
ಕನ್ನಡಿಗನ ಮೇಲೆ ಸುಳ್ಳು ಆರೋಪ ಮಾಡಿದ್ದ ವಿಂಗ್ ಕಮ್ಯಾಂಡರ್ ಅಡಕಸಬಿತನ ಬಟಾಬಯಲು ಶಿಲಾದಿತ್ಯ ಗೋಸುಂಬೆತನಕ್ಕೆ ರೊಚ್ಚಿಗೆದ್ದ ಕನ್ನಡಿಗರು!
ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ (Baiyyappanahalli) ನಡೆದಿದ್ದ ರೋಡ್ ರೇಜ್ (Road rage case) ಪ್ರಕರಣದಲ್ಲಿ ತನ್ನ ತಪ್ಪು ಮುಚ್ಚಿಕೊಳ್ಳುವ ಸಲುವಾಗಿ ಕಿರಾತಕನಂತೆ ವರ್ತಿಸಿ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ಆರೋಪ ಮಾಡಿದ್ದ, ರಕ್ತ ಸುರಿಯುವಂತೆಯೇ ವೀಡಿಯೋ ಮಾಡಿ ನವರಂಗಿ ಕಥೆ ಕಟ್ಟಿದ್ದ ವಿಂಗ್ ಕಮ್ಯಾಂಡರ್ ಶಿಲಾದಿತ್ಯನ ಅಡಕಸಬಿತನ ಈಗ ಬಯಲಾಗಿದೆ.ಈ ವಿಂಗ್ ಕಮ್ಯಾಂಡರ್ ತಾನೇ ಕನ್ನಡಿಗನ ಮೇಲೆ ಮನ ಬಂದಂತೆ ಹಲ್ಲೆ ಮಾಡಿ. ದರ್ಪ ತೋರಿ ಆ ನಂತರ ಗೋಸುಂಬೆಯಂತೆ ಕಥೆ ಕಟ್ಟಿದ್ದವನ ಅಸಲಿ ಕಹಾನಿಯನ್ನ ಸಿಸಿಟಿವಿ ದೃಷ್ಟಗಳು ತೆರೆದಿಟ್ಟಿದ್ದು ಈ ಕುರಿತು ಕನ್ನಡಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಆ ರಂಭದಲ್ಲಿ ಬೇರೆ ಸ್ವರೂಪ ಪಡೆದುಕೊಂಡಿದ್ದ ಈ ಪ್ರಕರಣ, ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ತನ್ನ ಮೇಲೆ ಬೆಂಗಳೂರಿನ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ರಕ್ತ ಸೋರುತ್ತಿರುವಂತೆಯೇ ವೀಡೀಯೋ ಮಾಡಿ ಸಿನಿಮಾ ನಟನಿಗಿಂತ ಅದ್ಭುತ ನಟನೆ ಮಾಡಿದ್ದ ವಿಂಗ್ ಕಮ್ಯಾಂಡರ್, ಬೀದಿ ಜಗಳಕ್ಕೆ ಭಾಷೆಯ ಬಣ್ಣ ಕಟ್ಟಿದ್ದ ಶಿಲಾದಿತ್ಯ (wing commander shiladitya) ಅಸಲಿ ಮುಖ ಈಗ ಬಯಲಾಗಿದೆ.
ಕಾರಿನಲ್ಲಿ ಚಲಿಸುವ ವೇಳೆ ಬೈಕ್ ಚಾಲಕ ವಿಕಾಸ್ (Vikas) ತಮ್ಮನ್ನು ಅಡ್ಡಗಟ್ಟಿ ಕನ್ನಡದಲ್ಲಿ ಅವಾಚ್ಯವಾಗಿ ನಿಂದಿಸಿ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ವಿಂಗ್ ಕಮಾಂಡರ್ ನೀಡಿದ್ದ ದೂರಿನ ಆಧಾರದ ಮೇಲೆ ಬೈಕ್ ಬಾಲಕ, ಕನ್ನಡಿಗ ವಿಕಾಸ್ ಮೇಲೆ ಎಫ್.ಐ.ಆರ್ (FIR) ದಾಖಲಿಸಲಾಗಿತ್ತು ಆದ್ರೆ ಕಹಾನಿ ಬೇರೆಯೆ ಇದೆ. ಜಗಳ ನಡೆದಿದ್ದೇನೋ ಹೌದು. ಆದ್ರೆ ಆರೋಫ ಸಂಪೂು ಸತ್ಯವಲ್ಲ. ಸಿಸಿಟಿವಿ ದೃಶ್ಯಗಳು ಹೊರಬಿದ್ದ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿತ್ತು.
ಈ ವಿಂಗ್ ಕಮ್ಯಾಂಡರ್ ಶಿಲಾದಿತ್ಯ ತಾನೇ ಬೈಕ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ವ್ಯಾಘ್ರನಂತೆ ಯುವಕನ ಮೇಲೆರಗಿರುವ ಈತ | ಕಾಳಿನಿಂದ ಒದ್ದು ತೀವ್ರ ಹಲ್ಲೆ ನಡೆಸಿದ್ದಾನೆ. ಈ ದೃಷ್ಯಗಳು ವೈರಲ್ ಆಗ್ತಿದ್ದಂತೆ ಕನ್ನಡಿಗರ ಆಕ್ರೋಶದ ಕಟ್ಟೆಯೊಡೆದಿದೆ. ಈ ಸಂಬಂಧ ಹಲ್ಲೆಗೊಳಗಾದ ಕನ್ನಡಿನ ವಿಕಾಸ್ ಕೂಡ ದೂರು ನಿಡಿದ್ದು, ಪೋಲಿಸರು ವಿಂಗ್ ಕಮ್ಯಾಂಡರ್ ಮೇಲೆ ಎಫ್ ಐ ಆರ್ ದಾಖಲಿಸಲು ಸಹ ಮೀನಾಮೇಷ ಎಣಿಸಿದ್ದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರನ್ನು ಕೆರಳಿಸಿತ್ತು.

