ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ (Chamarajapete constituency) ಆನಂದಪುರದಲ್ಲಿ ಇಂದು (ಮಾ.13) ವಿದ್ಯುತ್ ಅವಘಡ ಸಂಭವಿಸಿದ್ದು, ಬೆಳಿಗ್ಗೆ 3.30ರ ಸುಮಾರಿಗೆ ಮೇನ್ ಲೈನ್ ಆನ್ ಮಾಡಲು ತೆರಳಿದ್ದ ಮಹಿಳೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಏರಿಯಾದಲ್ಲಿ ಈ ಹಿಂದೆಯೂ ಈ ರೀತಿಯ ಘಟನೆಗಳು ವರದಿಯಾಗಿದ್ದು, ಸರಿಯಾದ ವ್ಯವಸ್ಥೆ ಕಲ್ಪಿಸದೇ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಇಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸೆಲ್ವಿ (Selvi) ಎಂಬ ಮಹಿಳೆ ಮೃತಪಟ್ಟ ಕಾರಣ ರೊಚ್ಚಿಗೆದ್ದ ನಿವಾಸಿಗಳು ಮೈಸೂರು ರಸ್ತೆ (Mysuru road) ತಡೆದು ಪ್ರತಿಭಟನೆ ನಡೆಸಿದ್ದಾರೆ..ಕನಿಷ್ಠ ಮೂಳಭೂತ ಸೌಕರ್ಯ ಕಲ್ಪಿಸಲು ಮುಂದಾಗದ ಶಾಸಕ ಜಮೀರ್ ಅಹ್ಮದ್ ಖಾನ್ (Mla Zameer ahmed khan) ವಿರುದ್ಧ ಇಲ್ಲಿನ ನಿವಾಸಿಗಳು ತಾರತಮ್ಯದ ಆರೋಪ ಮಾಡಿದ್ದು, ಹಿಂದೂಗಳಿರುವ ಏರಿಯಾದಲ್ಲಿ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಅದೇ ಪಕ್ಕದಲ್ಲಿರುವ ಟಿಪ್ಪು ನಗರದಲ್ಲಿ (Tippu nagar) ಅಧಿಕ ಸಂಖ್ಯೆಯಲ್ಲಿ ಮುಸ್ಲಿಮರು ವಾಸವಾಗಿದ್ದು, ಮನೆ ಮನೆಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು, ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನಾದ್ರೂ ಸರಿಯಾದ ರೀತಿಯಲ್ಲಿ ಕಲ್ಪಿಸಬೇಕು, ಆ ಮೂಲಕ ಇನ್ನಷ್ಟು ಜೀವಗಳು ಬಲಿಯಾಗದಂತೆ ತಡೆಯಬೇಕು ಎಂದು ಇಲ್ಲಿನ ನಿವಾಸಿಗಳು ಪಟ್ಟುಹಿಡಿದಿದ್ದು ಪೀಲಿಸರು ಮನವೊಲಿಸುವ ಪ್ರಯತ್ನ ಮಾಡಿದ್ರೂ ಯಶಸ್ವಿಯಾಗಿಲ್ಲಾ. ಸ್ಥಳಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ಬಂದು ಸಮಸ್ಯೆ ಆಲಿಸಿದ ನಂತರವೇ ಪ್ರತಿಭಟನೆ ಹಿಂಪಡೆಯೋದಾಗಿ ಜನ ಆಗ್ರಹಿಸಿದ್ದಾರೆ.