ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಡಿ ಗ್ಯಾಂಗ್ನ ಮೂವರು ಆರೋಪಿಗಳು ಜೈಲಿನಿಂದ ರಿಲೀಸ್ ಆಗಿದ್ದಾರೆ.. ತುಮಕೂರು ಜೈಲಿನಿಂದ ಆರೋಪಿಗಳಾದ ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ನಾಯ್ಕ್ ರಿಲೀಸ್ ಆಗಿದ್ದಾರೆ.. ಮೂವರು ಆರೋಪಿಗಳಿಗೆ ಸೆಪ್ಟೆಂಬರ್ 23ರಂದು ಬೇಲ್ ಮಂಜೂರು ಆಗಿತ್ತು.. ಜಾಮೀನು ಸಿಕ್ಕಿದ್ರೂ ಶ್ಯೂರಿಟಿ ಪ್ರಕ್ರಿಯೆ ಮುಗಿಸಲು ಸಾಧ್ಯವಾಗದೆ ಜೈಲಿನಲ್ಲೇ ಉಳಿಯಬೇಕಾಗಿತ್ತು.. ಇಂದು ಶ್ಯೂರಿಟಿ ಪ್ರಕ್ರಿಯೆ ಮುಗಿದ ಹಿನ್ನೆಲೆ ಆರೋಪಿಗಳು ಜೈಲಿನಿಂದ ರಿಲೀಸ್ ಆಗಿದ್ದಾರೆ.
ಬೇಲ್ ಸಿಕ್ಕ 10 ದಿನಗಳ ಬಳಿಕ ಜೈಲಿನಿಂದ ರಿಲೀಸ್ ಬಳಿಕ ಮಾತನಾಡಿರುವ ಆರೋಪಿಗಳು ಬೇಲ್ ಶ್ಯೂರಿಟಿ ಪ್ರಕ್ರಿಯೆ ಪೂರ್ಣ ಆಗದ ಕಾರಣಕ್ಕೆ ಬಿಡುಗಡೆ ತಡವಾಗಿತ್ತು ಎಂದಿದ್ದಾರೆ. ಆದರೆ ಪ್ರಕರಣದ ಬಗ್ಗೆ ಯಾವುದೇ ಮಾತನ್ನೂ ಆಡಿಲ್ಲ. ಸ್ನೇಹಿತ ತಂದಿದ್ದ ಇನ್ನೋವಾ ಕಾರು ಹತ್ತಿಕೊಂಡು ಆರೋಪಿಗಳು ತೆರಳಿದ್ದಾರೆ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಈ ಮೂವರೂ ಆರೋಪಿಗಳು ಹೆಣವನ್ನು ಸಾಗಾಟ ಮಾಡಿದ್ದರು ಅಷ್ಟೆ. ಕೊಲೆಗೂ ಇವರಿಗೂ ಯಾವುದೇ ಸಂಬಂಧ ಇರಲಿಲ್ಲ ಅನ್ನೋ ಕಾರಣಕ್ಕೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.