ಫ್ಯಾಶನ್ ಎಂಬುದು ನಗರದ ಮಹಿಳೆಯರ ಸ್ವತ್ತಾ! ಹಳ್ಳಿಯಲ್ಲಿರುವ ಅನೇಕ ಪ್ರತಿಭೆಗಳು ಹೊರಬರಬೇಕು, ಇದೇ ನಿಟ್ಟಿನಲ್ಲಿ ಗದುಗಿನ ಹುಡ್ಕೊ ಕಾಲನಿ ನಿವಾಸಿಯಾದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಶಿಲ್ಪಾ ಶಿರಹಟ್ಟಿಮಠ ಎಂಬುವವರು ಮಹಿಳಾ ಸಬಲೀಕರಣಕ್ಕಾಗಿ ಪರ್ಸನಾಲಿಟಿ ಡೆವೆಲಪ್‌ಮೆಂಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದಕ್ಕೆಂದೆ ವಿನ್ ಶಿ ಎಂಬ ಲಾಭರಹಿತ ಸಂಸ್ಥೆಯನ್ನು ಆರಂಭಿಸಿ ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸುವ ಯೋಜನೆ ಹೊಂದಿದ್ದಾರೆ. ಸದ್ಯ ನವಲಗುಂದ ಹಾಗೂ ನರಗುಂದ ಭಾಗದಲ್ಲಿ ಕಾರ್ಯಕ್ರಮಗಳು ಆರಂಭವಾಗಲಿದ್ದು, ಈಗ ನವಲಗುಂದದ ಶಿರೂರನಲ್ಲಿ ವಿಶೇಷ ಹೊಲಿಗೆ ತರಬೇತಿಗಳು ಆರಂಭವಾಗಿವೆ.
ವ್ಯಕ್ತಿತ್ವ ವಿಕಸನ ಶಿಬಿರ ತರಬೇತಿ ನಂತರ ಮಹಿಳೆಯರು ಹೊಲಿಗೆ ಕಲಿತು ಅದರಲ್ಲಿ ಹೊಸತನ ತುಂಬಿ ಸ್ವರ್ಧಾ ಮಾರುಕಟ್ಟೆ ಲಗ್ಗೆ ಇಡಲು ಸಜ್ಜಾಗಿರಬೇಕು ಎಂಬ ಉದ್ದೇಶದಿಂದ ಪರ್ಸನಾಲಿಟಿ ಡೆವೆಲೆಪ್ ಮೆಂಟ್ ಶಿಬಿರಗಳನ್ನು ಹೊಲಿಗೆ ತರಬೇತಿ ಶಿಬಿರದ ಜೊತೆಗೆ ಅಕ್ಟೋಬರ್ನಲ್ಲಿನಡೆಸಲಾಗುವುದು.
ಹಾಂ.. ವಿನ್ ಶಿ ಸಂಸ್ಥೆಯಿಂದ ಅಶಕ್ತ ಮಹಿಳೆ ಮತ್ತು ಮಕ್ಕಳಿಗಾಗಿ ಪೌಷ್ಟಿಕ ಪೌಡರ್ ತಯಾರಿಸುವುದನ್ನು ಕಲಿಸಿಕೊಡಲಾಗಿತ್ತದೆ. ಇದರ ಉದ್ದೇಶ ಮಹಿಳಾ ಸಬಲೀಕರಣ ಮತ್ತು ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಈ ಪೌಡರ್ ಮುಟ್ಟಲಿ. ಕೋವಿಡ್ ಮೂರನೆಯ ಅಲೆ ಬರುತ್ತೆ ಎಂದು ಹೇಳಲಾಗುತ್ತದೆ. ಅದು ಬರಲಿ ಬಿಡಲಿ ಎಲ್ಲರಿಗೂ ಪೌಡರ್ ಸಿಗಲಿ ಭಯ ಬೇಡ ಜಾಗೃತಿ ಇರಲಿ ಎನ್ನುತ್ತಾರೆ ವಿನಯ್ ಶಿರಹಟ್ಟಿಮಠ.
ಸದ್ಯದಲ್ಲಿಯೆ ಉತ್ತರ ಕರ್ನಾಟಕದ ಕೆಲವು ಶಾಲೆಗಳಲ್ಲಿ ವಿನ್ ಶಿ ಸಂಸ್ಥೆಯಿಂದ ಉಚಿತ ಕಂಪ್ಯೂಟರ್ ಕೋಚಿಂಗ್ ಮತ್ತು ಡಿಜಿಟಲ್ ಲಿಟರೆಸಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಮಹಿಳೆಯರಿಗೆ ಹೋಮ್ ನರ್ಸಿಂಗ್ ತರಬೇತಿ, ಕೋವಿಡ್ ಬಗ್ಗೆ ಅರಿವು, ಲಸಿಕೆ ಬಗ್ಗೆ ತಿಳಿವಳಿಕೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಬರಲಿವೆ.
ವಿನ್ ಶಿ ಸಂಸ್ಥೆ ಎನೇನು ಮಾಡಿದೆ?
ವಿನ್ ಶಿ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಜನೇವರಿಯಲ್ಲಿ ಆಯೋಜಿಸಿದ ನನ್ನ ಊರು ನನ್ನ ಜನ ಕಾರ್ಯಕ್ರಮದಲ್ಲಿ 130 ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಉಚಿತ ಔಷಧಿ ವಿತರಿಸಲಾಯಿತು. ಫೆಬ್ರುವರಿಯಲ್ಲಿ 180 ಕ್ಕೂ ಅಧಿಕ ಜನರಿಗೆ ಕಣ್ಣಿನ ತಪಾಸಣೆ ಹಾಗೂ ಅವಶ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಮಾರ್ಚ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ 161 ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಅದರಲ್ಲಿ 56 ಮಹಿಳೆಯರಿಗೆ ಗರ್ಭಕೋಶ ತಪಾಸಣೆ ಮಾಡಿ 10 ಮಹಿಳೆಯರಿಗೆ ಕಾಲ್ಪೊಸ್ಕೋಪಿಗೆ ರೆಫರ್ ಮಾಡಲಾಯಿತು.
3 ಮಹಿಳೆಯರಿಗೆ ಹುಬ್ಬಳ್ಳಿಯ ನವನಗರ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಸೆಪ್ಟೆಂಬರ್ ನಲ್ಲಿ ಹೊಲಿಗೆ ತರಬೇತಿ ಆರಂಭಿಸಲಾಗಿದೆ ಹಾಗೂ 3 ತಿಂಗಳ ವರೆಗೆ ನಡೆಯಲಿದೆ.