• Home
  • About Us
  • ಕರ್ನಾಟಕ
Thursday, December 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕಳೆದ 11 ವರ್ಷಗಳಲ್ಲಿ ̆ 10 ಪುರುಷರ ವಿರುದ್ದ ಲೈಂಗಿಕ ದೌರ್ಜನ್ಯ ,ಅತ್ಯಾಚಾರದ ಮೊಕದ್ದಮೆ ದಾಖಲಿಸಿದ ಮಹಿಳೆ

ಪ್ರತಿಧ್ವನಿ by ಪ್ರತಿಧ್ವನಿ
September 13, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು:ಕೋವರ್‌ ಕೊಲ್ಲಿ ಇಂದ್ರೇಶ್‌ Kolli Indresh)ಬೆಂಗಳೂರು ಸೆಪ್ಟೆಂಬರ್‌ 13 ;ಪುರುಷರಿಂದ ಮಹಿಳೆಯರ ಮೇಲಾಗುವ ದೌರ್ಜನ್ಯ( Violence against women) ತಡೆಗಟ್ಟಲೆಂದೇ ಸರ್ಕಾರ ಕಾನೂನನ್ನು ಬಿಗಿ ಮಾಡಿದೆ. ಆದರೆ ಈ ಬಿಗಿ ಕಾನೂನನ್ನೇ ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಹಣ ಸುಲಿಗೆ ಮಾಡುವುದನ್ನೇ ( Extortion) ಪಾರ್ಟ್‌ ಟೈಂ ಉದ್ಯೋಗ ಮಾಡಿಕೊಂಡಿದ್ದ ಮಹಿಳೆಯೊಬ್ಬಳ ವಿಷಯವನ್ನು ರಾಜ್ಯ ಹೈ ಕೋರ್ಟ್‌ High Court ಗಂಭೀರವಾಗಿ ಪರಿಗಣಿಸಿದೆ.

ADVERTISEMENT

ಮೊದಲು ಕುಶಾಲನಗರ Kushalanagar ಸಮೀಪದ ಮುಳ್ಳು ಸೋಗೆ ಗ್ರಾಮದಲ್ಲಿ ವಾಸವಿದ್ದ ಹಾಲಿ ಬೆಂಗಳೂರಿನ ಚಾಮರಾಜಪೇಟೆ ಯ ನಿವಾಸಿಯಾಗಿರುವ ಮಹಿಳೆ ದೀಪಿಕಾ ಯೋಗಾನಂದ Yogananda)(33) 2011 ನೇ ಇಸವಿಯಿಂದಲೂ ವಿವಿಧ ಠಾಣೆಗಳಲ್ಲಿ ಒಟ್ಟು 10 ಮೊಕದ್ದಮೆ ದಾಖಲಿಸಿದ್ದಾಳೆ. ಈಕೆ ದಾಖಲಿಸಿರುವ ಎಲ್ಲಾ ಮೊಕದ್ದಮೆಗಳಲ್ಲಿಯೂ Rape, sex)ಅತ್ಯಾಚಾರ, ಲೈಂಗಿಕ ದೌರ್ಜನ್ಯ ,Atrocity ವರದಕ್ಷಿಣೆ ಕಿರುಕುಳ , ಪ್ರಾಣ ಬೆದರಿಕೆ ಮುಂತಾದ ಜಾಮೀನು ದೊರೆಯದ ಸೆಕ್ಷನ್‌ಗಳೇ ಪ್ರಮುಖವಾಗಿವೆ. ಕಳೆದ ವಾರ ಈಕೆಯ 10 ನೇ ಪತಿ ಎನ್ನಲಾದ ಕೊಡಗು ಮೂಲದ ವ್ಯಕ್ತಿಯೊಬ್ಬರು ಎಫ್‌ ಐ ಆರ್‌ ರದ್ದು ಪಡಿಸುವಂತೆ ಹೈ ಕೋರ್ಟ್‌ ಮೊರೆ ಹೋದ ಸಂದರ್ಭದಲ್ಲಿ ಈಕೆಯ ಪೂರ್ಣ ಚರಿತ್ರೆ ಬೆಳಕಿಗೆ ಬಂದಿದೆ.

