ಬೆಂಗಳೂರು ಸೇರಿದ ಹಾಗೇ ಸಾಕಷ್ಟು ಕಡೆಗಳಲ್ಲಿ ಇತ್ತೀಚೆಗೆ ವೀಲಿಂಗ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಅದರಲ್ಲೂ ವೀಲಿಂಗ್ ಪ್ರಕರಣಗಳಲ್ಲಿ ಹೆಚ್ಚಾಗಿ ೧೮ ವರ್ಷ ಕೆಳಪಟ್ಟವರೇ ಕಂಡುಬರ್ತಿರೋದ್ರುಂದ, ಜೆಜೆ ಆಕ್ಟ್ ಅಡಿ ,ಇಂಥವರ ಪೋಷಕರ ಮೇಲೆ ಕೇಸ್ ಹಾಕಲು ಪೊಲೀಸರು ಮುಂದಾಗಿದ್ದಾರೆ.

ಇನ್ನುಳಿದ ಹಾಗೇ, ಗಾಡಿಗಳು ಪೇಟ್ರೋಲ್ ಇಲ್ಲದೇ ರಸ್ತೆಯಲ್ಲಿ ಗಾಡಿ ನಿಂತು ಹೊದ್ರೆ ಸಂಬಂದ ಪಟ್ಟ ಚಾಲಕನ ಮೇಲೆ ಕೇಸ್ ಹಾಕಲಾಗುತ್ತೆ. ಗಾಡಿಯಲ್ಲಿ ಇರಬೇಕಾದ ಟೂಲ್ಸ್ ಗಳಿಲ್ಲದೇ ಇದ್ರೆ ಅದಕ್ಕೂ ಕೇಸ್ ಹಾಕಲುತ್ತೆ ಎಂದು ತಿಳಿಸಿದ್ದಾರೆ.

ಸೆಕ್ಷನ್ ೨೮೩ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ಸಂಚಾರಿ ಪೊಲೀಸರು ಮುಂದಾಗಿದ್ದರೆ. ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಇಂಥ ಪ್ರಕರಣಗಳಿಂದ ಸಮಸ್ಯೆಯಾಗ್ತಿದೆ. ಹಾಗಾಗಿ ಗಾಡಿಗಳು ರಸ್ತೆ ಮಧ್ಯೆ ಈ ಕಾರಣದಿಂದ ನಿಂತ್ರೆ ಸಂಚಾರಿ ಪೊಲೀಸರು ಕೇಸ್ ದಾಖಲು ಮಾಡಲಿದ್ದಾರೆ.