ಟಿ20 ವಿಶ್ವಕಪ್ (T20 world up) ಗೆದ್ದು ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ ಆಟಗಾರರು ಸ್ವದೇಶಕ್ಕೆ ರಿಟರ್ನ್ ಆಗಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿಳಿದ ರೋಹಿತ್ (Rohit Sharma) ಬಳವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯ್ತು.

ಬೆರಿಲ್ ಚಂಡಮಾರುತದ ಪರಿಣಾಮ ಕಳೆದ ಮೂರು ದಿನಗಳಿಂದ ಟೀಂ ಇಂಡಿಯಾ (Team india) ವೆಸ್ಟ್ ಇಂಡೀಸ್‌ನ ಬಾರ್ಬಡೊಸ್‌ನಲ್ಲಿ ಉಳಿದುಕೊಂಡಿತ್ತು. ಬಿಸಿಸಿಐ (BCCI) ವಿಶೇಷ ಮುತುವರ್ಜಿ ವಹಿಸಿ ಚಾರ್ಟಡ್್ರ ಫೈಟ್ ಮೂಲಕ ಆಟಗಾರರನ್ನ ದೇಶಕ್ಕೆ ಕರೆತಂದಿದೆ. ಇಂದು ಬೆಳಿಗ್ಗೆ 6 ಗಂಟೆಗೆ ರೋಹಿತ್ & ಟೀಮ್ ದೆಹಲಿಗೆ (landed at the IGI Airport )ಬಂದಿಳಿದಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ (Narendra modi) ವಿಶ್ವಕಪ್ ವಿಜೇತ ತಂಡದ ಜೊತೆ ಉಪಹಾರ ಕೂಟವನ್ನ ಹಮ್ಮಿಕೊಂಡಿದ್ದಾರೆ. ಇದು ಮುಗಿಯುತ್ತಿದ್ದಂತೆ ಇಡೀ ತಂಡ ಮುಂಬೈನತ್ತ (Mumbai) ಪ್ರಯಾಣ ಬೆಳೆಸಲಿದ್ದು ಮರೀನ್ ಡ್ರೈವ್‌ನಿಂದ ವಾಂಖೆಡೆ ಮೈದಾನದ ತನಕ ತೆರೆದ ಬಸ್‌ನಲ್ಲಿ ಮೆರವಣಿಗೆ ನಡೆಯಲಿದೆ. ಸುಮಾರು 2 ಗಂಟೆಗಳ ಕಾಲ ಮೆರವಣಿಗೆ ಸಾಗಲಿದ್ದು, ಆಟಗಾರರು ಟ್ರೋಫಿ ಜೊತೆ ಈ ಸಂಭ್ರಮದಲ್ಲಿ ಮುಳುಗಲಿದ್ದಾರೆ. Indian Captain Rohit Sharma cuts a cake at ITC Maurya in Delhi to celebrate the ICC T20 World Cup victory