ಈಕೆ 15-9-22 ರಂದು ಸಕಲೇಶಪುರದ ವಿವೇಕ್‌(35) ಅವರ ತಂದೆ ತಾಯಿ , ಅಜ್ಜಿ ಮತ್ತು ಭಾವನ ವಿರುದ್ದ ಕುಶಾಲನಗರ ಪೋಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮೊಕದ್ದಮೆ ದಾಖಲಿಸಿದ್ದಳು. ವಿವೇಕ್‌ ವಿರುದ್ದ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದು ನಂತರ 50 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ಐವರ ವಿರುದ್ದ ದಾಖಲಾಗಿದ್ದ ಈ ಸುಳ್ಳು ದೂರಿನ್ನು ರದ್ದುಪಡಿಸುವಂತೆ ಕೋರಿ ಹೈ ಕೋರ್ಟ್‌ ಮೆಟ್ಟಿಲೇರಿದಾಗ ನ್ಯಾಯಾಲಯವು ವಿಚಾರಣೆ ನಡೆಸಿ ಮೊಕದ್ದಮೆ ರದ್ದುಪಡಿದ್ದೇ ಅಲ್ಲದೆ ಈಕೆ ವಿವಿಧ ಠಾಣೆಗಳಲ್ಲಿ ವಿವಿಧ ವ್ಯಕ್ತಿಗಳ ವಿರುದ್ದ ದಾಖಲಿಸಿರುವ ದೂರಿನ ಕುರಿತು ಎಲ್ಲಾ ಠಾಣೆಗಳಿಗೂ ಮಾಹಿತಿ ನೀಡಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು(ಡಿಜಿಪಿ) ಮತ್ತು ಪೊಲೀಸ್ ಮಹಾನಿರೀಕ್ಷಕರು(ಐಜಿಪಿ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸಕಲೇಶಪುರದ ವಿವೇಕ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ತನ್ನ ಪತ್ನಿ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಹಲವು ಪುರುಷರ ವಿರುದ್ಧ ಈಗಾಗಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಪಿತೂರಿ ಮತ್ತು ಐಪಿಸಿ ಸೆಕ್ಷನ್‌ 498ಎ(ಕೌಟುಂಬಿಕ ದೌರ್ಜನ್ಯಕ್ಕೆ ಶಿಕ್ಷೆ)ಅಡಿ 9 ಪ್ರಕರಣಗಳನ್ನು ದಾಖಲಿಸಿರುವ ಮಹಿಳೆ, ಮತ್ತೆ 11ನೇ ಕೇಸ್ ದಾಖಲಿಸುವುದನ್ನು ತಡೆಯಬೇಕಾದರೆ ಆಕೆಯ ಬಗ್ಗೆ ಎಲ್ಲ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಾಲಯ, ಪ್ರತಿವಾದಿ ಮಹಿಳೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಆಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ 2022ರಲ್ಲಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದೆ. ಅಲ್ಲದೇ, ದೂರುದಾರ ಮಹಿಳೆಯ ವಿವರಗಳು ಈಗಾಗಲೇ ಹಲವು ಪೊಲೀಸ್‌ ಠಾಣೆಗಳಲ್ಲಿ ಲಭ್ಯವಿದೆ. ಹಾಗಾಗಿ ಆ ಮಹಿಳೆ ಮತ್ತೆ ಯಾವುದಾದರೂ ಪುರುಷರ ವಿರುದ್ಧ ಪ್ರಕರಣ ದಾಖಲಿಸಲು ಬಂದರೆ, ಅಂತಹ ಸಮಯದಲ್ಲಿ ಪೊಲೀಸರು ಸುಮ್ಮನೆ ಕೇಸು ದಾಖಲಿಸದೇ ಆಕೆಯ ದೂರಿನ ವಿಚಾರದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ನಂತರವೇ ಮುಂದಿನ ಕ್ರಮ ಜರುಗಿಸಬೇಕು ಎಂದು ಪೀಠ ಸೂಚಿಸಿದೆ. ವಿಶೇಷವೆಂದರೆ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಈಕೆ ದಾಖಲಿಸಿರುವ 10 ಪ್ರಕರಣಗಳ ದೂರು ಅರ್ಜಿಯನ್ನೂ ಯಥಾವತ್ತಾಗಿ ಪ್ರಕಟಿಸಿದೆ.

