ನಟ ದರ್ಶನ್ & ಗ್ಯಾಂಗ್ ಗೆ (Darshan & gang) ವಿಧಿಸಿದ್ದ 14 ದಿನಗಳ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯವಾಗೋ ಹಿನ್ನಲೆ ಇಂದು ವಿಡಿಯೋ ಕಾನ್ಫರೆನ್ಸ್ (Video conference)ಮೂಲಕ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿಕ್ಕೆ ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.
ಜೂನ್ 11 ರಂದು ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy murder case) ಸಂಬಂಧ ದರ್ಶನ್ ಮತ್ತು ಗ್ಯಾಂಗ್ ಅನ್ನ ಅರೆಸ್ಟ್ ಮಾಡಲಾಗಿತ್ತು. ಜೂನ್ 22 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ರು. ಇಂದು 14 ದಿನಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗೋ ಹಿನ್ನಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಬೇಕಿದೆ.
ಈ ಕೇಸ್ ಸಂಬಂಧ ಇದುವರೆಗೂ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ. ಚಾರ್ಜ್ ಶೀಟ್ (Charge sheet) ನ್ಯಾಯಾಲಯಕ್ಕೆ ಸಲ್ಲಿಕೆ ಆಗಲಿ ಅಂತ ಕಾಯ್ತಿರೋ ಸಾಧ್ಯತೆ ಇದ್ದು,ಕೊಲೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರಿಗೆ 90 ದಿನಗಳ ಕಾಲಾವಕಾಶವಿದೆ.
ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೂ ದರ್ಶನ್ & ಗ್ಯಾಂಗ್ ನ್ಯಾಯಾಂಗ ಬಂಧನವೇ ಗಟ್ಟಿ ಎನ್ನಲಾಗ್ತಿದ್ದು,ಒಂದು ವೇಳೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ ಚಾರ್ಜ್ ಶೀಟ್ ಗೂ ಮುನ್ನಾ ಕೊಲೆ ಕೇಸ್ ನಲ್ಲಿ ಬೇಲ್ ಸಿಗುವ ಸಾಧ್ಯತೆಗಳಿಲ್ಲ.ಅಲ್ಲದೇ ಕೆಳಹಂತದ ನ್ಯಾಯಾಲಯದಲ್ಲಿ ಕೊಲೆ ಕೇಸ್ ಗೆ ಬೇಲ್ ನೀಡುವ ಸಾಧ್ಯತೆ ತೀರಾ ಕಡಿಮೆ ಕೂಡ.
ಹೀಗಾಗಿ ಜಾರ್ಜ್ ಶೀಟ್ ಸಲ್ಲಿಕೆ ವೇಳೆಗೆ ಎಸಿಎಂಎಂ ನ್ಯಾಯಾಲಯಕ್ಕೆ (ACMM court) ಜಾಮೀನು ಅರ್ಜಿ ಸಲ್ಲಿಕೆ ಮಾಡಲಿಕ್ಕೆ ವಕೀಲರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಎಸಿಎಂಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆದ್ರೆ , ನಂತರ ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸುವ ಚಿಂತಾಲೆಯಲ್ಲಿದ್ದಾರೆ.