ವಾಯು ಮಾಲಿನ್ಯ ಎನ್ನುವುದು ಭಾರತದ ಹಿಂದಿನ..ಇಂದಿನ..ನಾಳೆಯ ಸಮಸ್ಯೆಯಲ್ಲ..ಸರಿ ಸುಮಾರು ಎರಡು ಮೂರು ದಶಕಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಕೂಡ ದೇಶದ ಕೈ ಮೀರಿ ಹೋಗಿರುವ ಬಹುದೊಡ್ಡ ಸವಾಲು .ಸಾವಿರಾರು ಕ್ರಮಗಳನ್ನು ಕೈಗೊಂಡರೂ ಕೂಡ ವಾಯು ಮಾಲಿನ್ಯ ತಡೆಗಟ್ಟುವಲ್ಲಿ ಭಾರತ ಕಳಪೆ ಮಟ್ಟದ ಪ್ರಗತಿಯನ್ನೇ ಸಾಧಿಸುತ್ತಿದೆ.

ಈ ನಿಟ್ಟಿನಲ್ಲಿ ಚೀನಾದ ಬೀಜಿಂಗ್ ತೆಗೆದುಕೊಂಡ ನಿರ್ಧಾರಗಳು ಯಶಸ್ವಿಯಾಗಿದೆ. ಜಾಗತಿಕ ಮಟ್ಟಕ್ಕಿಂತ ಅಧಿಕ ವಾಯುಮಲಿನ್ಯ ಹೊಂದಿದ್ದ ಚೀನಾದಲ್ಲಿ ಸದ್ಯ ವಾಯು ಮಾಲಿನ್ಯ ತೀವ್ರ ಇಳಿಕೆಯಾಗಿದೆ. ಆದರೆ ಮಾಲಿನ್ಯ ತಡೆಗೆ ಜಾಗತಿಕ ಅನುದಾನದಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಡೆಗಟ್ಟುವಲ್ಲಿ ಮಾತ್ರ ಕೊನೆಯ ಸ್ಥಾನಕ್ಕಿಳಿಯುತ್ತಿದೆ.
ಈ ತಿಂಗಳ ಆರಂಭದಲ್ಲಿ ದೆಹಲಿಯ ವಾಯು ಮಾಲಿನ್ಯ ಹೆಚ್ಚುತ್ತಿದ್ದಂತೆ ಚೀನಾದ ರಾಯಭಾರಿ ಕಚೇರಿ ವಕ್ತಾರ ಯು ಯೋಂಗ್ X ನಲ್ಲಿ ಎರಡೂ ನಗರಗಳ ವಾಯು ಗುಣಮಟ್ಟ ಹೋಲಿಕೆ ಮಾಡಿದರು. ದೆಹಲಿ: AQI 347 (ಅಪಾಯಕಾರಿ) ಮಟ್ಟದಲ್ಲಿದ್ದರೆ, ಬೀಜಿಂಗ್: AQI 27 (ಉತ್ತಮ) ಸ್ಥಾನದಲ್ಲಿದೆ. ಇಂದು ದೆಹಲಿ ಎದುರಿಸುತ್ತಿರುವ ಪರಿಸ್ಥಿತಿಯನ್ನು 10 ವರ್ಷಗಳ ಹಿಂದೆ ಬೀಜಿಂಗ್‌ದ್ದಾಗಿತ್ತು. ಆದರೆ ಚೀನಾ ಕೇವಲ ಒಂದು ದಶಕದಲ್ಲಿ ಅದನ್ನು ತಿದ್ದಿಕೊಂಡಿದೆ. 2014–2023 ಕಾಲದಲ್ಲಿ ಚೀನಾ PM2.5 ಮಟ್ಟವನ್ನು 41% ಇಳಿಸಿದೆ. ಡಬ್ಲೂಎಚ್‌ಒ ಪ್ರಕಾರ ಇದು ಸುರಕ್ಷಿತ ಮಟ್ಟವಾಗಿದೆ.

