• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

BJP ಜೊತೆಗಿನ ಮೈತ್ರಿಯಿಂದ JDS ಲಾಭ ಆಗುತ್ತಾ..? ಅನುಮಾನ ಯಾಕೆ..?

ಕೃಷ್ಣ ಮಣಿ by ಕೃಷ್ಣ ಮಣಿ
September 11, 2023
in ಅಂಕಣ
0
ಬಿಜೆಪಿ-ಜೆಡಿಎಸ್‌ ಮೈತ್ರಿ

ಸಾಂದರ್ಭಿಕ ಚಿತ್ರ

Share on WhatsAppShare on FacebookShare on Telegram

ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಗರಿಗೆದರಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಕಟ್ಟಿ ಹಾಕಲು ಜೆಡಿಎಸ್​-ಬಿಜೆಪಿ ಮೈತ್ರಿ ರಾಜಕಾರಣ ಶುರು ಮಾಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಎರಡೂ ಪಕ್ಷಗಳ ಅಗ್ರಗಣ್ಯ ನಾಯಕರು ಮೈತ್ರಿಯನ್ನು ಅಧಿಕೃತ್ವಾಗಿ ಘೋಷಣೆ ಮಾಡಲಿದ್ದಾರೆ. ಆದರೆ ಈ ಮೈತ್ರಿಯಿಂದ ಕಾಂಗ್ರೆಸ್​ಗೆ ಸಣ್ಣ ಪ್ರಮಾಣದಲ್ಲಿ ಹೊಡೆತ ಬೀಳುವುದು ನಿಶ್ಚಿತ. ಹಾಗಿದ್ದರೂ ಜೆಡಿಎಸ್​ಗೆ ಬಿಜೆಪಿ ಜೊತೆಗಿನ ಮೈತ್ರಿಯಿಂದ ಯಾವ ಪ್ರಮಾಣದಲ್ಲಿ ಲಾಭ ಆಗಲಿದೆ ಎನ್ನುವುದನ್ನು ನೋಡಿದಾಗ, ಜೆಡಿಎಸ್​ಗೆ ಈ ಬಾರಿಯ ಚುನಾವಣೆಯಲ್ಲೂ ನಷ್ಟ ಎದುರಾಗುವ ಸಾಧ್ಯತೆಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಜೆಡಿಎಸ್​ ಕೇಳಿರುವ ಕ್ಷೇತ್ರಗಳು ಹಾಗು ಅಲ್ಲಿನ ಪರಿಸ್ಥಿತಿಗಳು ಚಿಂತಾಜನಕವಾಗಿವೆ.

ADVERTISEMENT

ಹಾಸನದಲ್ಲಿ ಜೆಡಿಎಸ್​ ಗೆಲುವಿಗೆ ಕೈ ಜೋಡಿಸುತ್ತಾ ಬಿಜೆಪಿ..?

ಹಾಸನದಲ್ಲಿ ಕಾಂಗ್ರೆಸ್​, ಜೆಡಿಎಸ್​ ಹಾಗು ಬಿಜೆಪಿ ಮೂರು ಪಕ್ಷಗಳು ಸದ್ಯಕ್ಕೆ ಬಲಾಢ್ಯ ಆಗಿದೆ. ಸಕಲೇಶಪುರ, ಬೇಲೂರಿನಲ್ಲಿ ಬಿಜೆಪಿ ಜಯ ಗಳಿಸಿದ್ದರೆ, ಅರಕಲಗೂಡು, ಹೊಳೆನರಸೀಪುರ, ಹಾಸನ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​​ ಗೆಲುವು ಸಾಧಿಸಿದೆ. ಇನ್ನು ಅರಸೀಕೆರೆಯಲ್ಲಿ ಕಾಂಗ್ರೆಸ್​ ಜಯಗಳಿಸಿದೆ. ಜಿಲ್ಲೆಯ 4 ಕ್ಷೇತ್ರಗಳಲ್ಲಿ ಜೆಡಿಎಸ್​ ಶಾಸಕರಿದ್ದರೂ ಆ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ಕೂಡ ಬಲಾಢ್ಯವಾಗಿಯೇ ಇದೆ. ಇನ್ನುಳಿದಂತೆ ಸಕಲೇಶಪುರ ಹಾಗು ಬೇಲೂರಿನಲ್ಲಿ ಬಿಜೆಪಿ ಶಾಸಕರಿದ್ದು, ಇಲ್ಲಿ ಪ್ರಮುಖ ಎದುರಾಳಿ ಜೆಡಿಎಸ್​ ಆಗಿದೆ. ಹೀಗಾಗಿ ಈ ಎರಡೂ ಕ್ಷೇತ್ರದ ಜೊತೆಗೆ ಹಾಸನದಲ್ಲೂ ಪ್ರಬಲ ಆಗಿರುವ ಬಿಜೆಪಿ ಹೊಂದಾಣಿಕೆ ಆಗುತ್ತಾ..? ಅನ್ನೋದು ಅನುಮಾನ ಸೃಷ್ಟಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತು ಕುದಿಯುತ್ತಿರುವ ಮಾಜಿ ಶಾಸಕ ಪ್ರೀತಂಗೌಡ ಕಾಂಗ್ರೆಸ್​ ಜೊತೆಗೆ ಕೈಜೋಡಿಸಿದರೆ ಜೆಡಿಎಸ್​ ಗೆಲುವು ಕಷ್ಟ ಎನ್ನಬಹುದಾಗಿದೆ.

