ಇದೇ ಸೆಪ್ಟೆಂಬರ್ 18 ರಿಂದ 22 ರವರೆಗೆ ಕರೆಯಲಾಗಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಒಂದು ದೇಶ ಒಂದು ಚುನಾವಣೆ ಸಮಾನ ನಾಗರಿಕ ಸಂಹಿತೆ ಹಾಗೂ ಮಹಿಳಾ ಪ್ರಾತಿನಿಧ್ಯ ಕುರಿತು ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ
ಇದಕ್ಕೂ ಮೊದಲು ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ವಿಶೇಷ ಕಲಾಪದ ವಿಶೇಷ ಸಂಸತ್ ಅಧಿವೇಶನ ನಡೆಸಲಾಗುವುದು ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಹಿತಿಯನ್ನು ನೀಡಿದ್ದಾರೆ.
ಅಮೃತಕಾಲ ಸಂಸತ್ತಿನಲ್ಲಿ ಫಲಪ್ರದ ಮಾತುಕತೆ ಹಾಗೂ ಚರ್ಚೆಗಳನ್ನು ಎದುರು ನೋಡ್ತಾ ಇದ್ದೇವೆ ಅಂತ ಅವರು ಹೇಳಿಕೆಯನ್ನು ನೀಡಿದ್ದಾರೆ
ಒಂದೇ ಬಾರಿ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಗುರಿಯನ್ನು ಒಂದು ದೇಶ ಒಂದು ಚುನಾವಣೆ ಪ್ರಸ್ತಾವ ಹೊಂದಿದೆ. ಈ ಹಿಂದೆ ಹಲವಾರು ಬಾರಿ ಈ ಯೋಜನೆಯನ್ನು ತಿರಸ್ಕರಿಸಲಾಗಿತ್ತು ಹಾಗೂ ಸ್ಪೀರಿತು ಭಾರತೀಯ ಕಾನೂನು ಆಯೋಗವು ಅಧ್ಯಯನವನ್ನು ಕೂಡ ನಡೆಸಿದನ್ನ ಇಲ್ಲಿ ಮರೆಯುವ ಹಾಗಿಲ್ಲ..
ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳಿಗೆ ಸಾಮಾನ್ಯವಾಗಿ ಅವುಗಳ ಅವಧಿ ಮುಕ್ತಾಯಗೊಂಡ ನಂತರ ಚುನಾವಣೆಗಳನ್ನ ನಡೆಸಲಾಗುತ್ತಿದೆ ಆದರೆ ಇದರಿಂದ ಸಾಮಾನ್ಯವಾಗಿ ವರ್ಷವೊಂದರಲ್ಲಿ ಎರಡು ಚುನಾವಣಾ ರೂಪುಗಳಿಗೆ ಅಡಿಗಲ್ಲು ಹಾಕಿದ ಹಾಗೆ ಆಗುತ್ತಿದೆ ಹೀಗಾಗಿ ಪ್ರತಿ ಋತು ವಿವಿಧ ರಾಜ್ಯಗಳ ವಿಧಾನಸಭೆಗಳ ಮತದಾನಕ್ಕೆ ಸಾಕ್ಷಿಯಾಗುತ್ತಿದ್ದು ಇದರಿಂದ ಆರ್ಥಿಕ ಹೊರೆಯು ಆಯಾ ರಾಜ್ಯಗಳ ಮೇಲೆ ಮತ್ತು ಚುನಾವಣಾ ಆಯೋಗದ ಮೇಲೆ ಬೀಳುತ್ತಿದೆ ಎಂಬಂತ ಮಾತುಗಳು ಕೂಡ ಈ ಹಿಂದಿನಿಂದ ಕೇಳಿಬಂದಿದ್ದವು
ಇದೀಗ ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆಯಾಗಿ ಲೋಕಸಭೆ ಹಾಗೂ ಎಲ್ಲಾ ರಾಜ್ಯ ವಿಧಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸಲಾಗುತ್ತದೆ ಈ ಸಂದರ್ಭದಲ್ಲಿ ಒಂದೇ ದಿನ ಮತದಾನ ಪ್ರಕ್ರಿಯೆ ನಡೆಯಲಿದೆ ಅಂತ ಹೇಳಲಾಗುತ್ತಿದೆ
ಈಗ ವಿಶೇಷ ಸಂಸತ್ ಅಧಿವೇಶನವನ್ನು ಕರೆದಿರುವುದರ ಹಿಂದೆ ಈ ಒಂದು ರಣತಂತ್ರವನ್ನು ಕೇಂದ್ರದ ಮೋದಿ ಸರ್ಕಾರ ಹಣೆದಿದೆ ಅಂತ ಹೇಳಲಾಗುತ್ತಿದೆ