ಪಂಚರಾಜ್ಯ ಚುನಾವಣೆ ಮುಗಿದ ನಂತರ ಕೇಂದ್ರ ಸರ್ಕಾರ ಏನಾದರೂ ಪೆಟ್ರೋಲ್ ಹಾಗೂ ಡೀಸೆಲ್ ಬೆಕೆ ಏರಕೆ ಮಾಡಿದರೆ ದೇಶಾದ್ಯಂತ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ತಿಳಿಸಿದೆ.
ಸದ್ಯ ಚುನಾವಣೆ ಹೊಸ್ತಿಲಲ್ಲಿ ದರ ಇಳಿಕೆಯಾಗಿದ್ದರೂ ಸಹ ಚುನಾವಣೆ ಮುಗಿದ ನಂತರ ಏರಿಕೆಯಾಗಬಹುದು ಎಂದು ಇತ್ತೀಚಿಗೆ ಬಿಡುಗಡೆಯಾಗಿದ್ದ ಸಮೀಕ್ಷೆಯೊಂದು ಹೇಳಿತ್ತು. ಕಳೆದ ವರ್ಷ ನಡೆದ ಪಂಚರಾಜ್ಯ ಚುನಾವಣೆಯ ವೇಳೆ 18 ದಿನಗಳ ಕಾಲ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯನ್ನು ಕಂಡಿರಲಿಲ್ಲ. ಫಲಿತಾಂಶಗಳು ಪ್ರಕಟವಾದ ನಂತರ ತೈಲ ದರದಲ್ಲಿ ದಾಖಲೆಯ ಏರಿಕೆಯನ್ನು ಕಂಡಿತ್ತು.
ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಅಲ್ಕಾ ಲಂಬಾ, Commercial LPG ಬೆಲೆಯಲ್ಲಿ 105 ರೂಗಳನ್ನು ಏರಿಕೆ ಮಾಡಿದ್ದನ್ನು ಖಂಡಿಸಿ, ಗೃಹ ಬಳಕೆ LPG ಬೆಲೆಯನ್ನು 27ರೂಗಳಷ್ಟು ಏರಿಕೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಎರಡು ಹಂತದ ಮತದಾನಗಳು ಬಾಕಿಯಿರುವಾಗಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಚುನಾವಣೆ ಮುಗಿದ ನಂತರ ಬೆಲೆ ಏರಿಕೆಯಾದರೆ ಕಾಂಗ್ರೆಸ್ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ಮಾಡಲಿದೆ ಎಂದರು.
ಇನ್ನು ಎರಡು ಹಂತದ ಮತದಾನಗಳು ಬಾಕಿಯಿರುವಾಗಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಮೋದಿ ಸರ್ಕಾರವು ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲನ್ನು ಒಪ್ಪಕೊಂಡಂತೆ ಕಾಣುತ್ತಿದೆ. ದೇಶದಲ್ಲಿ ತೀವ್ರವಾಗಿ ಏರಿಕೆಯನ್ನು ಕಂಡಿರುವ ಹಣದುಬ್ಬರದ ಬಗ್ಗೆ ಇದು ಮಾನವ ನಿರ್ಮಿತ ಅಲ್ಲ ಮೋದಿ ನಿರ್ಮಿತ ಎಂದು ಕುಟುಕಿದ್ದಾರೆ.
ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೀಘ್ರವೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ತೀವ್ರ ಏರಿಕೆ ಕಾಣುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
`LPG ಬೆಲೆಗಳನ್ನು ಹೆಚ್ಚಿಸುವ ಮೂಲಕ ಮೋದಿ ಸರ್ಕಾವು ಸಾಮಾನ್ಯ ಎದುರಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದಿಲ್ಲ ಎಂದು ಮತ್ತೊಮ್ಮೆ ನಿರೂಪಿಸಿದೆ. ಇಂದು LPG ನಾಳೆ ಪೆಟ್ರೋಲ್ ಹಾಗೂ ಡೀಸೆಲ್ ಎಂದು ಟ್ವೀಟ್ ಮಾಡಿದ್ದಾರೆ.