ಮಂಡ್ಯ, ಹಾಸನದಲ್ಲೂ ಜೆಡಿಎಸ್​ಗೆ ಸಂಕಷ್ಟ ಗ್ಯಾರಂಟಿ..!

ಮಂಡ್ಯ ಹಾಗು ತುಮಕೂರಿನಲ್ಲೂ ಜೆಡಿಎಸ್​ಗೆ ಲಾಭ ಆಗುವ ಸಾಧ್ಯತೆಗಳು ತೀರಾ ವಿರಳ ಎನ್ನಬಹುದು. ಮಂಡ್ಯದ 6 ಕ್ಷೇತ್ರಗಳಲ್ಲಿ ಜೆಡಿಎಸ್​ ಸೋಲುಂಡು ಕಾಂಗ್ರೆಸ್​ ಗೆದ್ದು ಬೀಗಿದೆ. ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್​ ಗೆಲುವು ಸಾಧಿಸಿದೆ. ಅಂದ ಮಾತ್ರಕ್ಕೆ ಜೆಡಿಎಸ್​​ ಜಿಲ್ಲೆಯಲ್ಲಿ ಶಕ್ತಿಹೀನ ಎಂದು ಭಾವಿಸಲಾಗದು. ಜೆಡಿಎಸ್​ ಹಾಗು ಕಾಂಗ್ರೆಸ್​ ಹೆಚ್ಚುಕಡಿಮೆ ಸಮಬಲ ಹೊಂದಿದ್ದು, ಸ್ವಲ್ಪ ಆ ಕಡೆ ಈ ಕಡೆಗೆ ಮತಗಳು ವಾಲಿದರೂ ಸೋಲು ಗೆಲುವಿನ ಲೆಕ್ಕಚಾರಗಳು ಬದಲಾಗುವ ಸಾಧ್ಯತೆಗಳಿವೆ. ಇನ್ನು ಹಾಲಿ ಸಂಸದೆ ಸುಮಲತಾ ಬಿಜೆಪಿ – ಜೆಡಿಎಸ್​ ಹೊಂದಾಣಿಕೆ ಮಾಡಿಕೊಂಡರೂ ಸ್ಪರ್ಧೆಯಿಂದ ಹಿಂದೆ ಸರಿಯಲಾರರು ಎನ್ನಲಾಗ್ತಿದೆ. ಇತ್ತ ತುಮಕೂರಿನಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಮಾಹಿತಿ ಸಿಗುತ್ತಿದೆ. ಕಳೆದ ಬಾರಿ ದೇವೇಗೌಡರೇ ಸ್ಪರ್ಧೆ ಮಾಡಿದ್ದರು. ಆದರೆ ತುಮಕೂರಿನ ಜನರು ಸೋಲಿಸಿದ್ದರು. ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡರು ಕಾಂಗ್ರೆಸ್​ನಲ್ಲಿ ಟಿಕೆಟ್​ ಸಿಗದೆ ತಟಸ್ಥವಾಗಿದ್ದರು. ಈ ಬಾರಿ ಮತ್ತೆ ಬಿಜೆಪಿಯ ಹಾಲಿ ಸಂಸದ ಜಿ.ಎಸ್​ ಬಸವರಾಜು ಟಿಕೆಟ್​ ಕೈತಪ್ಪಿದ್ರೆ ತಟಸ್ಥರಾಗಲಿದ್ದು, ಬಿಜೆಪಿ ಶಾಸಕರು ಜೆಡಿಎಸ್​ಗೆ ಸಂಪೂರ್ಣ ಮನಸ್ಸಿನಿಂದ ಕೆಲಸ ಮಾಡಲಾರರು ಅನ್ನೋ ಮಾಹಿತಿ ಇದೆ.