ಚೀನಾದಲ್ಲಿ ಕ್ಲೀನ್ ಸ್ವೀಪ್ ಮಾದರಿ ಅನುಸರಿಸಲಾಗಿದ್ದು, 2013ರಲ್ಲಿ ಚೀನಾ ವಾಯು ಮಾಲಿನ್ಯ ವಿರುದ್ಧ ಹೋರಾಟಕ್ಕೆ ಇಳಿದ ಬಳಿಕ ಕಠಿಣವಾದ ಮಾಲಿನ್ಯ ನಿಯಂತ್ರಣ ಕಾನೂನುಗಳನ್ನು ಜಾರಿ ಮಾಡಿದೆ. ಮೊದಲು ಕೈಗಾರಿಕೆಯನ್ನು ನಿಯಂತ್ರಿಸಲಾಯಿತು. ಬಳಿಕ ವಾಹನ ನಿಯಂತ್ರಣ, ಕಟ್ಟುನಿಟ್ಟಿನ ದಂಡಗಳು, ಪಾರದರ್ಶಕ ಮಾನಿಟರಿಂಗ್‌ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಸದ್ಯ ಚೀನಾ ಯಶಸ್ವಿಯಾಗಿದೆ.
ಭಾರತದಲ್ಲಿ ಯಾಕೆ ವಾಯು ಮಾಲಿನ್ಯ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ..?
ವಾಯುಮಾಲಿನ್ಯವು ಮನುಷ್ಯರಲ್ಲಿ ಕ್ಯಾನ್ಸರ್, ಹೃದಯರೋಗ, ಶ್ವಾಸಕೋಶ ಸಮಸ್ಯೆಗಳು ಸೇರಿದಂತೆ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ಪ್ರತಿ ವರ್ಷ ಭಾರತದಲ್ಲಿ 17 ಲಕ್ಷಕ್ಕೂ ಹೆಚ್ಚು ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿದವುಗಳಾಗಿವೆ. ಆದರೂ ಭಾರತದಲ್ಲಿ ವಾಯು ಮಾಲಿನ್ಯ ವಿರುದ್ಧ ಪರಿಣಾಮಕಾರಿ ಯೋಜನೆ ಮತ್ತು ಕಠಿಣ ಕ್ರಮ ಜಾರಿಗೆ ತರುವ ಕೊರತೆಯಿದೆ.

ಭಾರತದಲ್ಲಿ ನೀತಿ ಜಾರಿಗೆ ಏಕರೂಪತೆ ಇಲ್ಲ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಜಾರಿ ಮಾಡಿದ ಅನುದಾನ ಬಳಕೆಯಾಗದೇ ಉಳಿಯುತ್ತವೆ. NCAP (ರಾಷ್ಟ್ರೀಯ ಸ್ವಚ್ಛ ವಾಯು ಯೋಜನೆ) ನಿಧಾನಗತಿಯಲ್ಲಿದೆ. ಅನುದಾನ ಬಳಸುವಲ್ಲಿ ಅಧಿಕಾರಿಗಳ ಜವಾಬ್ದಾರಿತನ, ಕೇಂದ್ರ ಸರ್ಕಾರ ನೀಡಿದ ಸ್ವಚ್ಛ ವಾಯು ಅನುದಾನದ 54% ಹಣ ಉಪಯೋಗಿಸದೇ ಬಾಕಿ ಉಳಿದಿದೆ. ಒಟ್ಟು 20 ರಾಜ್ಯಗಳ 78 ನಗರಗಳು ಹಣ ಬಳಸದೇ ಉಳಿಸಿಕೊಂಡಿವೆ. 15ನೇ ಹಣಕಾಸು ಆಯೋಗ ನೀಡಿದ ನಗರ ಆಧಾರಿತ ಅನುದಾನವೂ ಸಮರ್ಪಕವಾಗಿ ವ್ಯಯವಾಗದೇ ಇರುವುದೇ ಭಾರತ ವಾಯು ಮಾಲಿನ್ಯ ತಡೆಯುವಲ್ಲಿ ಹಿಂದುಳಿಯುವಂತೆ ಮಾಡಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.












