ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದರೂ ಅವರ ಮೇಲಿರುವ ಅಭಿಮಾನಿಗಳ ಕ್ರೇಜ್ ಮಾತ್ರ ಸ್ವಲ್ಪನೂ ಕಡಿಮೆ ಆಗಿಲ್ಲ. ಸದಾ ಡಿ ಬಾಸ್ ಜಪ ಮಾಡುವ ದರ್ಶನ್ ಫ್ಯಾನ್ಸ್ ಇದೀಗ ಡೆವಿಲ್ ಸಿನಿಮಾವನ್ನು ಗೆದ್ದೇ ಗೆಲ್ಲಿಸಬೇಕು ಅಂತಾ ಟೊಂಕ ಕಟ್ಟಿದ್ದಾರೆ. ಇದಕ್ಕೆ ಭರ್ಜರಿ ಸಿದ್ಧತೆ ಕೂಡ ಆಗುತ್ತಿದೆ.

ದರ್ಶನ್ ನಟನೆಯ ಬಹು ನಿರೀಕ್ಷಿತಾ ‘ಡೆವಿಲ್’ ಸಿನಿಮಾ ಡಿಸೆಂಬರ್11ರ ರಾತ್ರಿಯೇ ತೆರೆಗೆ ಬರುತ್ತಿದೆ. ಈ ಚಿತ್ರ ಅಭಿಮಾನಿಗಳ ಪಾಲಿಗೆ ಬಹಳ ವಿಶೇಷವಾಗಿದ್ದು, ದರ್ಶನ್ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಸಿನಿಮಾ ಗೆಲ್ಲಿಸಬೇಕು ಎನ್ನುವ ಉತ್ಸಾಹದಲ್ಲಿದ್ದಾರೆ.ಅತ್ತ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಮೀ ಡೆವಿಲ್ ಸಿನಿಮಾದ ಪ್ರಮೋಶನ್ ನೋಡಿಕೊಳ್ಳುತ್ತಿದ್ದರೆ, ಇತ್ತ ಅಭಿಮಾನಿಗಳು ಕೂಡ ಅಷ್ಟೇ ಜವಾಬ್ದಾರಿಯುತವಾಗಿ ಸಿನಿಮಾ ಪ್ರಚಾರ ನಡೆಸುತ್ತಿದ್ದಾರೆ.

ಈ ನಡುವೆ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಡಿಸೆಂಬರ್ 5ರಂದು ಬೆಳಗ್ಗೆ 10.05ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಈ ಬಗ್ಗೆ ಡೆವಿಲ್ ಚಿತ್ರ ತಂಡದವರೇ ಅಧೀಕೃತ ಮಾಹಿತಿ ನೀಡಿದ್ದಾರೆ.

ಇನ್ನು ಡೆವಿಲ್ ಸಿನಿಮಾ ಬಿಡುಗಡೆಯ ದಿನ ದರ್ಶನ್ ಅಭಿಮಾನಿಗಳನ್ನು ಭೇಟಿಯಾಗುತ್ತಾರಾ ಎನ್ನುವ ಕುತೂಹಲ ಎಲ್ಲರಿಗೆ. ಡೆವಿಲ್ ರಿಲೀಸ್ ದಿನ ದರ್ಶನ್ ಪೆರೋಲ್ ಮೇಲೆ ಹೊರಗೆ ಬರುತ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ ಈವರೆಗೆ ಈ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಹೊರ ಬಿದ್ದಿಲ್ಲ.
ಒಂದು ವೇಳೆ ಪೆರೋಲ್‌ಗೆ ಮನವಿ ಸಲ್ಲಿಸಿದರೂ ಕೂಡ ದರ್ಶನ್‌ಗೆ ನ್ಯಾಯಾಲಯ ಅನುಮತಿ ನೀಡುವುದು ಅನುಮಾನವೇ ಆಗಿದೆ. ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವುದರಿಂದ ಅದರಲ್ಲೂ ಈ ಹಿಂದೆ ದರ್ಶನ್‌ಗೆ ಜಾಮೀನು ನೀಡಿರುವುದಕ್ಕೆ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್‌ಗೆ ಛೀಮಾರಿ ಹಾಕಿರುವ ಕಾರಣ, ದರ್ಶನ್‌ಗೆ ಕೋರ್ಟ್ ಅನುಮತಿ ನೀಡುವುದು ಬಹುತೇಕ ಅನುಮಾನವಾಗಿದೆ.