ಕುಮಾರಸ್ವಾಮಿ ಮಾಡಿಕೊಳ್ಳುವ ಎಡವಟ್ಟು ಏನು ಗೊತ್ತಾ..?

ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮಾನವೀಯತೆ ಹೊಂದಿರುವ ರಾಜಕಾರಣಿ, ರೈತರ ಬಗ್ಗೆ ಎಲ್ಲರಿಗಿಂತಲೂ ತುಸು ಹೆಚ್ಚು ಮಮಕಾರ ಹೊಂದಿರುವ ನಾಯಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕಳೆದ ಬಾರಿ ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಂಡಾಗಲೂ ಮೇಲ್ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡರು. ಗೆಲ್ಲುವುದಕ್ಕೆ ಸಾಧ್ಯವಾಗದೆ ಸೋಲುಂಡರು. ಸ್ಥಳೀಯವಾಗಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿಲ್ಲ. ಈ ಬಾರಿ ಆದರೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡಿದರೆ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡುವುದರಿಂದ ಒಂದಿಷ್ಟು ಲಾಭ ಆಗಬಹುದು. ಅದನ್ನು ಬಿಟ್ಟು ಕೇವಲ ದೆಹಲಿ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ಸ್ಥಳೀಯ ನಾಯಕರನ್ನು ಮಾತನಾಡಿಸದೆ ಇದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೆ ಕಾಂಗ್ರೆಸ್​ ಮೈತ್ರಿಗಿಂತ ಬಿಜೆಪಿ ಜೊತೆಗಿನ ಮೈತ್ರಿ ಜೆಡಿಎಸ್​ಗೆ ಉತ್ತಮ ಎನ್ನಬಹುದು.

Tags: BJPBJP JDS AllianceJDSಜೆಡಿಎಸ್‌ಬಿಜೆಪಿಬಿಜೆಪಿ-ಜೆಡಿಎಸ್‌ ಮೈತ್ರಿ
Previous Post

ಇಂಡಿಯಾವನ್ನೇ ಛಿದ್ರ ಮಾಡಲು ಮುಂದಾಗಿದ್ದಾರಾ ಪ್ರಧಾನಿ ನರೇಂದ್ರ ಮೋದಿ..?

Next Post

ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಕೆಣಕಿದ ಕಾಂಗ್ರೆಸ್‌ಗೆ ಗೆದ್ದಲು ಹಿಡಿದ ಪಕ್ಷ ಎಂದು ಟೀಕೆ

Related Posts

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ
ಅಂಕಣ

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

by ಪ್ರತಿಧ್ವನಿ
April 30, 2026
0

ಭಾರತದ ಸಾಮಾಜಿಕ ಮತ್ತು ರಾಜಕೀಯ ಭೂಪಟದಲ್ಲಿ ಕರ್ನಾಟಕವು ಸಾಮಾಜಿಕ ನ್ಯಾಯದ ಪ್ರಯೋಗಶಾಲೆ ಎಂದು ಗುರುತಿಸಲ್ಪಟ್ಟಿದೆ. ಸಹಸ್ರಾರು ವರ್ಷಗಳ ಕಾಲ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಮಾನ...

Read moreDetails
ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

April 30, 2026
ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

April 29, 2026
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ಬಿಜೆಪಿ-ಜೆಡಿಎಸ್‌ ಮೈತ್ರಿ

ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಕೆಣಕಿದ ಕಾಂಗ್ರೆಸ್‌ಗೆ ಗೆದ್ದಲು ಹಿಡಿದ ಪಕ್ಷ ಎಂದು ಟೀಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada