• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಾಯು ಮಾಲಿನ್ಯ ನಿಯಂತ್ರಣದಲ್ಲಿ ಭಾರತಕ್ಕೆ ಹೀನಾಯ ಸೋಲೇಕೆ..? ಚೀನಾ ಗೆದ್ದಿದ್ದೇಗೆ..?

ಪ್ರತಿಧ್ವನಿ by ಪ್ರತಿಧ್ವನಿ
November 25, 2025
in Top Story, ಕರ್ನಾಟಕ, ದೇಶ
0
ವಾಯು ಮಾಲಿನ್ಯ ನಿಯಂತ್ರಣದಲ್ಲಿ ಭಾರತಕ್ಕೆ ಹೀನಾಯ ಸೋಲೇಕೆ..? ಚೀನಾ ಗೆದ್ದಿದ್ದೇಗೆ..?
Share on WhatsAppShare on FacebookShare on Telegram
ADVERTISEMENT

ವಾಯು ಮಾಲಿನ್ಯ ಎನ್ನುವುದು ಭಾರತದ ಹಿಂದಿನ..ಇಂದಿನ..ನಾಳೆಯ ಸಮಸ್ಯೆಯಲ್ಲ..ಸರಿ ಸುಮಾರು ಎರಡು ಮೂರು ದಶಕಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಕೂಡ ದೇಶದ ಕೈ ಮೀರಿ ಹೋಗಿರುವ ಬಹುದೊಡ್ಡ ಸವಾಲು .ಸಾವಿರಾರು ಕ್ರಮಗಳನ್ನು ಕೈಗೊಂಡರೂ ಕೂಡ ವಾಯು ಮಾಲಿನ್ಯ ತಡೆಗಟ್ಟುವಲ್ಲಿ ಭಾರತ ಕಳಪೆ ಮಟ್ಟದ ಪ್ರಗತಿಯನ್ನೇ ಸಾಧಿಸುತ್ತಿದೆ.

Shivacharya Swami : ಈ ಮಹಿಳೆಯರ ಕಣ್ಣೀರು ಕಾಣದಾಯಿತೆ ಸರ್ಕಾರಕ್ಕೆ..? #pratidhvani

ಈ ನಿಟ್ಟಿನಲ್ಲಿ ಚೀನಾದ ಬೀಜಿಂಗ್‌ ತೆಗೆದುಕೊಂಡ ನಿರ್ಧಾರಗಳು ಯಶಸ್ವಿಯಾಗಿದೆ. ಜಾಗತಿಕ ಮಟ್ಟಕ್ಕಿಂತ ಅಧಿಕ ವಾಯುಮಲಿನ್ಯ ಹೊಂದಿದ್ದ ಚೀನಾದಲ್ಲಿ ಸದ್ಯ ವಾಯು ಮಾಲಿನ್ಯ ತೀವ್ರ ಇಳಿಕೆಯಾಗಿದೆ. ಆದರೆ ಮಾಲಿನ್ಯ ತಡೆಗೆ ಜಾಗತಿಕ ಅನುದಾನದಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಡೆಗಟ್ಟುವಲ್ಲಿ ಮಾತ್ರ ಕೊನೆಯ ಸ್ಥಾನಕ್ಕಿಳಿಯುತ್ತಿದೆ.

ಈ ತಿಂಗಳ ಆರಂಭದಲ್ಲಿ ದೆಹಲಿಯ ವಾಯು ಮಾಲಿನ್ಯ ಹೆಚ್ಚುತ್ತಿದ್ದಂತೆ ಚೀನಾದ ರಾಯಭಾರಿ ಕಚೇರಿ ವಕ್ತಾರ ಯು ಯೋಂಗ್ X ನಲ್ಲಿ ಎರಡೂ ನಗರಗಳ ವಾಯು ಗುಣಮಟ್ಟ ಹೋಲಿಕೆ ಮಾಡಿದರು. ದೆಹಲಿ: AQI 347 (ಅಪಾಯಕಾರಿ) ಮಟ್ಟದಲ್ಲಿದ್ದರೆ, ಬೀಜಿಂಗ್: AQI 27 (ಉತ್ತಮ) ಸ್ಥಾನದಲ್ಲಿದೆ. ಇಂದು ದೆಹಲಿ ಎದುರಿಸುತ್ತಿರುವ ಪರಿಸ್ಥಿತಿಯನ್ನು 10 ವರ್ಷಗಳ ಹಿಂದೆ ಬೀಜಿಂಗ್‌ದ್ದಾಗಿತ್ತು. ಆದರೆ ಚೀನಾ ಕೇವಲ ಒಂದು ದಶಕದಲ್ಲಿ ಅದನ್ನು ತಿದ್ದಿಕೊಂಡಿದೆ. 2014–2023 ಕಾಲದಲ್ಲಿ ಚೀನಾ PM2.5 ಮಟ್ಟವನ್ನು 41% ಇಳಿಸಿದೆ. ಡಬ್ಲೂಎಚ್‌ಒ ಪ್ರಕಾರ ಇದು ಸುರಕ್ಷಿತ ಮಟ್ಟವಾಗಿದೆ.