ಅದರಂತೆ ಈಕೆ 10-12011 ರಲ್ಲಿ ತನ್ನ ಪತಿ ವಿರುದ್ದ ಪೀಣ್ಯ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ , 22-4-2015 ರಲ್ಲಿ ಸಂತೋಷ್‌ ಎಂಬುವವರ ವಿರುದ್ದ ಅತ್ಯಾಚಾರ ಪ್ರಕರಣ, 14-6-2015 ರಲ್ಲಿ ಹನುಮೇಷ್‌ ಎಂಬುವವರ ವಿರುದ್ದ ಕೊಲೆ ಬೆದರಿಕೆ, 26-4-2017 ರಲ್ಲಿ ಕುಮಾರ್‌ ಗೌರವ್‌ ಎಂಬುವವರ ವಿರುದ್ದ ಅತ್ಯಾಚಾರ , 26-6-2019 ರಲ್ಲಿ ಮುಂಬೈ ನಿವಾಸಿ ಮನೋಜ್‌ ಎಂಬುವವರ ವಿರುದ್ದ ಮಹಾರಾಷ್ಟ್ರದ ಥಾನಾ ಪೋಲೀಸ್‌ ಠಾಣೆಯಲ್ಲಿ ಅತ್ಯಾಚಾರ, 15-2-20 ರಂದು ಮೊಹಮದ್‌ ನದೀಮ್‌ ಎಂಬುವವರ ವಿರುದ್ದ ಚಿಕ್ಕಬಳ್ಳಾಪುರ ಠಾಣೆಯಲ್ಲಿ ಅತ್ಯಾಚಾರ, 29-2-20 ರಂದು ಬೆಂಗಳುರಿನ ತೇಜಸ್‌ ಎಂಬುವವರ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.

8-11-20 ರಂದು ಬೆಂಗಳೂರಿನ ಪೋಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ವಿಶ್ವನಾಥ್‌ ಬಿರಾದಾರ ಎಂಬುವವರ ವಿರುದ್ದವೂ ಅತ್ಯಾಚಾರದ ಪ್ರಕರಣ ದಾಖಲಿಸಿ ನಿನ್ನ ಕೆಲಸದಿಂದ ತೆಗೆಸುತ್ತೇನೆ ಎಂದು ಹಣ ಸುಲಿಗೆಗೂ ಯತ್ನಿಸಿದ್ದಾಳೆ. 16-9-21 ರಂದು ಅಭಿಷೇಕ್‌ ಎಂಬುವವರ ವಿರುದ್ದ ಕೊಲೆ ಬೆದರಿಕೆ ಮೊಕದ್ದಮೆ ದಾಖಲಿಸಿದ್ದಾಳೆ. ಸಬ್‌ ಇನ್ಸ್‌ಪೆಕ್ಟರ್‌ ವಿಶ್ವನಾಥ್‌ ಈಕೆಯ ವಿರುದ್ದ ಸುಲಿಗೆ ಯತ್ನ ಪ್ರಕರಣ ಹಾಗೂ ಹನುಮೇಷ್‌ ಎಂಬುವವರು ಕೂಡ ಸುಲಿಗೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಈಕೆ ಬಹುತೇಕ ಪ್ರಕರಣಗಳನ್ನು ಬೆಂಗಳೂರಿನಲ್ಲಿ ದಾಖಲಿಸಿದ್ದು ಈಕೆ ದಾಖಲಿಸಿರುವ ೬ ಪ್ರಕರಣಗಳಲ್ಲಿ ಆರೋಪಿ ಖುಲಾಸೆ ಆಗಿರುವುದನ್ನೂ ನ್ಯಾಯಾಲಯ ಗಮನಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮೂರ್ತಿ ಡಿ.ನಾಯಕ್‌, ಮಹಿಳೆ ಈ ರೀತಿ ಅನಗತ್ಯ ಮತ್ತು ಕ್ಷುಲ್ಲಕ ದೂರುಗಳನ್ನು ನೀಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಹಿಂದಿನ 9 ಕೇಸ್ಗಳ ವಿವರಗಳನ್ನು ಒದಗಿಸಿ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಗೊಳಿಸಬೇಕೆಂದು ಕೋರಿದರು. ಆ ಮಹಿಳೆಯ ಬಲೆಗೆ 10ಕ್ಕೂ ಅಧಿಕ ಪುರುಷರು ಬಿದ್ದಿದ್ದಾರೆ. ಕೆಲವರ ಮದುವೆ ಆಗಿದೆ, ಕೆಲವರು ಮದುವೆ ಆಗಿಲ್ಲ, ಆದರೂ ಕೇಸು ಎದುರಿಸುವಂತಾಗಿದೆ. ಹನಿ ಟ್ರ್ಯಾಪ್‌ ಸ್ವಭಾವದ ಆಕೆ ಕಾರ್ಯವಿಧಾನ ಇದೇ ಆಗಿದೆ.

