಮಲ್ಟಿನ್ಯಾಷನಲ್ ಕಂಪನಿಗಳಲ್ಲಿರುವ ಕನ್ನಡಿಗರ ಬಗ್ಗೆ ವಿವರ ಸಲ್ಲಿಸಿ ಎಂದು ಹೇಳಿರುವ ಬಗ್ಗೆ ಸಾಕಷ್ಟು ಚರ್ಚೆಗಳು ಎದ್ದಿವೆ, ಕೆಲವರು ಸರ್ಕಾರದ ನಿರ್ಧಾರ ಟೀಕಿಸಿದರೆ, ಇನ್ನು ಕೆಲವರು ಕನ್ನಡಿಗರ ಕಡೆಗಣಿಸಿರುವ ಕಂಪನಿಗಳಿಗೆ ಒಳ್ಳೆ ಪಾಠ ಅಂತಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಕನ್ನಡ ನಾಡಗೀತೆ ಕಡ್ಡಾಯ ಹಿಂಪಡೆದ ಬೆನ್ನಲ್ಲೇ, ಕನ್ನಡಿಗರ ಲೆಕ್ಕಕೊಡಿ ಹೊಸ ತಲ್ಲಣ ಸೃಷ್ಟಿಸಿದೆ.
#Kannada #Culture #Minister # ShivarajTangadagi #MNC #Employees #Company