ಹೀಗಾಗಿ ಪೋಲಿಸ್ ಠಾಣೆಗೆ ಅಗಮಿಸಿದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ (Roopesh Rajanna) ಮತ್ತು ಕಾರ್ಯಕರ್ತರು ಪೋಲಿಸರ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕನ್ನಡಿಗ ವಿಕಾಸ್ ದೂರಿದ ಆಧಾರದ ಮೇಲೆ ಶಿಲಾದಿತ್ಯ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

ಆದ್ರೆ ಕೇವಲ ಎಫ್‌ಐಆರ್ ದಾಖಲು ಮಾಡಿದ್ರೆ ಸಾಲುವುದಿಲ್ಲ. ಬದಲಾಗಿ ಕೂಡಲೇ ಆತನನ್ನು ಬಂಧಿಸಬೇಕು ಎಂಬುದು ಕನ್ನಡಿಗರ ಆಗ್ರಹವಾಗಿದೆ. ತಾನೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಕನ್ನಡ ಮತ್ತು ಹಿಂದಿ ಭಾಷಿಕರ ನಡುವೆ ಬೆಂಕಿ ಹಚ್ಚುವ ಕೃತ್ಯ ಮಾಡಿದ್ದು ದೊಡ್ಡ ನೀಚತನ. ಹೀಗಾಗಿ ಕೂಡಲೇ ಆತನನ್ನು ಬಂಧಿಸಿ ತಕ್ಕ ಶಿಕ್ಷೆಗೆ ಒಳಪಡಿಸಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

ಈ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರು ಗೃಹ ಸಚಿವ ಡಾ.ಜಿ ಪರಮೇಶ್ವರ್, ಈಗಾಗಲೇ ವಿಂಗ್ ಕಮ್ಯಾಂಡರ್ ವಿರುದ್ಧ ಕೇಸ್ ದಾಖಲಾಗಿದೆ. ಆತ ಕೊಲ್ಕತ್ತಾಗೆ ತೆರಳಿರುವುದಾಗಿ ತಿಳಿದುಬಂದಿದ್ದು ಸದ್ಯದಲ್ಲೇ ಆತನನ್ನು ಬಂಧಿಸಲಾಗುವುದು ಎಂದಿದ್ದಾರೆ.