ಕಳೆದೊಂದು ದಶಕದಲ್ಲಿ ಹತ್ತು ಮಂದಿ ವಿರುದ್ಧ ಮದುವೆ ಮಾಡಿಕೊಂಡು ಮೋಸ, ಲೈಂಗಿಕ ದೌರ್ಜನ್ಯ ಹೀಗೆ ಹಲವು ಬಗೆಯ ದೂರುಗಳನ್ನು ದಾಖಲಿಸಿದ್ದಾರೆ. ಆ ದೂರುಗಳಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ, ಹಾಗಾಗಿ ಪೊಲೀಸರು ನಕಲಿ ಕೇಸುಗಳ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ಇದರಿಂದ ಪೊಲೀಸರ ಹಾಗೂ ನ್ಯಾಯಾಲಯಗಳ ಅಮೂಲ್ಯ ಸಮಯವೂ ವ್ಯರ್ಥವಾಗುತ್ತಿದೆ ಎಂದು ಪೀಠ ತಿಳಿಸಿದೆ.ಇಂತಹ ಪ್ರಕರಣಗಳನ್ನು ಮುಂದುವರೆಯಲು ಬಿಟ್ಟಲ್ಲಿ ಸುಳ್ಳು ಪ್ರಕರಣಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಹಾಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

Tags: crimeHome minister Dr G ParameshwaraPolice departmentRape Case
Previous Post

ಅಕ್ರಮ ಮಸೀದಿ ಕುರಿತ ವಿವಾದ ; ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಟೀಕಿಸಿದ ಕಾಂಗ್ರೆಸ್‌

Next Post

ಶಿಮ್ಲಾ ದ ಅನಧಿಕೃತ ಮಸೀದಿಯ ಭಾಗವನ್ನು ಕೆಡವಿದ ಮುಸ್ಲಿಮರು

Related Posts

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
0

ಬೆಳಗಾವಿ: ಬೆಂಗಳೂರು ಮೈಸೂರು ಇನ್ಸ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್(Supreme Court) ಆದೇಶ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಯೋಜನೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು...

Read moreDetails
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

December 18, 2025
ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

December 18, 2025
Next Post

ಶಿಮ್ಲಾ ದ ಅನಧಿಕೃತ ಮಸೀದಿಯ ಭಾಗವನ್ನು ಕೆಡವಿದ ಮುಸ್ಲಿಮರು

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ
Top Story

ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!