ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಜಾರ್ಖಂಡ್ನಲ್ಲಿ ಸಂಭವಿಸಿರುವ ವಿದ್ಯುತ್ ಬಿಕ್ಕಟ್ಟನ್ನು ಏನೆಂದು ಕರೆಯುತ್ತಾರೆ? ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಾಕ್ಷಿ, ʻʻ ನಾನು ಜಾರ್ಖಂಡ್ನ ತೆರಗಿ ಪಾವತಿದಾರಳಾಗಿ ನಾನು ಕೇಳ ಬಯಸುವುದೇನೆಂದರೆ, ರಾಜ್ಯದಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಬಿಕ್ಕಟ್ಟು ಏಕೆ ಸಂಭವಿಸುತ್ತಿದೆ ಎಂದು ತಿಳಿಯಲು ನಾನು ಇಚ್ಛಿಸುತ್ತೇನೆ. ನಾವು ಪ್ರಜ್ಞಾಪೂರ್ವಕವಾಗಿ ವಿದ್ಯುತ್ ಉಳಿಸುವ ಕೆಲಸವನ್ನು ಮಾಡುತಿದ್ದೇವೆʼʼ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದ್ಯಂತ ಬಿಸಿಲಿನ ತಾಪ ಜಾಸ್ತಿಯಾಗಿದ್ದು 40 ಡಿಗ್ರಿಗೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದು ರಾಜ್ಯದ ಜನತೆ ಲೋಡ್ ಶೆಡ್ಡಿಂಗ್ನಿಂದ ಬಳಲುತ್ತಿದ್ದಾರೆ. ಈ ಮಧ್ಯೆ ರಾಜ್ಯದ್ಯಂತ ಬಿಸಿಗಾಳಿ ಅಬ್ಬರ ಜೋರಾಗಿದ್ದು ಜನತೆ ಹೈರಾಣಾಗಿದ್ದಾರೆ.
ಈ ಕುರಿತು ಸಭೆ ಸೇರಿದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗು ಇಂಧನ ಸಚಿವ ಆರ್.ಕೆ.ಸಿಂಗ್ ಕಲ್ಲಿದ್ದಲು ಕೊರತೆ ಹಾಗೂ ಪೂರೈಕೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.