 

ಚೀನಾದಲ್ಲಿ ಕ್ಲೀನ್‌ ಸ್ವೀಪ್‌ ಮಾದರಿ ಅನುಸರಿಸಲಾಗಿದ್ದು, 2013ರಲ್ಲಿ ಚೀನಾ ವಾಯು ಮಾಲಿನ್ಯ ವಿರುದ್ಧ ಹೋರಾಟಕ್ಕೆ ಇಳಿದ ಬಳಿಕ ಕಠಿಣವಾದ ಮಾಲಿನ್ಯ ನಿಯಂತ್ರಣ ಕಾನೂನುಗಳನ್ನು ಜಾರಿ ಮಾಡಿದೆ. ಮೊದಲು ಕೈಗಾರಿಕೆಯನ್ನು ನಿಯಂತ್ರಿಸಲಾಯಿತು. ಬಳಿಕ ವಾಹನ ನಿಯಂತ್ರಣ, ಕಟ್ಟುನಿಟ್ಟಿನ ದಂಡಗಳು, ಪಾರದರ್ಶಕ ಮಾನಿಟರಿಂಗ್‌ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಸದ್ಯ ಚೀನಾ ಯಶಸ್ವಿಯಾಗಿದೆ.

ಭಾರತದಲ್ಲಿ ಯಾಕೆ ವಾಯು ಮಾಲಿನ್ಯ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ..?

ವಾಯುಮಾಲಿನ್ಯವು ಮನುಷ್ಯರಲ್ಲಿ ಕ್ಯಾನ್ಸರ್, ಹೃದಯರೋಗ, ಶ್ವಾಸಕೋಶ ಸಮಸ್ಯೆಗಳು ಸೇರಿದಂತೆ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ಪ್ರತಿ ವರ್ಷ ಭಾರತದಲ್ಲಿ 17 ಲಕ್ಷಕ್ಕೂ ಹೆಚ್ಚು ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿದವುಗಳಾಗಿವೆ. ಆದರೂ ಭಾರತದಲ್ಲಿ ವಾಯು ಮಾಲಿನ್ಯ ವಿರುದ್ಧ ಪರಿಣಾಮಕಾರಿ ಯೋಜನೆ ಮತ್ತು ಕಠಿಣ ಕ್ರಮ ಜಾರಿಗೆ ತರುವ ಕೊರತೆಯಿದೆ.

ಭಾರತದಲ್ಲಿ ನೀತಿ ಜಾರಿಗೆ ಏಕರೂಪತೆ ಇಲ್ಲ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಜಾರಿ ಮಾಡಿದ ಅನುದಾನ ಬಳಕೆಯಾಗದೇ ಉಳಿಯುತ್ತವೆ. NCAP (ರಾಷ್ಟ್ರೀಯ ಸ್ವಚ್ಛ ವಾಯು ಯೋಜನೆ) ನಿಧಾನಗತಿಯಲ್ಲಿದೆ. ಅನುದಾನ ಬಳಸುವಲ್ಲಿ ಅಧಿಕಾರಿಗಳ ಜವಾಬ್ದಾರಿತನ, ಕೇಂದ್ರ ಸರ್ಕಾರ ನೀಡಿದ ಸ್ವಚ್ಛ ವಾಯು ಅನುದಾನದ 54% ಹಣ ಉಪಯೋಗಿಸದೇ ಬಾಕಿ ಉಳಿದಿದೆ. ಒಟ್ಟು 20 ರಾಜ್ಯಗಳ 78 ನಗರಗಳು ಹಣ ಬಳಸದೇ ಉಳಿಸಿಕೊಂಡಿವೆ. 15ನೇ ಹಣಕಾಸು ಆಯೋಗ ನೀಡಿದ ನಗರ ಆಧಾರಿತ ಅನುದಾನವೂ ಸಮರ್ಪಕವಾಗಿ ವ್ಯಯವಾಗದೇ ಇರುವುದೇ ಭಾರತ ವಾಯು ಮಾಲಿನ್ಯ ತಡೆಯುವಲ್ಲಿ ಹಿಂದುಳಿಯುವಂತೆ ಮಾಡಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

DKS Meets Mallikarjuna Kharge: ಖರ್ಗೆ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಏರ್ಪೋರ್ಟ್ ಪ್ರಯಾಣ #pratidhvani
Tags: Air PollutionCentral GovernmentChinaDelhiIndia
Previous Post

ವಿಶ್ವಕಪ್ ಗೆದ್ದ ಕರ್ನಾಟಕದ ಕ್ರಿಕೆಟ್ ಪಟುಗಳಿಗೆ 10 ಲಕ್ಷ ನಗದು,ಸರ್ಕಾರಿ ಉದ್ಯೋಗ ಘೋಷಿಸಿದ ಸಿಎಂ

Next Post

ಕ್ರಿಕೆಟ್‌ ಕ್ವೀನ್‌ ಬಾಳಲಿ ಬಿರುಗಾಳಿ? : ಸ್ಮೃತಿ ಮಂದಾನ ಮದುವೆ ಮುಂದೂಡಿದ್ದೇಕೆ..?

Related Posts

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

by ಪ್ರತಿಧ್ವನಿ
May 21, 2026
0

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ...

Read moreDetails
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿ ಹೊಸ ಶಾಕ್..! 43 ಆಸ್ತಿಗಳ ಪಟ್ಟಿ ಬಿಡುಗಡೆ

May 20, 2026
Next Post
ಕ್ರಿಕೆಟ್‌ ಕ್ವೀನ್‌ ಬಾಳಲಿ ಬಿರುಗಾಳಿ? : ಸ್ಮೃತಿ ಮಂದಾನ ಮದುವೆ ಮುಂದೂಡಿದ್ದೇಕೆ..?

ಕ್ರಿಕೆಟ್‌ ಕ್ವೀನ್‌ ಬಾಳಲಿ ಬಿರುಗಾಳಿ? : ಸ್ಮೃತಿ ಮಂದಾನ ಮದುವೆ ಮುಂದೂಡಿದ್ದೇಕೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada